ಹೊಸದಿಲ್ಲಿ: ಕೇಂದ್ರ ಸರಕಾರ ಜಾರಿಗೊಳಿಸಲು ಉದ್ದೇಶಿಸಿದ ಹೊಸ ಶಿಕ್ಷಣ ನೀತಿ ಜಾರಿಗೆ ಹಣಕಾಸಿನ ವಿಷಯವೇ ಪ್ರಧಾನ ಸವಾಲು ಎಂದು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ವಾದಿಸಿವೆ.
ಹೊಸದಿಲ್ಲಿಯಲ್ಲಿ ಇತ್ತೀಚೆಗೆ ಮುಕ್ತಾಯವಾಗಿರುವ ಕೇಂದ್ರ ಶಿಕ್ಷಣ ನೀತಿಯ ಸಲಹಾ ಮಂಡಳಿ (ಸಿಎಬಿಇ) ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ.
ಕರ್ನಾಟಕದ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥ ನಾರಾಯಣ ಮಾತನಾಡಿ, ಯೋಜನೆ ಗಳನ್ನು ಸಮರ್ಪಕವಾಗಿ ಅನುಷ್ಠಾನ ಗೊಳಿಸುವ ನಿಟ್ಟಿನಲ್ಲಿ ವಿತ್ತೀಯ ನೆರವು ಪ್ರಧಾನವಾಗಿದೆ. ಹೆಚ್ಚಿನ ಆದಾಯವೆಲ್ಲ ಅನುದಾನ ನೀಡಲು ಬಳಕೆಯಾಗುತ್ತದೆ ಎಂದು ಅವರು ಹೇಳಿದ್ದಾರೆ. ಬಿಹಾರದ ಶಿಕ್ಷಣ ಸಚಿವ ಕೆ.ಎನ್.ಪ್ರಸಾದ್ ವರ್ಮಾ, ವಿತ್ತೀಯ ನೆರವು ಎನ್ನುವುದು ಪ್ರಧಾನ ಅಂಶ.
ಶಿಕ್ಷಣ ನೀತಿಯಲ್ಲಿ ವಿತ್ತೀಯ ನೆರವಿನ ಬಗ್ಗೆ ಪ್ರಸಾಪ ಮಾಡಿಯೇ ಇಲ್ಲ. ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ವಿಸ್ತರಣೆ ಮಾಡಿರುವುದು ರಾಜ್ಯಗಳಿಗೆ ಹೊರೆಯಾಗಿ ಪರಿಣಮಿಸಿದೆ. ಹೀಗಾಗಿ, ಕೇಂದ್ರ ಸರಕಾರದ ಕೂಡ ಈ ವಿತ್ತೀಯ ಹೊರೆ ಹೊರಬೇಕು ಎಂದು ಪ್ರತಿಪಾದಿಸಿದ್ದಾರೆ. ಕರಡು ನೀತಿಯಲ್ಲಿ ಅದನ್ನು ಹೇಗೆ ಜಾರಿ ಮಾಡಲಾಗುತ್ತದೆ ಎಂಬ ಬಗ್ಗೆ ಉಲ್ಲೇಖವೇ ಇಲ್ಲವೆಂದು ದಿಲ್ಲಿಯ ಉಪ ಮುಖ್ಯ ಮಂತ್ರಿ ಮನೀಶ್ ಸಿಸೊÕàಡಿಯಾ ಹೇಳಿದ್ದಾರೆ. ದೇಶದ ಶಿಕ್ಷಣ ವ್ಯವಸ್ಥೆ ಅತ್ಯಂತ ನಿಯಂತ್ರಿತ ವ್ಯವಸ್ಥೆಯಿಂದ ಕೂಡಿದೆ. ಆದರೆ ಸೂಕ್ತ ವಿತ್ತೀಯ ನೆರವು ನೀಡಲಾಗುತ್ತಿಲ್ಲ ಎಂದೂ ಅವರು ಹೇಳಿದ್ದಾರೆ.
ಇಸ್ರೋ ಮಾಜಿ ಅಧ್ಯಕ್ಷ ಕೆ. ಕಸ್ತೂರಿರಂಗನ್ ನೇತೃತ್ವದ ಸಮಿತಿ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ವರದಿ ಯನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖೀÅಯಾಲ್ ನಿಶಾಂಕ್‌ಗೆ ಸಲ್ಲಿಸಿತ್ತು.