Advertisement
ರಾಜಕಾರಣದಲ್ಲಿ ಅಧಿಕಾರ ಬಂದಾಗ ಸಂತೋಷ; ಸಿಗದಾಗ ನೋವು ಸಹಜ. ಇವೆರಡನ್ನೂ ವ್ಯಕ್ತಪಡಿಸಲು ನಮ್ಮ ಪಕ್ಷದೊಳಗೆ ನಿಗದಿತ ಚೌಕಟ್ಟಿದೆ. ಹೀಗಾಗಿ ಸಿಎಂ ಯಡಿಯೂರಪ್ಪ ಅವರು ಎಲ್ಲರನ್ನೂ ಕರೆದು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯು ಟೀಮ್ ವರ್ಕ್ ಮಾದರಿಯಲ್ಲಿ ಕೆಲಸ ಮಾಡುವುದರಿಂದ ಎಲ್ಲ ಸಮಸ್ಯೆ-ನೋವುಗಳನ್ನು ಎಲ್ಲರೂ ಕುಳಿತು ಸರಿಪಡಿಸುವ ಕಾರ್ಯ ನಡೆಸುತ್ತೇವೆ.
Related Articles
Advertisement
ನಾವು ಆರಾಮವಾಗಿ ಅಧಿಕಾರ ಪಡೆದವರಲ್ಲ. ಸಂಘಟನೆ ಮತ್ತು ಹೋರಾಟದ ಮೂಲಕ ಅಧಿಕಾರ ಬಂದಿದೆ. ಈ ಹಿಂದಿನ ಹಲವು ಚುನಾವಣೆಗಳೂ ವಿಧವಿಧವಾದ ಸವಾಲುಗಳನ್ನು ಒಡ್ಡಿದ್ದವು. ಈ ಬಾರಿ ಅನಿವಾರ್ಯವಾಗಿ ಉಪಚುನಾವಣೆ ಬರಬಹುದು; ಅದನ್ನು ಸಂಘಟನೆಯ ಆಧಾರದಲ್ಲಿ ಎದುರಿಸಲು ಸಿದ್ಧ.
•ಅಂಥ ಸಂದರ್ಭ ಬಂದರೆ ಅನರ್ಹಗೊಂಡ ಶಾಸಕರಿಗೆ ಬಿಜೆಪಿ ಟಿಕೆಟ್ ನೀಡುವುದೇ?
ಈ ವಿಚಾರ ಸದ್ಯ ಕಾನೂನಿನ ಚೌಕಟ್ಟಿನೊಳಗೆ ಇದೆ. ಇದೆಲ್ಲ ಬಗೆಹರಿದ ಮೇಲೆ ಮುಂದಿನ ನಡೆಯ ಬಗ್ಗೆ ಪಕ್ಷದ ಹಿರಿಯರ ಉಪಸ್ಥಿತಿಯಲ್ಲಿ ನಿರ್ಧರಿಸಲಾಗುತ್ತದೆ.
•ರಾಜ್ಯದಲ್ಲಿ ಬಿಜೆಪಿ ಬಲವರ್ಧನೆಗೆ ನಿಮ್ಮ ಸಂಕಲ್ಪವೇನು?
ಕಳೆದ ಚುನಾವಣೆಯಲ್ಲಿ ರಾಜ್ಯದ ಯಾವ ಭಾಗದಲ್ಲಿ ಬಿಜೆಪಿಗೆ ಕಡಿಮೆ ಮತಗಳು ಬಂದಿವೆಯೋ ಆ ಕ್ಷೇತ್ರಗಳನ್ನು ಆದ್ಯತೆಯ ನೆಲೆಯಲ್ಲಿ ಪರಿಗಣಿಸಿ, ಅಲ್ಲಿ ಬಿಜೆಪಿಯ ಶಕ್ತಿ ಪ್ರದರ್ಶನ ಮಾಡುವ ಸಂಕಲ್ಪ ನನ್ನದು. ಕರಾವಳಿ, ಉತ್ತರ ಕನ್ನಡ, ಮಲೆನಾಡು ಭಾಗದಲ್ಲಿ ಯಾವ ರೀತಿ ಪಕ್ಷ ಸಂಘ ಟನೆಯಾಗಿದೆಯೋ ಅದೇ ಸೂತ್ರವನ್ನು ರಾಜ್ಯವ್ಯಾಪಿ ಜಾರಿಗೊಳಿಸಲಾ ಗುವುದು. ಸಂಘಟನೆ, ಮತಗಟ್ಟೆ ಮತ್ತು ಕಾರ್ಯಕರ್ತರ ಆಧಾರಿತ ಪಕ್ಷ ಸಂಘಟನೆ ಕರಾವಳಿ ಭಾಗದಲ್ಲಿ ಬಲಿಷ್ಠವಾಗಿದೆ. ಇದನ್ನು ವಿಸ್ತರಿಸುವ ಗುರಿ ಇದೆ. ಸರ್ವ ವ್ಯಾಪಿ- ಸರ್ವ ಸ್ಪರ್ಶಿ ಬಿಜೆಪಿ ನನ್ನ ಕನಸು. •7ನೇ ಪುಟಕ್ಕೆ
ಮಂಗಳೂರು: ಸಂಸದ ನಳಿನ್ ಕುಮಾರ್ ಕಟೀಲು ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನಕ್ಕೇರಿದ್ದಾರೆ. ಯಡಿಯೂರಪ್ಪನವರಂಥ ಹಿರಿಯ ನಾಯಕರು ನಿರ್ವಹಿಸಿದ್ದ ಹೊಣೆಗಾರಿಕೆ ನಳಿನ್ ಹೆಗಲಿಗೇರಿದ್ದು, ಸಚಿವ ಸಂಪುಟ ರಚನೆ ಬಳಿಕ ಉಂಟಾಗಿರುವ ಅಸಮಾಧಾನವನ್ನು ತಣಿಸಬೇಕಾದ ಸವಾಲು ಈಗ ಅವರ ಮುಂದಿದೆ. ಇದು ಮತ್ತು ರಾಜ್ಯದಲ್ಲಿ ಮುಂದೆ ಬರಬಹುದಾದ ವಿಧಾನಸಭೆ ಉಪ ಚುನಾವಣೆ ಹಾಗೂ ಪಕ್ಷ ಸಂಘಟನೆಯ ಸವಾಲು, ಜತೆಗೆ ಈಗಿನ ರಾಜಕೀಯ ಬೆಳವಣಿಗೆ ಇವೆಲ್ಲವುಗಳ ಬಗ್ಗೆ ಅವರು ‘ಉದಯವಾಣಿ’ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ.
– ದಿನೇಶ್ ಇರಾ