Advertisement
ಸರ್ಕಾರ ಅಸ್ಥಿರತೆ ಮಾಡಬೇಡಿ:ಸರ್ಕಾರಗಳನ್ನ ಉರುಳಿಸುವ ದುರಾಲೋಚನೆ ಬರದಂತೆ ತಡೆಯಬೇಕು. ಚುನಾಯಿತ ಸರ್ಕಾರಗಳನ್ನ ಉಳಿಸುವ ಚಿಂತನೆ ಆಗಬೇಕು ಲೋಕಾಂಬಿಕೆಯೂ ಅಂತಹ ಚಿಂತನೆ ಮೂಡಿಸಲಿ ಎಂದು ದಸರಾ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಹಂಪನಾ ಅವರು ಈ ಆಶಯ ವ್ಯಕ್ತಪಡಿಸಿದರು.
Related Articles
Advertisement
ಸಿಎಂಗಿಂತ ಮೊದಲೇ ಪುಷ್ಪಾರ್ಚನೆ ಮಾಡಿದ ಡಿಸಿಎಂ ಡಿ.ಕೆ ಶಿವಕುಮಾರ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡಿದರು.
ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಹೆಚ್ ಸಿ ಮಹದೇವಪ್ಪ, ಕೆ ವೆಂಕಟೇಶ್, ಹೆಚ್ ಕೆ ಪಾಟೀಲ್, ಶಿವರಾಜ್ ತಂಗಡಗಿ, ಶಾಸಕರಾದ ಜಿಟಿ ದೇವೇಗೌಡ, ತನ್ವಿರ್ ಸೇಠ್, ದರ್ಶನ್ ಧ್ರುವನಾರಾಯಣ್, ಅನಿಲ್ ಚಿಕ್ಕಮಾಧು, ಕೆ ಹರೀಶ್ ಗೌಡ, ರವಿಶಂಕರ್, ಎ ಆರ್ ಕೃಷ್ಣಮೂರ್ತಿ, ಶ್ರೀವತ್ಸ, ರಮೇಶ್ ಬಂಡಿ ಸಿದ್ದೇಗೌಡ, ಡಾ ತಿಮ್ಮಯ್ಯ, ಸಿ ಎನ್ ಮಂಜೇಗೌಡ, ಮುಡಾ ಅಧ್ಯಕ್ಷ ಮರೀಗೌಡ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷೆ ಪುಷ್ಪ ಅಮರನಾಥ್, ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಅಯೂಬ್ ಖಾನ್, ಡಿಸಿ ಲಕ್ಷ್ಮಿಕಾಂತ ರೆಡ್ಡಿ ಪಾಲ್ಗೊಂಡಿದ್ದರು.
ಸಮಾರಂಭದಲ್ಲಿ ಸನ್ಮಾನದ ವೇಳೆ ಮೈಸೂರು ಪೇಟ ಹಾಕುವಾಗ ಬೇಡ ಎಂದ ಸಿಎಂ. ಕೇವಲ ಹಾರ, ಶಾಲು ಹಾಕಿಸಿಕೊಂಡು ಸನ್ಮಾನ ಸ್ವೀಕರಿಸಿದರು. ಸಿಎಂಗೆ ಚಾಮುಂಡೇಶ್ವರಿ ಮೂರ್ತಿ ನೀಡಿ ಸನ್ಮಾನಿಸಲಾಯ್ತು. ಉದ್ಘಾಟಕ ಹಂಪನಾ ಅವರಿಗೆ ಜೈನ ಮೂರ್ತಿ ನೀಡಿ ಸನ್ಮಾನ ನೆರವೇರಿಸಲಾಯ್ತು. ಡಿಕೆ.ಶಿವಕುಮಾರ್ ಸೇರಿ ಗಣ್ಯರಿಗೆ ಚಾಮುಂಡೇಶ್ವರಿ ಮೂರ್ತಿ ನೀಡಿ ಗೌರವಿಸಲಾಯಿತು.