Advertisement

ಎಸ್ಸೆಸ್ಸೆಲ್ಸಿ ಫಲಿತಾಂಶಕ್ಕಾಗಿ ಎರಡು ದಿನ ಕಾದ ಮಕ್ಕಳು!

01:15 PM May 03, 2019 | Suhan S |

ಬಾಗಲಕೋಟೆ: ಪ್ರಸಕ್ತ ಎಸ್ಸೆಸ್ಸೆಲ್ಸಿ ಫಲಿತಾಂಶ ರಾಜ್ಯಾದ್ಯಂತ ಎರಡು ದಿನಗಳ ಹಿಂದೆಯೇ ಬಹಿರಂಗಗೊಂಡರೂ ಇಲ್ಲಿನ ಆದರ್ಶ ವಿದ್ಯಾಲಯದ 35 ವಿದ್ಯಾರ್ಥಿಗಳು ತಮ್ಮ ಫಲಿತಾಂಶಕ್ಕಾಗಿ ಎರಡು ದಿನ ಕಾಯಬೇಕಾದ ಪರಿಸ್ಥಿತಿ ಎದುರಾಗಿತ್ತು. ಎರಡು ದಿನಗಳಿಂದ ನವನಗರದ ಆದರ್ಶ ವಿದ್ಯಾಲಯಕ್ಕೆ ಅಲೆದಾಡಿದಾಗ ಶಿಕ್ಷಕರು, ತಾಂತ್ರಿಕ ಸಮಸ್ಯೆ ಆಗಿದೆ. ಸದ್ಯದಲ್ಲೇ ಫಲಿತಾಂಶ ಬರುತ್ತದೆ ಎಂದು ಹೇಳುತ್ತಲೇ ಇದ್ದರು. ಎರಡು ದಿನಗಳಾದರೂ ಫಲಿತಾಂಶ ಬಾರದ ಹಿನ್ನೆಲೆಯಲ್ಲಿ 35 ಜನ ವಿದ್ಯಾರ್ಥಿಗಳು ಹಾಗೂ ಪಾಲಕರು ಗುರುವಾರ ಮಧ್ಯಾಹ್ನ ದಿಢೀರ್‌ ಪ್ರತಿಭಟನೆ ನಡೆಸಿದರು. ಇದೇ ವೇಳೆ ವಿದ್ಯಾರ್ಥಿಗಳು ತಮ್ಮ ಫಲಿತಾಂಶಕ್ಕಾಗಿ ಶಿಕ್ಷಕರ ಎದುರು ಕಣ್ಣೀರು ಹಾಕಿದರು. ಈ ಘಟನೆ ನಡೆದ ಮೂರು ಗಂಟೆಯಲ್ಲಿ ಫಲಿತಾಂಶ ಕೂಡ ಬಂತು. ಬೆಳಗ್ಗೆ ಕಣ್ಣೀರು ಹಾಕಿ, ಪ್ರತಿಭಟನೆ ನಡೆಸಿದ್ದ ಮಕ್ಕಳು ಸಂಜೆಯ ಹೊತ್ತಿಗೆ ಖುಷಿಪಟ್ಟರು. ಆದರೆ, ಕೆಲವು ವಿದ್ಯಾರ್ಥಿಗಳು ನಾವು ನಿರೀಕ್ಷಿಸಿದ್ದ ಅಂಕ ಬಂದಿಲ್ಲ. ಹೀಗಾಗಿ ಮರು ಮೌಲ್ಯಮಾಪಕನಕ್ಕೆ ಹಾಕುತ್ತೇವೆ ಎಂದರು.

Advertisement

ರಾಜ್ಯದಲ್ಲಿ ಎರಡು ದಿನಗಳ ಹಿಂದೆಯೇ ಫಲಿತಾಂಶ ಬಂದಿದೆ. ಆದರೆ, ಆದರ್ಶ ವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ ನಮ್ಮ ಪುತ್ರಿಯ ಫಲಿತಾಂಶ ನೋಡಲು ಇಂಟರ್‌ನೆಟ್‌ಗೆ ಹೋದರೆ ಬರುತ್ತಿರಲಿಲ್ಲ. ಶಿಕ್ಷಕರು, ಅಧಿಕಾರಿಗಳ ಗಮನಕ್ಕೆ ತಂದಿದ್ದೇವು. ಪ್ರತಿಭಟನೆಯೂ ಮಾಡಿದ್ದೇವೆ. ಗುರುವಾರ ಸಂಜೆ ಫಲಿತಾಂಶ ಬಂದಿದೆ. ಆದರೆ, ನಮ್ಮ ಪುತ್ರಿ ಸೃಷ್ಟಿ ಪಾಟೀಲಗೆ ಶೇ.67.84 ಫಲಿತಾಂಶ ಬಂದಿದ್ದು, ಅದನ್ನು ಮರು ಮೌಲ್ಯಮಾಪನಕ್ಕೆ ಹಾಕಲು ಸಿದ್ಧತೆ ಮಾಡಿದ್ದೇವೆ.- ಶಿವನಗೌಡ ಪಾಟೀಲ,ವಿದ್ಯಾರ್ಥಿ ಸೃಷ್ಟಿ ಪಾಟೀಲ ತಂದೆ

ನವನಗರದ ಆದರ್ಶ ವಿದ್ಯಾಲಯ ಶೇ.100 ಫಲಿತಾಂಶ ಬಂದಿದೆ. ಆದರೆ, 35 ವಿದ್ಯಾರ್ಥಿಗಳ ವೈಯಕ್ತಿಕ ಫಲಿತಾಂಶ ಶಾಲೆಗೆ ಬಂದಿರಲಿಲ್ಲ. ಈ ಕುರಿತು ಇಲಾಖೆಯ ನಿರ್ದೇಶಕರೊಂದಿಗೆ ಮಾತನಾಡಿದ್ದು, ಗುರುವಾರ ಸಂಜೆಯೇ ಫಲಿತಾಂಶ ಬಂದಿದೆ.-ಬಿ.ಎಚ್. ಗೋನಾಳ, ಡಿಡಿಪಿಐ
Advertisement

Udayavani is now on Telegram. Click here to join our channel and stay updated with the latest news.

Next