Advertisement

ಸುಂದರ ವಂಚಕಿ ವಿರುದ್ಧ ಚಾರ್ಜ್‌ಶೀಟ್‌

11:28 AM Jan 28, 2017 | Team Udayavani |

ಬೆಂಗಳೂರು: ವಕೀಲೆಯ ಸೋಗಿನಲ್ಲಿ ಹಿರಿಯ ವಕೀಲರೊಬ್ಬರಿಗೆ ವಂಚಿಸಿ ಬಂಧನಕ್ಕೊಳಗಾಗಿದ್ದ ರಾಜಸ್ಥಾನ ಮೂಲದ ಖುಷ್ಬೂ ಶರ್ಮಾ (26) ವಿರುದ್ಧ ಪುಲಿಕೇಶಿನಗರ ಪೊಲೀಸರು ನಗರದ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ.

Advertisement

ಆಕೆ ವಿರುದ್ಧ ಸುಮಾರು 200ಕ್ಕೂ ಹೆಚ್ಚು ಪುಟದ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಖುಷ್ಬೂ ಶರ್ಮಾ ವಕೀಲೆಯ ಹೆಸರಲ್ಲಿ ಹಲವರಿಗೆ ವಂಚಿಸಿದ್ದದಳು. ಜನರನ್ನು ಪರಿಚಯ ಮಾಡಿಕೊಂಡು ಅವರ ಬಳಿ ಹಣ, ಬೆಲೆಬಾಳುವ ವಸ್ತುಗಳನ್ನು ಪಡೆದು ಹಿಂದಿರುಗಿಸದೇ ಪರಾರಿಯಾಗುತ್ತಿದ್ದಳು. ಇದೇ ರೀತಿ ಹಿರಿಯ ವಕೀಲರೊಬ್ಬರಿಗೆ ಖೂಷ್ಬೂº ವಂಚಿಸಿದ್ದಳು. ಈ ಸಂಬಂಧ ವಕೀಲರು ಪುಲಿಕೇಶಿನಗರ ಠಾಣೆಯಲ್ಲಿ ವಂಚನೆ ದೂರು ದಾಖಲಿಸಿದ್ದರು.  

ಕ್ರಿಮಿನಲ್‌ ವಕೀಲೆಯೆಂದು ಹೇಳಿಕೊಂಡು ಹಲವು ಮಂದಿಯಿಂದ ಹಣ, ಆಭರಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ದೋಚಿದ್ದರ ಬಗ್ಗೆ ಪೊಲೀಸರು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಆಕೆ ವಂಚನೆಗೆ ಬಳಸುತ್ತಿದ್ದ ವಕೀಲರ ಕೋಟು, ಗೌನ್‌, ಬಳಿ ಬ್ಯಾಂಡ್‌, ಮೊಬೈಲ್‌ಗ‌ಳು, ಲ್ಯಾಪ್‌ಟಾಪ್‌, ಐಪ್ಯಾಡ್‌ ಮತ್ತಿತರ ಸಾಕ್ಷ್ಯಗಳನ್ನು ಜಪ್ತಿ ಮಾಡಿದ್ದಾರೆ. 

ಈಕೆಯಿಂದ ವಂಚನೆ, ಮೋಸ ಹೋದ ಹಲವರ ಹೇಳಿಕೆಗಳನ್ನು ದಾಖಲಿಸಿಕೊಂಡು ಸಾಕ್ಷ್ಯವಾಗಿಸಿದ್ದಾರೆ. ಅಲ್ಲದೆ, ಪದೇ ಪದೇ ಹಣಕ್ಕೆ ಬೇಡಿಕೆ ಇರಿಸಿ ಅವರು ನಿರಾಕರಿಸಿದಾಗ ಅತ್ಯಾಚಾರದಡಿ ದೂರು ನೀಡುತ್ತೇನೆ ಎಂದು ಧಮಿಕಿ ಹಾಕಿದ್ದರ ಬಗ್ಗೆಯೂ ಸಾಕ್ಷ್ಯಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next