ಹೊಸಪೇಟೆ: ವಿಶ್ವ ವಿಖ್ಯಾತ ಹಂಪಿಗೆ ಕೇಂದ್ರ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ರಶ್ಮಿ ವರ್ಮಾ ನೇತೃತ್ವದ 9 ಜನ ಐಎಎಸ್ ಅಧಿಕಾರಿಗಳ ತಂಡ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೂಲಭೂತ ಸೌಲಭ್ಯಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಬಳಿಕ ಕಮಲಾಪುರದ ಪ್ರಾಚ್ಯವಸ್ತು ಸಂಗ್ರಹಾಲಕ್ಕೆ ಭೇಟಿ ನೀಡಿದ ಅವರು, ಉತ್ಖನನ ವೇಳೆ ದೊರೆತ ವಿಜಯನಗರ ಅರಸರ ಕಾಲದ ಖಡ್ಗ, ಚಿನ್ನದ ನಾಣ್ಯ, ಕಲ್ಲಿನ ವಿಗ್ರಹಗಳು, ತಾಮ್ರದ ಶಾಸನ ಹಾಗೂ ಹಂಪಿಯ ನೀಲನಕ್ಷೆ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದರು.
ಗಜಶಾಲೆ, ಕಮಲ್ ಮಹಲ್, ಮಹಾನವಮಿ ದಿಬ್ಬ, ಕಪ್ಪು ಕಲ್ಲಿನ ಪುಷ್ಕರಣಿ, ಹಜಾರ ರಾಮ ದೇವಸ್ಥಾನ, ವಿರುಪಾಕ್ಷ ದೇವಸ್ಥಾನ ಹಾಗೂ ಬಸವಣ್ಣ ಬಳಿಯ ಹಂಪಿ ಬೈಲೈಟ್‌ನ್ನು ವೀಕ್ಷಣೆ ಮಾಡಿದರು. ಆ ಕಾಲದಲ್ಲಿ ಯಾವುದೇ ಅತ್ಯಾಧುನಿಕ ತಂತ್ರಜ್ಞಾನವಿಲ್ಲದೆ ಸುಂದರವಾದ ಸ್ಮಾರಕಗಳನ್ನು ನಿರ್ಮಿಸಿ ವಿಶ್ವಕ್ಕೆ ಕೊಡುಗೆ ನೀಡಿದ್ದಾರೆ. ಪ್ರಸಿದ್ಧ ಸ್ಮಾರಕಗಳನ್ನು ರಕ್ಷಣೆ ಹೊಣೆ ಪ್ರತಿಯೊಬ್ಬರ ಮೇಲಿದ್ದು, ಮುಂದಿನ ಪೀಳಿಗೆಗೆ ರಕ್ಷಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು. ಜಂಟಿ ನಿರ್ದೇಶಕ ಸುಮನ್ ಬಿಲ್ಲಾ, ರಾಜ್ಯ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಸಿ.ಕೆ. ಅನಿಲಕುಮಾರ್, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕ್ಷಕಿ
ಕೆ ಮೂರ್ತೇಶ್ವರಿ, ಕಿರಿಯ ಸಂರಕ್ಷಣಾಧಿಕಾರಿ ಎಚ್.ರವೀಂದ್ರ, ಮೊವೇಂದ್ರನ್, ಸಿ ಸುನಿಲ್ ಕುಮಾರ್ ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕ ಅನಿಲ್ ಕುಮಾರ್ ಪ್ರಾಧಿಕಾರದ ಸಾರ್ವಜನಿಕ ಸಮನ್ವಯಧಿಕಾರಿ ಯಮುನ್ ನಾಯ್ಕ, ಸುಮನ್ ಬಿಲ್ಲ, ಶ್ರೀವಾಲ ಸಂಜಯ, ಅನಿಲ, ಮಹಮ್ಮದ್ ಫಾರೂಕ್, ಬಳ್ಳಾರಿ ಜಿಲ್ಲಾಧಿಕಾರಿ ಮಪ್ರಸಾತ್ ಮನೋಹರ್, ಭಾರತಿ ಕಶ್ಯಪ ಶರ್ಮಾ, ಆಲಾಫ ಬನ್ಸಾಲ್, ಪ್ರೇರಣಾ, ಸುಮನ್ ಸೇನ್ ಶರ್ಮಾ ಇದ್ದರು.