Advertisement

Superintendent of Agrahara Jail: ವರ್ಗವಾದರೂ ಜೈಲು ತೊರೆಯದ ಅಧಿಕಾರಿ!

11:50 AM Aug 27, 2024 | Team Udayavani |

ಬೆಂಗಳೂರು: ದರ್ಶನ್‌ಗೆ ವಿಶೇಷ ಆತಿಥ್ಯ ನೀಡಿದ ಆರೋಪದಲ್ಲಿ ಅಮಾನತುಗೊಂಡಿರುವ ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧೀಕ್ಷಕ ವಿ.ಶೇಷಮೂರ್ತಿ ಅವರನ್ನು ಕಳೆದ ತಿಂಗಳೇ ಮೈಸೂರು ಜೈಲಿಗೆ ವರ್ಗಾವಣೆ ಮಾಡಲಾಗಿತ್ತು. ಆದರೆ ಶೇಷಮೂರ್ತಿ ಬಿಡುಗಡೆಗೊಳ್ಳದೆ ರಾಜಕೀಯ ಒತ್ತಡ ತಂದು ಇಲ್ಲಿಯೇ ಮುಂದುವರಿದಿದ್ದ ಆರೋಪ ಕೇಳಿ ಬಂದಿದೆ.

Advertisement

ಶೇಷಮೂರ್ತಿ ವಿರುದ್ಧ ಈ ಹಿಂದೆ ಕೆಲಆರೋಪ ಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಜುಲೈ 5 ರಂದು  ವರ್ಗಾವಣೆ ಮಾಡಲಾಗಿತ್ತು. ಅಲ್ಲಿನ ಮುಖ್ಯ ಅಧೀಕ್ಷಕ ರಮೇಶ್‌ ಅವರಿಗೆ ಯಾವುದೇ ಸ್ಥಳ ತೋರಿಸಿರಲಿಲ್ಲ. ಆದರೆ ಶೇಷಮೂರ್ತಿ ರಾಜಕೀಯ ಒತ್ತಡ ತಂದು ಇಲ್ಲಿಯೇ ಮುಂದುವರಿದಿದ್ದಾರೆ. ಸರ್ಕಾರದಿಂದ ಯಾವುದೇ ಮೂಮೆಂಟ್‌ ಆರ್ಡರ್‌ ಬಾರದ ಹಿನ್ನೆಲೆಯಲ್ಲಿ ಇಲ್ಲಿಯೇ ಮುಂದುವರಿದಿದ್ದೇನೆ ಎಂದು ಸಹೋದ್ಯೋಗಿಗಳ ಬಳಿ ಶೇಷಮೂರ್ತಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ದರ್ಶನ್‌, ರೌಡಿಗಳಿಗೆ ಆದ್ಯತೆ ನೀಡಿರುವುದು ಶೇಷಮೂರ್ತಿ ಕಾರ್ಯವೈಖರಿ ಪ್ರಶ್ನಿಸುವಂತಿದೆ.

ದರ್ಶನ್‌ ಇದ್ದ ಬ್ಯಾರಕ್‌ಗೆ ಬಂದ ನಾಗ: ವಿಚಾರಣಾಧೀನ ಕೈದಿಗಳಿರುವ ಬ್ಯಾರಕ್‌ಗಳ ಪೈಕಿ ವಿಲ್ಸನ್‌ ಗಾರ್ಡನ್‌ ನಾಗ 1ನೇ ಬ್ಯಾರಕ್‌ನಲ್ಲಿದ್ದು, ದರ್ಶನ್‌ನನ್ನು 3ನೇ ಬ್ಯಾರಕ್‌ನಲ್ಲಿ ಇಡಲಾಗಿದೆ. 1ನೇ ಬ್ಯಾರಕ್‌ನಿಂದ 3ನೇ ಬ್ಯಾರಕ್‌ಗೆ ತಲುಪಲು ಕನಿಷ್ಠ 10 ನಿಮಿಷ ಬೇಕಾಗುತ್ತದೆ. ದರ್ಶನ್‌ಗಾಗಿ ನಾಗ 1ನೇ ಬ್ಯಾರಕ್‌ನಿಂದ 3ನೇ ಬ್ಯಾರಕ್‌ಗೆ ಬಂದು ತಮ್ಮ ಸಹಚರರ ಜತೆ ಸೇರಿ ಟೀ ಪಾರ್ಟಿ ಮಾಡಿದ್ದಾನೆ. ಅಲ್ಲದೆ ಒಬ್ಬ ಕೈದಿಯನ್ನು ವಾರಕ್ಕೆ ಇಂತಿಷ್ಟೇ ವ್ಯಕ್ತಿಗಳ ಭೇಟಿಗೆ ಮಾತ್ರ ಅವಕಾಶ ನೀಡಬೇಕು ಎಂಬ ನಿಯಮವಿದೆ. ಆದರೂ ಹೆಚ್ಚುವರಿ ಮಂದಿಯನ್ನು ಭೇಟಿಗೆ ಅವಕಾಶ ನೀಡಲಾಗಿದೆ. ಈ ಎಲ್ಲ ಬೆಳವಣಿಗೆಗಳು ಜೈಲಿನ ಮುಖ್ಯ ಅಧೀಕ್ಷ ಶೇಷಮೂರ್ತಿ ಸಮ್ಮತಿಯಿಂದಲೇ ನಡೆದಿದೆ ಎಂದು ಹೇಳಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next