Advertisement

ಹೊಸ ಸದಸ್ಯರಿಗೆ ಹಳೆ ಸಮಸ್ಯೆಯಗಳ ಸವಾಲು

03:42 PM Nov 17, 2019 | Team Udayavani |

ಮಾಗಡಿ: ಕಳೆದ ಮೂರು ದಿನಗಳ ಹಿಂದೆಯಷ್ಟೆ ಮಾಗಡಿ ಪುರಸಭೆಯ ಗದ್ದುಗೆ ಏರಿರುವ ನೂತನ ಸದಸ್ಯರ ಮುಂದೆ ನೂರೆಂಟು ಸವಾಲುಗಳಿದ್ದು, ಅವುಗಳನ್ನು ಸಮರ್ಥವಾಗಿ ಬಗೆಹರಿಸಿ ಸ್ವತ್ಛ ಪಟ್ಟಣವನ್ನಾಗಿಸುವುದು ಬಹುದೊಡ್ಡ ಸವಾಲಾಗಿದೆ. ಸ್ವಚ್ಛತೆಗೆ ಮೊದಲ ಆದ್ಯತೆ ಕೊಡುವುದರ ಜೊತೆಗೆ ಉತ್ತಮ ಪರಿಸರ ಕಾಪಾಡಬೇಕಾಗಿದ್ದು, ಪಟ್ಟಣವನ್ನು ಸುಂದರವಾಗಿಟ್ಟುಕೊಳ್ಳಲು ಏನೆಲ್ಲ ಕ್ರಮ ಕೈಗೊಳ್ಳಬಹುದು ಎಂಬುದನ್ನು ನೂತನ ಸದಸ್ಯರು ಚಿಂತಿಸಬೇಕಾಗಿದೆ.

Advertisement

ಪ್ಲಾಸ್ಟಿಕ್‌ ಮುಕ್ತವಾಗಿಲ್ಲ: ಅಧಿಕಾರಿ ವರ್ಗ ಜಾಗೃತಿ ಮೂಡಿಸಿದರೂ, ಪಟ್ಟಣ ಪ್ಲಾಸ್ಟಿಕ್‌ ಮುಕ್ತವಾಗಿಲ್ಲ. ಎಲ್ಲಾ ಕಡೆಗಳಲ್ಲಿ ಪ್ಲಾಸ್ಟಿಕ್‌ ಕವರ್‌, ಚೀಲಗಳು ಬಿದ್ದಿದ್ದು, ಅಂಗಡಿ, ಮಾರುಕಟ್ಟೆಗಳಲ್ಲೂ ಪ್ಲಾಸ್ಟಿಕ್‌ ಚೀಲದಲ್ಲೇ ಸಾಮಗ್ರಿ ನೀಡುತ್ತಿದ್ದಾರೆ. ಈ ಸವಾಲನ್ನು ಹೇಗೆ ಎದುರಿಸುತ್ತಾರೆ ಎಂಬುದೇ ಸದಸ್ಯರ ಮುಂದಿರುವ ಸವಾಲಾಗಿದ್ದು, ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ನೋಡಬೇಕಿದೆ.

ನೀರಿನ ಸಮಸ್ಯೆ: ಬೇಸಿಗೆ ಕಾಲ ಸಮೀಪಿಸುತ್ತಿದ್ದು,ಪಟ್ಟಣದಲ್ಲಿ ನೀರಿನ ಸಮಸ್ಯೆ ನಿವಾರಣೆಗೆ ದೂರ ದೃಷ್ಠಿಯ ಚಿಂತನೆ ಬೇಕಿದೆ. ಕಳೆದ 20 ವರ್ಷಗಳಿಂದ ಒಳಚರಂಡಿ ಕಾಮಗಾರಿ ಪೂರ್ಣಗೊಂಡಿಲ್ಲ. ಜೊತೆಗೆ ಅವೈಜ್ಞಾನಿಕವಾಗಿ ಕಾಮಗಾರಿ ನಡೆದಿರುವುದರಿಂದ ಪಟ್ಟಣದ ರಸ್ತೆ ಮಧ್ಯೆಯೇ ಎಲ್ಲಂದರಲ್ಲಿ ಒಳಚರಂಡಿ ತ್ಯಾಜ್ಯ ಹುಕ್ಕಿ ಹರಿಯುತ್ತಿರುತ್ತದೆ.ಇದರಿಂದ ಪಟ್ಟಣದ ಗಬ್ಬುನಾರುತ್ತಿದೆ. ಪಟ್ಟಣದಲ್ಲಿನ ಕೆರೆ ಕಟ್ಟೆಗಳಲ್ಲಿ ಕುರಚಲು ಗಿಡಬೆಳೆದು ನಿಂತಿದ್ದು, ಕೆರೆಕಟ್ಟೆಗಳ ಸುತ್ತಮುತ್ತಲು ದುರ್ವಾಸನೆ ಬೀರುತ್ತಿವೆ. ಆದಷ್ಟು ಬೇಗ ಕೆರೆಗಳನ್ನು ಸ್ವಚ್ಛಗೊಳಿಸಬೇಕಾಗಿದೆ.

ರಸ್ತೆ ಅಗಲೀಕರಣ: ಪಟ್ಟಣದ ಪ್ರಮುಖ ರಸ್ತೆ ಗಳೆಲ್ಲವೂ ಬತ್ತುವರಿಯಾಗಿದ್ದು, ವಾಹನ ಮತ್ತು ಪಾದಚಾರಿಗಳ ಸಂಚಾರ ಬಹಳ ಕಷ್ಟಕರವಾಗಿದ್ದು, ಇದಕ್ಕೆ ಪಟ್ಟಣ ಸಂಪರ್ಕ ರಸ್ತೆಗಳು ಸಹ ಹೊರತಾಗಿಲ್ಲ. ಅದರಲ್ಲೂ ಅವೈಜ್ಞಾನಿಕ ಚರಂಡಿಗಳು ಕಿರಿದಾದ ರಸ್ತೆಗಳು ಬೇಕಾಬಿಟ್ಟಿ ರಸ್ತೆ ಮಧ್ಯೆಯೇ ಅಗೆದು ಬಿಟ್ಟಿರುವ ಗುಂಡಿಗಳಿಂದ ಸಂಚಾರ ಕಷ್ಟಕರವಾಗಿದೆ. ಪಟ್ಟಣದ ಪ್ರಮುಖ ರಸ್ತೆಗಳ ಒತ್ತುವರಿ ತೆರವುಗೊಳಿಸುವುದು, ಸಂಪರ್ಕ ರಸ್ತೆಗಳಲ್ಲಿನ ಹಳ್ಳಗುಂಡಿಗಳನ್ನು ಮುಚ್ಚಿ ವೈಜ್ಞಾನಿಕ ಚರಂಡಿಗಳಿಗೆ ಅಗತ್ಯವಾದ ಸ್ಲಾಬ್‌ಗಳನ್ನು ಹಾಕಬೇಕಿದೆ.

ಪಾರ್ಕಿಂಗ್‌ ಸಮಸ್ಯೆ: ಪಟ್ಟಣದಲ್ಲಿ ಸಾರ್ವಜನಿಕರು ತಮ್ಮ ವಾಹನಗಳನ್ನು ಪಾರ್ಕಿಂಗ್‌ ಮಾಡಲು ಸ್ಥಳವಿಲ್ಲ. ಎಲ್ಲಂದರಲ್ಲ ವಾಹನ ನಿಲ್ಲಿಸಬೇಕಾದ ಪರಿಸ್ಥಿತಿಯನ್ನು ಸಾರ್ವಜನಿಕರು ಹಲವಾರು ವರ್ಷದಿಮದ ಅನುಭವಿಸುತ್ತಿದ್ದಾರೆ. ಸದಸ್ಯರು ಪಾರ್ಕಿಂಗ್‌ ಸಮಸ್ಯೆಗಳ ನಿವಾರಿಸಲು ಪಟ್ಟಣದಲ್ಲಿ ಸ್ಥಳವನ್ನು ಗುರುತಿಸಿ ಸಾರ್ವಜನಿಕರ ವಾಹನ ಪಾರ್ಕಿಂಗ್‌ಗೆ ಅಗತ್ಯ ಕ್ರಮ ವಹಿಸಬೇಕಿದೆ.

Advertisement

ಉದ್ಯಾನವನ ಅಭಿವೃದ್ಧಿ: ಪಟ್ಟಣದಲ್ಲಿ ಬಾಲಕೃಷ್ಣ ಉದ್ಯಾನವನ ಬಿಟ್ಟರೆ ಉಳಿದಂತೆ ಪುರಸಭೆ ಉಳಿಸಿರುವ ಉದ್ಯಾನವನಗಳು ಬಹುತೇಕ ಬತ್ತುವರಿಯಾಗಿವೆ. ಆ ಉದ್ಯಾನವನದ ಒತ್ತುವರಿ ತೆರವು ಗೊಳಿಸಬೇಕು. ಎನ್‌ಇಎಸ್‌ನಲ್ಲಿದ್ದ ಉದ್ಯಾನವನ ಪರ ಬಾರೆಯಾಗಿದೆ ಎಂಬ ಆರೋಪವೂ ಕೇಳಿಬರುತ್ತಿದೆ. ಪರಭಾರೆಯಾಗಿದ್ದರೆ, ಅದನ್ನು ಪುರಸಭೆ ತಮ್ಮ ವಶಕ್ಕೆ ಪಡೆಯಲು ಅಗತ್ಯ ಕ್ರಮ ವಹಿಸಬೇಕಿದೆ. ಜೊತೆ ಉದ್ಯಾನವನದಲ್ಲಿ ಅಗತ್ಯ ವಾಕಿಂಗ್‌ ಪಾತ್‌ ನಿರ್ಮಿಸಿ ಗಿಡಗಳು, ಹೂವಿನ ಗಿಡ, ವಿಶ್ರಾಂತಿ ಆಸನಗಳನ್ನು ಅಳವಡಿಸಬೇಕು.

ವೃತ್ತಗಳಿಗೆ ಮಹಾನೀಯರ ಹೆಸರು: ಸ್ವಾತಂತ್ರ್ಯಗಳಿಸಿ 75 ವರ್ಷಗಳು ಕಳೆದರೂ ಇನ್ನೂ ಮಾಗಡಿ ಪಟ್ಟಣ ಹಾಳುಕೊಂಪೆಯಂತೆ ಭಾಸವಾಗುತ್ತಿದೆ ಎಂಬುದು ಬಹುತೇಕ ನಾಗರೀಕರ ಆರೋಪವಾಗಿದೆ. ಪಟ್ಟಣದ ಪ್ರಮುಖ ವೃತ್ತಗಳಿಗೆ ಮಹಾನೀಯರ ಹೆಸರಿಡಬೇಕು. ವೃತ್ತಗಳ ಇತಿಹಾಸಕಾರರ ಪುತ್ಥಳಿಕೆ ಪ್ರತಿಷ್ಠಾಪನೆಯೂ ಆದರೆ ಉತ್ತಮ. ಈ ಮೂಲಕ ಪಟ್ಟಣದ ಸೌಂದರ್ಯ ವನ್ನು ಹೆಚ್ಚಿಸಬೇಕಿದೆ.

ರಂಗಮಂದಿರ ಅಭಿವೃದ್ಧಿಪಡಿಸಿ: ಮಾಗಡಿ ತಾಲೂಕಿನಲ್ಲಿ ಕಲಾವಿದರಿಗೆ ಕೊರತೆಯಿಲ್ಲ. ಕಲಾವಿದರನ್ನು ಪ್ರೊತ್ಸಾಹಿಸಲು ಸುಂದರ ವಾದ ಸುಸಜ್ಜಿತ ರಂಗ ಮಂದಿರ ಅಗತ್ಯವಿದೆ. ಈಗ ಇರುವ ರಂಗ ಮಂದಿರ ಪಾಳು ಬಿದ್ದಿದ್ದು, ಕುಸಿಯುವ ಹಂತ ತಲುಪಿದೆ. ಕಲಾವಿದರನ್ನು ಪ್ರೋತ್ಸಾಹಿಸುವಂತ ಸುಸಜ್ಜಿತ ರಂಗ ಮಂದಿರ ನಿರ್ಮಿಸಿ ಕಲಾವಿರನ್ನು ನೆರವಾಗಬೇಕಿದೆ.

ಮಾಗಡಿ ಪಟ್ಟಣವನ್ನು ಪ್ಲಾಸ್ಟಿಕ್‌ ಮುಕ್ತಪಟ್ಟಣವನ್ನಾಗಿಸಲು ಸಭೆಯಲ್ಲಿ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಹಾಗೂ ರಸ್ತೆ, ಚರಂಡಿ ದುರಸ್ಥಿಗೆ ಶಾಸಕರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ರೂಪಿಸುತ್ತೇವೆ. ಎಂ.ಎನ್‌.ಮಂಜುನಾಥ್‌ ಪುರಸಭಾ ಸದಸ

 

-ತಿರುಮಲೆ ಶ್ರೀನಿವಾಸ್‌

Advertisement

Udayavani is now on Telegram. Click here to join our channel and stay updated with the latest news.

Next