Advertisement

ದೇವಿ ಗೊಂಬೆ ಮೇಲೆ ಕೋಳಿ ಎಸೆತ

10:59 AM Aug 09, 2018 | Team Udayavani |

ಚಿತ್ತಾಪುರ: ಪಟ್ಟಣದ ಹೋಳಿಕಟ್ಟಾ ಬಳಿ ಮರಗಮ್ಮ ದೇವಿ ಜಾತ್ರಾ ಮಹೋತ್ಸವದ ನಿಮಿತ್ತ ದೇವಿ ಗೊಂಬೆಗಳ ಅದ್ಧೂರಿ ಮೆರವಣಿಗೆ ನಡೆಯಿತು. ಭಕ್ತರು ದೇವಿ ಗೊಂಬೆಗಳ ಮೇಲೆ ಕೋಳಿ ಎಸೆದು ಹರಕೆ ತಿರಿಸಿದರು. ರೋಗದಿಂದ ಮುಕ್ತಿ, ರೋಗ ರುಜಿನಗಳು ಬರದಂತೆ ಹಾಗೂ ಕಷ್ಟ, ತೊಂದರೆ ದೂರವಾಗಬೇಕು. ಕುಟುಂಬ ನೆಮ್ಮದಿಯಿಂದ ಜೀವನ ನಡೆಸಬೇಕು. ಜೀವನದಲ್ಲಿ ಎಲ್ಲವನ್ನು ಎದುರಿಸಿ ಉತ್ತಮ ಶಿಕ್ಷಣ, ಆರೋಗ್ಯ, ಕುಟುಂಬಕ್ಕೆ ಸಂತಾನ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಭಕ್ತರು ಏಡಿಕೊಂಡರು.

Advertisement

ಭಕ್ತರು ಎಸೆದ ಕೋಳಿಗಳನ್ನು ಇತರರು ಹಿಡಿಯಲು ನಾ ಮುಂದೆ ನೀ ಮುಂದೆ ಎಂಬಂತೆ ಪ್ರಯತ್ನಿಸಿದರು.
ಇಲ್ಲಿನ ಜಾತ್ರೆಗೆ ಯಾರಿಗೂ ಸಾರ್ವಜನಿಕವಾಗಿ ಆಮಂತ್ರಣ ನೀಡುವುದಿಲ್ಲ. ಆದರೆ ಜಾತ್ರೆಗೆ ಸೇರುವುದು ಮಾತ್ರ 10 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುತ್ತಾರೆ.

ಗೊಂಬೆಗಳು ಹೊರಡುವ ಮುನ್ನವೇ ಜನರು ಇಲ್ಲಿ ಸೇರುತ್ತಾರೆ. ಬೆಳಗ್ಗೆ ದೇವಸ್ಥಾನದಲ್ಲಿ ಸುಮಂಗಲೆಯರು ,
ಮಕ್ಕಳು ಹೋಳಿಗೆ ಇತ್ಯಾದಿ ನೈವೈದ್ಯ ಸಲ್ಲಿಸಿದರು. ದೇಶಮುಖ ಹಾಗೂ ರೇಷ್ಮೆ ಮನೆಯಿಂದ ತುಂಬು ಆಯೇರಿ
ಬಟ್ಟೆ ಇತ್ಯಾದಿಯೊಂದಿಗೆ ಬಡಿಗೇರ ಮನೆಯಿಂದ ಗೊಂಬೆಗಳ ಮೆರವಣಿಗೆ ದೇವಸ್ಥಾನದವರೆಗೆ ನಡೆಯಿತು.

ದೇವಸ್ಥಾನಕ್ಕೆ ಐದು ಸುತ್ತು ಪ್ರದಕ್ಷಿಣೆ ಹಾಕಲಾಯಿತು. ಸಿಪಿಐ ಶಂಕರಗೌಡ ಪಾಟೀಲ, ಪಿಎಸ್‌ಐ ನಟರಾಜ ಲಾಡೆ
ಸೂಕ್ತ ಪೊಲೀಸ್‌ ಬಂದೊಬಸ್ತ್ ವ್ಯವಸ್ಥೆ ಏರ್ಪಡಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next