Advertisement

ಆನೆಗಳ ವಂಶಾವಳಿ ದತ್ತಾಂಶ ರಚನೆಗೆ ಕೇಂದ್ರ ಸರಕಾರ ಸಜ್ಜು

12:29 AM Sep 20, 2022 | Team Udayavani |

ಹೊಸದಿಲ್ಲಿ: ಮನುಷ್ಯರ ವಶದಲ್ಲಿರುವ ಆನೆಗಳ ಅಕ್ರಮ ಮಾರಾಟ ತಪ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಹೆಜ್ಜೆ ಇಟ್ಟಿದ್ದು, ಅವುಗಳ ವಂಶಾವಳಿ ದತ್ತಾಂಶ ರಚನೆಗೆ ಮುಂದಾಗಿದೆ. ಈ ಬಗ್ಗೆ ಶೀಘ್ರವೇ ರಾಜ್ಯ ಸರಕಾರಗಳಿಗೆ ಸೂಚನೆ ನೀಡುವ ಸಾಧ್ಯತೆಯಿದೆ.

Advertisement

ದೇಶದಲ್ಲಿ ಸದ್ಯ 2,675 ವಶದಲ್ಲಿರುವ ಆನೆಗಳಿವೆ. ಖಾಸಗಿ ವ್ಯಕ್ತಿಗಳು ಹಾಗೂ ಸಂಘ, ಸಂಸ್ಥೆಗಳು, ಧಾರ್ಮಿಕ ಕ್ಷೇತ್ರಗಳು ಹಾಗೂ ಇನ್ನಿತರರು ಈ ಆನೆಗಳನ್ನು ಸಾಕುವುದಕ್ಕೆ ಪರವಾನಿಗೆ ಪಡೆದಿದ್ದಾರೆ. ಒಟ್ಟು 1,251 ಆನೆ ಮಾಲಕತ್ವ ಪರವಾನಿಗೆ ನೀಡಲಾಗಿದೆ.

ಈಗ ಎಲ್ಲ ಆನೆ ಹಾಗೂ ಅದರ ಮಾಲಕರ ವಿವರವನ್ನು ಪಟ್ಟಿ ಮಾಡಲಾಗುವುದು. ಹಾಗೆಯೇ ಅವುಗಳ ಡಿಎನ್‌ಎ ವರದಿಯನ್ನೂ ಸಂಗ್ರಹಿಸಿಟ್ಟುಕೊಳ್ಳಲಾಗುವುದು. ಇದರಿಂದ ಆನೆಗಳ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಬಹುದು ಎಂದು ಕೇಂದ್ರ ಪರಿಸರ ಇಲಾಖೆ ತಿಳಿಸಿದೆ.

ಯಾವುದೇ ಆನೆ ವಿಷ ಸೇವನೆ ಹೊರೆತು ಬೇರಾವುದೇ ಕಾರಣಕ್ಕೆ ಸಾವನ್ನಪ್ಪಿದರೆ ಅದನ್ನು ಅಂತ್ಯಸಂಸ್ಕಾರ ಮಾಡದೆ, ಬೇರೆ ಪ್ರಾಣಿಗಳ ಆಹಾರಕ್ಕೆ ಬಳಸಿಕೊಳ್ಳಬಹುದು ಎಂದು ಕೇಂದ್ರವು ರಾಜ್ಯ ಸರಕಾರಗಳಿಗೆ ನಿರ್ದೇಶಿಸಲಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next