Advertisement

ಕಡ್ಡಾಯ ಮತದಾನದಿಂದ ಯೋಗ್ಯ ನಾಯಕನ ಆಯ್ಕೆ

01:44 PM Apr 08, 2019 | Team Udayavani |
ಹಾನಗಲ್ಲ: ದೇಶದ ಪ್ರಗತಿ ಪ್ರಜಾಪ್ರಭುತ್ವದ ಆಧಾರದಲ್ಲಿ ನಿರ್ಧಾರವಾಗುತ್ತದಲ್ಲದೆ, ಪ್ರತಿಯೊಬ್ಬ ಪ್ರಜೆ ಮತದಾನ ಮಾಡಿದರೆ ಮಾತ್ರ ಉತ್ತಮ ನಾಯಕನ ಆಯ್ಕೆ ಮಾಡಲು ಸಾಧ್ಯ ಎಂದು ಹಾನಗಲ್ಲ ತಾಲೂಕಿನ ಸೆಕ್ಟರ್‌ ಅಧಿಕಾರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎಂ. ಬೇವಿನಮರದ ಮನವಿ ಮಾಡಿದರು.
ತಾಲೂಕಿನ ಇನಾಮಯಲ್ಲಾಪುರ ಮತ್ತು ಹನುಮಾಪುರ ಗ್ರಾಮಗಳಲ್ಲಿ ಮತದಾರರ ಸಭೆಯಲ್ಲಿ ವಿವಿಪ್ಯಾಟ್‌ ಪ್ರಾತ್ಯಕ್ಷಿಕೆ ನೀಡಿ ಮತದಾರರನ್ನುದ್ದೇಶಿಸಿ ಮಾತನಾಡಿದ ಅವರು, ಮತದಾರರು ಮತದಾನದಿಂದ ದೂರ ಉಳಿಯುವುದು, ಮತದಾನ ನಿರಾಕರಿಸುವುದು, ಉಪೇಕ್ಷಿಸುವುದು ಪ್ರಜಾಪ್ರಭುತ್ವ ವಿರೋಧಿ ಸಿದಂತೆ. ಜಗತ್ತಿನಲ್ಲಿಯೇ ದೊಡ್ಡದಾದ ಪ್ರಜಾಪ್ರಭುತ್ವ ಹೊಂದಿರುವ ರಾಷ್ಟ್ರ ನಮ್ಮದು. ಅದನ್ನು ಗೌರವಿಸಿ ಸುಭದ್ರಗೊಳಿಸಬೇಕಾದರೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತ ಚಲಾಯಿಸಬೇಕು. ನೌಕರ ವರ್ಗದವರು ತಮ್ಮ ತಮ್ಮ ವ್ಯಾಪ್ತಿಯ ಮತದಾರರು ಕಡ್ಡಾಯವಾಗಿ ಮತ ಚಲಾಯಿಸುವಂತೆ ಮನವೊಲಿಸಿ ಮತದಾನದ ಮೂಲಕ ಪ್ರಜಾಪ್ರಭುತ್ವ ಬಲಗೊಳಿಸಬೇಕು ಎಂದು ಸಲಹೆ ನೀಡಿದರು.
ಕಲ್ಲಾಪುರ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಬಾಯಕ್ಕ ಕೋಳಿ ಮಾತನಾಡಿ, ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೇ ತಮ್ಮ ಸ್ವಂತ ವಿವೇಚನೆಯಿಂದ ಮತ ಚಲಾಯಿಸಬೇಕು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮತದಾನ ಹೆಚ್ಚಾಗುವಂತೆ ಸಹಕರಿಸಬೇಕು ಎಂದು ಅಭಿಪ್ರಾಯಪಟ್ಟರು. ಸೆಕ್ಟರ್‌ ಅಧಿಕಾರಿ ಬಿ.ಎಂ. ಬೇವಿನಮರದ ನೆರೆದಿದ್ದ ಅಪಾರ ಸಂಖ್ಯೆಯ ಮತದಾರರಿಗೆ ಕಡ್ಡಾಯ ಮತದಾನ ಮಾಡುವ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು ಮತ್ತು ಎಲ್ಲ ಮತದಾರರಿಗೆ ವಿವಿಪ್ಯಾಟ್‌ ಯಂತ್ರದ ಕುರಿತು ಪ್ರಾತ್ಯಕ್ಷಿಕೆ ನೀಡುವ ಮೂಲಕ ಮತದಾನ ಪ್ರಕ್ರಿಯೆ ಕುರಿತು ತಿಳಿಹೇಳಿದರು.
ಸಿಆರ್‌ಪಿ ಕುಮಾರ ಗೋಣಿಮಠ, ಮುಖ್ಯೋಪಾಧ್ಯಾಯರಾದ ಪಿ.ಐ. ಬುಡ್ಡನವರ, ಸಿ.ಎಫ್‌. ಡೊಳ್ಳಿನ, ಬಿಎಲ್‌ಒ ವಿ.ಆರ್‌. ಬುಳ್ಳಾಪುರ, ಆಶಾ ಕಾರ್ಯಕರ್ತೆಯರಾದ ಗೌರಮ್ಮ ಗುಡ್ಡೇರ, ರೇಣುಕಾ ಬಿದರಕೊಪ್ಪ, ಅಂಗನವಾಡಿ ಕಾರ್ಯಕರ್ತೆರಾದ
ಶಿವಲೀಲಾ ಸೋಮಸಾಗರ, ಅನಿತಾ ಬಿದರಕೊಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರು, ಗ್ರಾಪಂ ಸಿಬ್ಬಂದಿಗಳಾದ ಅಬ್ದುಲ್‌ರಜಾಕ್‌ ಗೊಂದಿ, ಆನಂದ ಕುನ್ನೂರ ಹಾಗೂ ನಾಗರಿಕರು ಉಪಸ್ಥಿತರಿದ್ದರು.
ನಗರಸಭೆ ಆವರಣದಲ್ಲಿ ಮತದಾನ ಜಾಗೃತಿ ಹಾವೇರಿ: ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಆಶ್ರಯದಲ್ಲಿ
ನಗರಸಭೆ ಆವರಣದಲ್ಲಿ ನಗರಸಭೆ ಪೌರ ಕಾರ್ಮಿಕರು, ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕರಿಗೆ ಮತದಾರರ
ಜಾಗೃತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ. ಲೀಲಾವತಿ ಮಾತನಾಡಿ, ಪೌರಕಾರ್ಮಿಕರಿಗೆ ಮತ್ತು ನಗರಸಭೆ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಮತದಾನದ ಪ್ರತಿಜ್ಞಾವಿಧಿ ಬೋಧಿಸಿದರು.
ನಗರಸಭೆ ವಾಹನಗಳ ಮೂಲಕ ಸ್ಟಿಕ್ಕರ್ ಹಾಗೂ ಕರಪತ್ರಗಳನ್ನು ಅಂಟಿಸಿ ಹಾಡಿನ ಮೂಲಕ ಜಾಗೃತಿ ಮೂಡಿಸಲು
ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್‌ ಕಾರ್ಯನಿರ್ವಾಹಕ ಅಧಿಕಾರಿ ಅನ್ನಪೂರ್ಣ ಮುದುಕಮ್ಮನವರ
ಮಾತನಾಡಿ, ಮತದಾನ ಅತ್ಯಂತ ಪವಿತ್ರ ಹಕ್ಕು. ಪ್ರಜಾಪಭುತ್ವದ ಬಲವರ್ಧನೆಗಾಗಿ ಎಲ್ಲರೂ ಕಡ್ಡಾಯವಾಗಿ ಮತದಾನ
ಮಾಡಬೇಕು. ಮತದಾನದಲ್ಲಿ ಭಾಗವಹಿಸುವುದು ಪ್ರಜೆಗಳ ಆದ್ಯ ಕರ್ತವ್ಯ ಎಂದರು.
ಜಿಲ್ಲಾ ವಯಸ್ಕರ ಶಿಕ್ಷಣ ಅಧಿಕಾರಿ ಎಂ.ಎಚ್‌. ಪಾಟೀಲ್‌, ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ಶಿವಣ್ಣ ಹಾಗೂ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕಿ ಪುಷ್ಪಾ ಬಿದರಿ ಹಾಗೂ ಸೆಕ್ಟರ್‌ ಅಧಿಕಾರಿ ಐ.ಎಚ್‌. ಇಚ್ಚಂಗಿ, ಸಿ.ಎಸ್‌. ಭಗವಂತಗೌಡ್ರ, ತಾಲೂಕು ಸಾಕ್ಷರ ಸಂಯೋಜಕ ಎನ್‌.ಎಚ್‌. ಕರೇಗೌಡ್ರ ಹಾಗೂ ಇನ್ನಿತರರು ಇದ್ದರು.
Advertisement

Udayavani is now on Telegram. Click here to join our channel and stay updated with the latest news.

Next