Advertisement

ಟೋಲ್‌ಗ‌ಳಲ್ಲಿ ಕಾನೂನುಬಾಹಿರ ಸುಂಕ ವಸೂಲಾತಿಗೆ ಕೇಂದ್ರ ಸರಕಾರವೇ ಹೊಣೆ

12:45 AM Jan 26, 2019 | Team Udayavani |

ಪಡುಬಿದ್ರಿ: ಅವಿಭಜಿತ ದಕ ಜಿಲ್ಲೆಯಲ್ಲಿ ರಸ್ತೆ ಕಾಮಗಾರಿ ಪೂರ್ತಿಗೊಳಿಸದೆ ಅಲ್ಲಲ್ಲಿ ಸುಂಕ ವಸೂಲಾತಿ ಮಾಡುತ್ತಿರುವ ಟೋಲ್‌ ಪ್ಲಾಝಾಗಳ ದುಂಡಾವರ್ತನೆಗೆ ಕೇಂದ್ರ ಸರಕಾರವೇ ನೇರ ಹೊಣೆ. ಸ್ಥಳೀಯ ಸಂಸದರು ಈ ಬಗ್ಗೆ  ಮೌನವಾಗಿರುವುದು ತರವಲ್ಲ. ಟೋಲ್‌ ಸಮಸ್ಯೆಯನ್ನು ಸಂಸದರು ಮುಂದೆ ನಿಂತು ಶೀಘ್ರ ಬಗೆಹರಿಸದಿದ್ದಲ್ಲಿ ಸಂಸದರ ವಿರುದ್ಧವೇ ಹೋರಾಟ ನಡೆಸಬೇಕಾದೀತು ಎಂದು ರಾಜ್ಯ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್‌ ಡಿ’ಸೋಜಾ ಎಚ್ಚರಿಸಿದ್ದಾರೆ.

Advertisement

ಅವರು ಜ. 25ರಂದು ಪಡುಬಿದ್ರಿಯ ಟೆಂಪೋ ನಿಲ್ದಾಣದಲ್ಲಿ ಹೆಜಮಾಡಿ ಟೋಲ್‌ ಪ್ಲಾಝಾ ಮೂಲಕ ಸಂಚರಿಸುವ ಸ್ಥಳೀಯ ವಾಹನಗಳಿಗೆ ಟೋಲ್‌ ವಿನಾಯಿತಿಗೆ ಆಗ್ರಹಿಸಿ ಸ್ಥಳೀಯರ ಬೆಂಬಲದೊಂದಿಗೆ ಕರವೇ(ಪ್ರವೀಣ್‌ ಶೆಟ್ಟಿ ಬಣ) ನಡೆಸುತ್ತಿರುವ ಅರ್ನಿಷ್ಟಾವಧಿ ಧರಣಿ ಮುಷ್ಕರಕ್ಕೆ ಬೆಂಬಲವಾಗಿ ಸೂಚಿಸಿ ಐವಾನ್‌ ಸ್ಥಳೀಯರಿಗೆ ಟೋಲ್‌ ಪಡೆಯುವುದಕ್ಕೆ ತನ್ನ ವಿರೋಧವಿದೆ ಎಂದರು.

ಸೋಮವಾರವೇ ತಾನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ | ಜಯಮಾಲಾರೊಡಗೂಡಿ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಟೋಲ್‌ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುವುದಾಗಿ ಹೇಳಿದರಲ್ಲದೆ ಮುಖ್ಯ ಕಾರ್ಯದರ್ಶಿಯವರ ಜತೆಗೂ ಚರ್ಚಿಸುವುದಾಗಿ ಧರಣಿ ನಿರತರಿಗೆ ಭರವಸೆ ನೀಡಿದರು.

ಕರವೇ ಜಿಲ್ಲಾಧ್ಯಕ್ಷ ಅನ್ಸಾರ್‌ ಅಹಮದ್‌, ಪಡುಬಿದ್ರಿ ನಾಗರಿಕ ಸಮಿತಿಯ ಅಧ್ಯಕ್ಷ ನವೀನ್‌ಚಂದ್ರ ಜೆ. ಶೆಟ್ಟಿ, ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವೈ. ಸುಧೀರ್‌ಕುಮಾರ್‌, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ವಿಶ್ವಾಸ್‌ ವಿ. ಅಮೀನ್‌, ದಸಂಸ ಸಂಚಾಲಕ ಲೋಕೇಶ್‌ ಕಂಚಿನಡ್ಕ, ನವೀನ್‌ ಎನ್‌. ಶೆಟ್ಟಿ, ತಾ. ಪಂ. ಸದಸ್ಯ ದಿನೇಶ್‌ ಕೋಟ್ಯಾನ್‌, ಕರವೇ ಕಾಪು ತಾಲೂಕು ಅಧ್ಯಕ್ಷ ಎಂ. ಎಸ್‌. ಸಯ್ಯದ್‌ ನಿಝಾಮ್‌, ಹೆಜಮಾಡಿ ಘಟಕದ ಅಧ್ಯಕ್ಷ ಹಮೀದ್‌ ಹೆಜ್ಮಾಡಿ, ಉಪಾಧ್ಯಕ್ಷ ಗಣೇಶ್‌ ಮೆಂಡನ್‌, ಆಸಿಫ್‌ ಆಪತಾºಂಧವ, ಎಂ. ಪಿ. ಮೊ„ದಿನಬ್ಬ, ಅಬ್ದುಲ್‌ ಅಜೀಜ್‌, ಹಸನ್‌ ಬಾವಾ, ಬುಡಾನ್‌ ಸಾಹೇಬ್‌, ಸುಲೆ„ಮಾನ್‌ ಕಂಚಿನಡ್ಕ, ರಹೀಂ ಕಂಚಿನಡ್ಕ, ನಜೀರ್‌ ಕಂಚಿನಡ್ಕ, ಯೂಸುಫ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next