ಬೆಂಗಳೂರು: ಕೇಂದ್ರ ಸರ್ಕಾರ ಕೊಟ್ಡ ಯಾವ ಭರವಸೆಯನ್ನೂ ಈಡೇರಿಸಿಲ್ಲ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಕೇಂದ್ರ ಸರ್ಕಾರ ಬೆಲೆ ನಿಯಂತ್ರಣ ಮಾಡುತ್ತಿಲ್ಲ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಆರೋಪಿಸಿದ್ದಾರೆ.
ಇದನ್ನೂ ಓದಿ:ಹೃತಿಕ್ – ಸೈಫ್ ʼವಿಕ್ರಂ ವೇದʼ ಟೀಸರ್ ಬಿಡುಗಡೆ: ಇದು ಗ್ಯಾಂಗ್ ಸ್ಟರ್ ಹೇಳಿದ ಕಥೆ!
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಮಂಡಕ್ಕಿ ಮೇಲೂ ಜಿಎಸ್ ಟಿ ಹಾಕಿದ್ದಾರೆ. ಚಿತಾಗಾರದ ಮೇಲೂ ಜಿಎಸ್ ಟಿ ವಿಧಿಸಿದ್ದಾರೆ. ನಂಬರ್ ಒನ್ ಸ್ಥಾನದಲ್ಲಿದ್ದ ಕರ್ನಾಟಕವನ್ನು ಹದಗೆಡಿಸಿದ್ದಾರೆ. ಯುಪಿ ಮಾಡೆಲ್ ಮಾಡುತ್ತೇವೆ ಎನ್ನುತ್ತಾ ರಾಜ್ಯವನ್ನ ಕೊನೆಯ ಸ್ಥಾನಕ್ಕೆ ಕೊಂಡೊಯ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಮೊದಲ ಹಂತದ ಪ್ರವಾಸ ಮಾಡಿದ್ದೇನೆ ಕಾರ್ಯಕರ್ತರ ಸಭೆಯನ್ನೂ ನಡೆಸಿದ್ದೇನೆ. ಹೋದ ಕಡೆ ಮಠಗಳಿಗೆ ಭೇಟಿ ನೀಡಿದ್ದೇನೆ. ಚಿತ್ತಾಪುರ ಮಠ, ಶರಣ ಬಸವೇಶ್ವರಮಠ, ಹುಬ್ಬಳ್ಳಿ ಸಿದ್ಧಾರೂಡ ಮಠಗಳಿಗೆ ಭೇಟಿ ನೀಡ್ತಿದ್ದೇನೆ. ಧಾರವಾಡದ ಮುರುಘಾಮಠಕ್ಕೂ ಭೇಟಿ ನೀಡಿದ್ದೆ ಎಂದರು.
Related Articles
ಸಿದ್ದರಾಮಯ್ಯ ರಂಭಾಪುರಿ ಶ್ರೀ ಭೇಟಿ ಅವರ ವೈಯುಕ್ತಿಕ ವಿಚಾರ. ಅವರಿಬ್ಬರು ಖಾಸಗಿಯಾಗಿ ಮಾತನಾಡಿದ್ದಾರೆ. ನಾನು ಅದರ ಬಗ್ಗೆ ಮಾತನಾಡಲ್ಲ. ಅವರು ಏನು ಮಾತನಾಡಿದ್ದಾರೆ ಗೊತ್ತಿಲ್ಲ ಎಂದು ಹೇಳಿದರು.