Advertisement
ಈಗ ಬೇಸಿಗೆಯ ಧಗೆ ದೂರವಾಗಿ ಮಳೆ ಹನಿ ಬಂದಪ್ಪಳಿಸುತ್ತಿರುವ ವೇಳೆಯಲ್ಲೇ, ಮಳೆಗಾಲದಲ್ಲಿ ಕೋವಿಡ್ ಕಡಿಮೆಯಾಗುವುದೇ ಎನ್ನುವ ಚರ್ಚೆ ಆರಂಭವಾಗಿದೆ. ಆದರೆ, ಫೆಬ್ರವರಿ ತಿಂಗಳ ಆರಂಭದಲ್ಲಿ, ಅಂದರೆ ಕೊರೊನಾ ವೈರಸ್ ಭಾರತಕ್ಕೆ ಕಾಲಿಟ್ಟು ಕೆಲವೇ ದಿನಗಳಾಗಿದ್ದ ಹೊತ್ತಲ್ಲಿ, ಸುಡು ಬಿಸಿಲಿಗೆ ಕೊರೊನಾ ವೈರಸ್ ದುರ್ಬಲವಾಗಿಬಿಡುತ್ತದೆ ಎಂದೇ ಭಾವಿಸಲಾಗಿತ್ತು. ಹಲವು ತಜ್ಞರು ಕೂಡ ಇದೇ ಮಾತನ್ನೇ ಹೇಳಿದ್ದರು. ಆದರೆ, ಅದರಿಂದ ಕೊರೊನಾದ ವೇಗಕ್ಕೇನೂ ಪೆಟ್ಟು ಬೀಳಲಿಲ್ಲ. ಈಗ ಮಳೆಗಾಲ ಎದುರಾಗಿದ್ದು, ವೈರಸ್‌ನ ಮೇಲೆ, ಹಾಗೂ ಅದರ ಪ್ರಸರಣ ಶಕ್ತಿಯ ಮೇಲೆ ಮಳೆಯ ಪ್ರಭಾವ ಹೇಗಿರಲಿದೆ ಎನ್ನುವ ಬಗ್ಗೆ ಚರ್ಚೆಗಳು, ಭವಿಷ್ಯವಾಣಿಗಳು ಆರಂಭವಾಗಿದೆ. ಆದರೆ, ವೈರಾಣು ತಜ್ಞರು ಮತ್ತು ಸಾಂಕ್ರಾಮಿಕ ರೋಗ ತಡೆ ತಜ್ಞರು ಮಾತ್ರ ಕೋವಿಡ್-19 ಯಾವ ಕಾಲದಲ್ಲಿ ಹೇಗೆ ವರ್ತಿಸುತ್ತದೆ ಎನ್ನುವುದನ್ನು ತಿಳಿದುಕೊಳ್ಳಲು ಹಲವು ವರ್ಷಗಳೇ ಬೇಕು ಎನ್ನುತ್ತಾರೆ. ಬೇಸಿಗೆ, ಮಳೆಗಾಲ, ಚಳಿಗಾಲದಲ್ಲಿ ವೈರಸ್‌ನ ವರ್ತನೆಯನ್ನು ಹಲವು ವರ್ಷಗಳವರೆಗೆ ಪರೀಕ್ಷಿಸಿ, ಅದನ್ನು ಅನ್ಯ ದೇಶಗಳೊಂದಿಗೆ ಹೋಲಿಸಿ ನೋಡಿದ ಮೇಲೆಯೇ ಸ್ಪಷ್ಟವಾಗಿ ಹೇಳಲು ಸಾಧ್ಯವಾಗುತ್ತದೆ ಎನ್ನುವುದು ವೈರಾಣು ತಜ್ಞರ ಅಭಿಪ್ರಾಯ.
Advertisement
ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆ ಸವಾಲು ದೊಡ್ಡದಿದೆ
07:45 AM Jun 17, 2020 | mahesh |
Advertisement
Udayavani is now on Telegram. Click here to join our channel and stay updated with the latest news.