ಬೆಂಗಳೂರು: ಇನ್ನೇನು ಕರ್ನಾಟಕದಲ್ಲಿ ಶೀಘ್ರವೇ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇದಕ್ಕೂ ಮುನ್ನವೇ ರಾಜ್ಯದ ಮತದಾರ ತನ್ನ “ಮತದಾಳ’ ಬಹಿರಂಗ ಮಾಡಿದ್ದಾನೆ. ಎಡಿಆರ್ ಮತ್ತು ದಕ್ಷ್ ಸಂಸ್ಥೆ ರಾಜ್ಯದಲ್ಲಿ ನಡೆಸಿದ ಸಮೀಕ್ಷೆ ವೇಳೆ ಹಲವಾರು ಕುತೂಹಲಕಾರಿ ಅಂಶಗಳು ಬಯಲಾಗಿವೆ. ರಾಜ್ಯ ಸರ್ಕಾರದ ಬಹುಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್ ಯೋಜನೆ ಬಗ್ಗೆ ಮತದಾರ ಅಷ್ಟೇನೂ ಸಹ ಮತ ತೋರಿಲ್ಲ. ಇದಕ್ಕೆ ಬದಲಾಗಿ ಅನ್ನಭಾಗ್ಯ ಯೋಜನೆಯೇ ಬೆಸ್ಟ್ ಎಂದಿದ್ದಾನೆ.
ಮುಖ್ಯಮಂತ್ರಿ ನೋಡಿ ಮತ ಹಾಕಿ ಎಂಬ ಘೋಷಣೆಗೆ ಅಷ್ಟೇನೂ ಸ್ಪಂದಿಸದ ಆತ, ನಮಗೆ ಸಿಎಂ ಅಭ್ಯರ್ಥಿಗಿಂತ, ತಮ್ಮ ಕ್ಷೇತ್ರದ ಅಭ್ಯರ್ಥಿಯೇ ಮುಖ್ಯ ಎಂದು ಹೇಳಿದ್ದಾನೆ. ಇದರ ಜತೆಯಲ್ಲೇ ಸದ್ಯ ಆಡಳಿತದಲ್ಲಿರುವ ಸಿದ್ದರಾಮಯ್ಯ ಸರ್ಕಾರದ ಕುರಿತ ಭಾವನೆಗಳನ್ನೂ ಬಿಚ್ಚಿಟ್ಟಿದ್ದಾನೆ.
ಸಮೀಕ್ಷೆ ಬಹಿರಂಗ ಮಾಡಿದ್ದೇನು?
ಇಂದಿರಾ ಕ್ಯಾಂಟೀನ್‌ಗಿಂತ ಅನ್ನಭಾಗ್ಯವೇ ಬೆಸ್ಟ್ ಎಂದ ಮತದಾರ