Advertisement

ಪಿಒಕೆ ಪ್ರಸ್ತಾವಿಸಿದ ಚೀನ ನೂತನ ರಾಯಭಾರಿ

02:27 AM Jul 21, 2019 | sudhir |

ಬೀಜಿಂಗ್‌: ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ಮೂಲಕ ಹಾದುಹೋಗುವ ಚೀನ-ಪಾಕಿಸ್ಥಾನ ಎಕನಾಮಿಕ್‌ ಕಾರಿಡಾರ್‌ಗೆ ಭಾರತದ ಆಕ್ಷೇಪವನ್ನು ಪರೋಕ್ಷವಾಗಿ ಉಲ್ಲೇಖೀಸಿದ ಭಾರತಕ್ಕೆ ಚೀನದ ರಾಯಭಾರಿ ಸನ್‌ ವೀಡಾಂಗ್‌, ವೈಯಕ್ತಿಕ ಪ್ರಕರಣ ಗಳನ್ನು ಬದಿಗಿಟ್ಟು ಉಭಯ ದೇಶಗಳ ಸಹಕಾರ ಸಂಬಂಧವನ್ನು ಮುಂದುವರಿಸಬೇಕು ಎಂದಿದ್ದಾರೆ.

Advertisement

ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅಕ್ಟೋಬರ್‌ನಲ್ಲಿ ಭಾರತಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ವೀಡಾಂಗ್‌ ಹೇಳಿಕೆ ಮಹತ್ವ ಪಡೆದಿದೆ. ಎರಡೂ ದೊಡ್ಡ ದೇಶಗಳ ನಾಯಕರು ಸಭೆ ಸೇರಿದಾಗ ಮಹತ್ವ ಒಪ್ಪಂದ ಕೈಗೊಳ್ಳುವ ನಿರೀಕ್ಷೆಯಿದೆ. ಕಳೆದ ವರ್ಷ ವುಹಾನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕ್ಸಿ ಭೇಟಿ ಮಾಡಿದಾಗ ಮಹತ್ವದ ಒಪ್ಪಂದಗಳು ನಡೆದಿದ್ದವು. ಅಷ್ಟೇ ಅಲ್ಲ, ಉಭಯ ದೇಶಗಳ ಸಂಬಂಧ ಸುಧಾರಣೆಯೂ ಆಗಿತ್ತು. ಮೂಲಗಳ ಪ್ರಕಾರ ವಾರಾಣಸಿಯಲ್ಲಿ ಕ್ಸಿ ಮತ್ತು ಮೋದಿ ಮಾತುಕತೆ ನಡೆಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next