ಮಕ್ಕಳಿಗೆ ಆಪ್ತವೆನಿಸುವ “ಪ್ಲೇ ಹೋಮ್‌ಗಳ’ ಮಾದರಿಯಲ್ಲಿ ಅವು ಕಾರ್ಯನಿರ್ವಹಿಸಲಿವೆ.
Advertisement
ದೌರ್ಜನ್ಯಕ್ಕೆ ಒಳಗಾಗಿ ಈಗಾಗಲೇ ಮಾನಸಿಕವಾಗಿ ಕುಗ್ಗಿರುವ ಸಂತ್ರಸ್ತ ಮಕ್ಕಳ ಮನಸ್ಸಿಗೆ ಕೋರ್ಟ್‌ನ ವಿಚಾರಣೆ ಮತ್ತಷ್ಟು ದುಷ್ಪರಿಣಾಮ ಬೀರದಂತೆ ನೋಡಿಕೊಳ್ಳುವ ಸಲುವಾಗಿ ಮಕ್ಕಳ ಸ್ನೇಹಿ ಕೋರ್ಟ್‌ಗಳನ್ನು ರೂಪಿಸಲಾಗಿದೆ. ವಿಚಾರಣೆಗೆ ಬರುವ ಸಂತ್ರಸ್ತ ಮಕ್ಕಳು ಹಾಗೂ ಪೋಷಕರಿಗೆ ಪ್ರತ್ಯೇಕ ಕೊಠಡಿ, ಆಪ್ತವೆನಿಸುವ ವಾತಾವರಣ ರೂಪಿಸಲು ಗೋಡೆಗಳ ಮೇಲೆ ಚಿತ್ರಪಟಗಳು, ಆಟವಾಡಲು ಆಟಿಕೆ ವಸ್ತುಗಳು, ಹಸಿವಾದರೆ ತಿಂಡಿ, ಸಿಹಿ ತಿನಿಸುಗಳು, ಹಾಲು ಕೊಡುವ ಕ್ಯಾಂಟೀನ್ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ.
ಕೋರ್ಟ್ ಎಂಬ ಸಂಗತಿ ಬಾರದ ಹಾಗೆ ನೋಡಿ ಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಟಿ ಸಿವಿಲ್ ಕೋರ್ಟ್‌ನ 5ನೇ ಮಹಡಿಯಲ್ಲಿರುವ 51, 54, 55ನೇ ಕೋರ್ಟ್ ಹಾಲ್‌ಗಳಲ್ಲಿ ಪೋಕೊÕà ಪ್ರಕರಣಗಳ ವಿಚಾರಣೆ ನಡೆಸಲಾಗುತ್ತಿದೆ. ಇದೀಗ ಹೊಸದಾಗಿ ರೂಪುಗೊಂಡಿರುವ ಮಕ್ಕಳ ಸ್ನೇಹಿ ಎರಡು ಕೋರ್ಟ್‌ಗಳಲ್ಲಿ ಬೆಂಗಳೂರು ನಗರ ಜಿಲ್ಲೆಗೆ ಸಂಬಂಧಿಸಿದ 750ಕ್ಕೂ ಅಧಿಕ ಹಾಗೂ ಬೆಂ.ಗ್ರಾಮಾಂತರದ 250ಕ್ಕೂ ಹೆಚ್ಚು ಪ್ರಕರಣಗಳ
ವಿಚಾರಣೆ ನಡೆಯಲಿದೆ. ಇದರಿಂದ ಪ್ರಕರಣಗಳ ಇತ್ಯರ್ಥ ಚುರುಕುಗೊಳ್ಳಲಿದ್ದು, ಆರೋಪಿಗಳಿಗೆ ಶಿಕ್ಷೆಯಾಗಲಿದೆ ಎಂದು ಕೋರ್ಟ್ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.
Related Articles
Advertisement