Advertisement

ಎಸ್‌ಬಿಐ ದಂಡಕ್ಕೆ ಕೇಂದ್ರ ಆಕ್ಷೇಪ

03:45 AM Mar 07, 2017 | Team Udayavani |

ನವದೆಹಲಿ: ಖಾತೆಯಲ್ಲಿ “ಕನಿಷ್ಠ ಸರಾಸರಿ ಮೊತ್ತ’ ಕಾಯ್ದುಕೊಳ್ಳಲು ವಿಫ‌ಲರಾದರೆ ಗ್ರಾಹಕರಿಗೆ ದಂಡ ವಿಧಿಸಲು ಮುಂದಾಗಿರುವ ಎಸ್‌ಬಿಐ ಕ್ರಮಕ್ಕೆ ಕೇಂದ್ರ ಸರ್ಕಾರ ಆಕ್ಷೇಪ ಎತ್ತಿದೆ. ಈ ನೀತಿಯ ಮರುಪರಿಶೀಲನೆ ನಡೆಸಲು ಸೂಚಿಸಿದೆ.  

Advertisement

ಅಪನಗದೀಕರಣ ಮತ್ತು ಅದರ ನಂತರದ ಎಲ್ಲ ನೀತಿ- ನಿಯಮಗಳಿಂದ ಜನಸಾಮಾನ್ಯರೇ ಸಂಕಟ ಅನುಭವಿಸುತ್ತಿದ್ದಾರೆ. ಈ ನಡುವೆ ಎಸ್‌ಬಿಐನ “ಕನಿಷ್ಠ ಸರಾಸರಿ ಮೊತ್ತ’ ನೀತಿ ಗ್ರಾಹಕರ ಆಕ್ಷೇಪಕ್ಕೆ ಕಾರಣವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ, “ತಕ್ಷಣ ಇಂಥ ನಿರ್ಧಾರ ಬೇಡ. ಈ ಬಗ್ಗೆ ಮರು ಆಲೋಚಿಸಿ ಎಸ್‌ಬಿಐ ಹೆಜ್ಜೆ ಇಡಬೇಕು’ ಎಂದು ಸಲಹೆ ನೀಡಿದೆ. ಉಳಿತಾಯ ಖಾತೆಯಲ್ಲಿ 5000 ರೂ. ಕನಿಷ್ಠ ಮೊತ್ತ ಕಾಯ್ದುಕೊಳ್ಳದಿದ್ದರೆ ಗ್ರಾಮೀಣಕ್ಕೆ ಸೇವಾ ತೆರಿಗೆಯ ಜತೆಗೆ ಕನಿಷ್ಠ 20, ಮೆಟ್ರೋಸಿಟಿಯ ಗ್ರಾಹಕರಿಗೆ ಕನಿಷ್ಠ 100 ದಂಡ ಮೊತ್ತ ನಿಗದಿ ಪಡಿಸಲು ಎಸ್‌ಬಿಐ ಮುಂದಾಗಿತ್ತು.

ಎಸ್‌ಬಿಐನ “ಕನಿಷ್ಠ ಸರಾಸರಿ ಮೊತ್ತ’ ನಿಯಮದ ಬಿಸಿ ದೇಶದ 31 ಕೋಟಿ ಮಂದಿ ಗ್ರಾಹಕರಿಗೆ ತಟ್ಟಲಿದೆ. ಏ.1ರಿಂದ ಜಾರಿ ನಿಯಮ ಜಾರಿ ಆಗಲಿದ್ದು, ಪಿಂಚಣಿದಾರರು ಮತ್ತು ವಿದ್ಯಾರ್ಥಿಗಳಿಗೂ ತೊಂದರೆ ಆಗಲಿದೆ. 

ತ್ತೈಮಾಸಿಕದ ಮೇಲೆ ಎಫೆಕ್ಟ್:  ಜಿಡಿಪಿ ಕುಗ್ಗಲಿಲ್ಲ ಎಂದು ಸರ್ಕಾರ ಹೇಳಿದೆ. ಆದರೆ, ಅಪನಗದೀಕರಣದ ಪರಿಣಾಮ ಎದುರಿಸುವುದು 2017 ಆರಂಭದ ತ್ತೈಮಾಸಿಕ! ಹೀಗೆಂದು ಸ್ವತಃ ಆರ್‌ಬಿಐನ ಉಪ ಗವರ್ನರ್‌ ವಿರಳ್‌ ಆಚಾರ್ಯ ಹೇಳಿದ್ದಾರೆ. 

ಸರ್ಕಾರಕ್ಕೆ ನೋಟಿಸ್‌
ನಿಷೇಧಗೊಂಡ ನೋಟುಗಳನ್ನು ಠೇವಣಿ ಇಡಲು ಸರ್ಕಾರ ಭರವಸೆ ಕೊಟ್ಟಂತೆ ಅವಕಾಶ ಕೊಡುತ್ತಿಲ್ಲ ಎಂಬ ಮನವಿಯ ಹಿನ್ನಲೆಯಲ್ಲಿ ಇದಕ್ಕೆ ಸೂಕ್ತ ಉತ್ತರ ನೀಡಬೇಕೆಂದು ಕೇಂದ್ರ ಮತ್ತು ಆರ್‌ಬಿಐಗೆ ಸುಪ್ರೀಂ ನೋಟಿಸ್‌ ಜಾರಿ ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next