Advertisement
ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಿರುವ ಪುರಾತನ ಚರ್ಚ್ ತೇಲುವ ಹಡಗಿನಂತೆ ಗೋಚರಿಸುತ್ತಿದೆ. ಈ ಹಿಂದೆ ಕೆಲವು ಚಲನಚಿತ್ರಗಳ ಚಿತ್ರೀಕರಣದ ತಾಣ ವಾಗಿದ್ದ ಚರ್ಚ್ ಈಗ ಪ್ರವಾಸಿಗರ ತಾಣವಾಗಿದೆ. ಜಲಾಶಯದ ನೀರು ಇಳಿದ ಬೇಸಿಗೆಯ ಸಂದರ್ಭದಲ್ಲಿ ಯುವಜನರ ಮೋಜಿನ ತಾಣವಾಗುವ ಶೆಟ್ಟಿಹಳ್ಳಿ ಹಳೆಯ ಚರ್ಚ್ ಪರಿಸರ ಮಳೆಗಾಲದಲ್ಲಿ ಜಲಾಶಯ ಭರ್ತಿಯಾದ ಸಂದರ್ಭದಲ್ಲಿ ಪ್ರವಾಸಿಗರನ್ನು ಸೆಳೆಯುತ್ತಿದೆ.
Related Articles
Advertisement
ಹೇಮಾವತಿ ಜಲಾಶಯದಲ್ಲಿ ಕಳೆದ 36 ವರ್ಷಗಳಿಂದ ನೀರು ನಿಲ್ಲಿಸಲಾಗುತ್ತಿದೆ. ಅಷ್ಟು ವರ್ಷಗಳಿಂದಲೂ ಶೆಟ್ಟಿಹಳ್ಳಿಯಚರ್ಚ್ ಕೆಲವು ವರ್ಷಗಳ ಮಳೆಗಾಲದಲ್ಲಿ ಭಾಗಶಃ, ಜಲಾಶಯ ಭರ್ತಿಯಾದ ವರ್ಷ ದಲ್ಲಿ ಬಹುಪಾಲು ಮುಳುಗುತ್ತದೆ. ಆದರೂ ಚರ್ಚ್‌ನ ಗೋಡೆಗಳು, ಕಮಾನುಗಳು ಮಾತ್ರ ಕುಸಿದು ಬಿದ್ದಿಲ್ಲ. ಇದು ಅಂದಿನ ಗುಣ ಮಟ್ಟದ ಕಾಮಗಾರಿಗೆ
ಸಾಕ್ಷಿಯಾದಂತಿದೆ. ಬೇಸಿಗೆ ಕಾಲದಲ್ಲಿ ನೀರು ಇಳಿದ ನಂತರ ಚರ್ಚ್ ಸುತ್ತಾಡಿ ಬರಬಹುದು. ಈಗ ನೀರು ತುಂಬಿರುವುದರಿಂದ ದೂರದಿಂದಲೇ ಚರ್ಚ್‌ನ ತುದಿಯ ಗೋಡೆಗಳು ಜಲ ರಾಶಿಯ ನಡುವೆ ಮಳುಗುತ್ತಿರುವ ಹಡಗಿನಂತಹ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು.