Advertisement
ಚೀನದಲ್ಲಿ ಹಾವಳಿಯಿಟ್ಟಿರುವ ಕೊರೊನಾಗೆ ಈಗಾಗಲೇ 1,400ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. 65,000ಕ್ಕೂ ಹೆಚ್ಚು ಮಂದಿ ವೈರಸ್ ಬಾಧಿತರಾಗಿದ್ದಾರೆ. ಗುರುವಾರ ಜಪಾನ್‌ನಲ್ಲೂ ಕೊರೊನಾಗೆ ಓರ್ವ ಬಲಿಯಾಗುವುದರೊಂದಿಗೆ ಒಲಿಂಪಿಕ್ಸ್ ಆತಿಥ್ಯದ ದೇಶದಲ್ಲೂ ಭಯ ಆವರಿಸಿದೆ. ಈ ನಡುವೆಯೇ ಒಲಿಂಪಿಕ್ಸ್ ರದ್ದಾಗುವ ಅಥವಾ ಮುಂದೆ ಹೋಗುವ ಸಾಧ್ಯತೆ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಒಲಿಂಪಿಕ್ಸ್ ಸಮಿತಿ ಎಲ್ಲ ಕ್ರೀಡಾಪಟುಗಳಿಗೆ ಕೊರೊನಾ ಭಯಬೇಡ ಎಂಬ ಅಭಯ ನೀಡುತ್ತಿದೆ. ಆದರೆ ಚೀನದಿಂದ ಸುಮಾರು 600 ಕ್ರೀಡಾಪಟುಗಳು ಆಗಮಿಸಲಿರುವುದು ಆತಂಕಕ್ಕೆ ಕಾರಣವಾಗಿದೆ. ಚೀನ ಕ್ರೀಡಾಪಟುಗಳ ಜತೆಗೆ ಬೆರೆತರೆ ತಮಗೂ ಕೊರೊನಾ ಬರಬಹುದು ಎಂಬ ಭೀತಿ ಕ್ರೀಡಾಪಟುಗಳದ್ದು. ಚೀನದ ಹೆಚ್ಚಿನ ಕ್ರೀಡಾಪಟುಗಳು ಅವರ ದೇಶದಿಂದ ಹೊರಗಿದ್ದಾರೆ. ಹೀಗಾಗಿ ಅವರಿಗೆ ಕೊರೊನಾ ಸೋಂಕು ತಗಲಿರುವ ಸಾಧ್ಯತೆಯಿಲ್ಲ ಎಂದು ಸಂಘಟನಾ ಅಧಿಕಾರಿ ಜಾನ್ ಕೋಟ್ಸ್ ಹೇಳಿದ್ದಾರೆ.