Advertisement

ಕಾಶ್ಮೀರದಲ್ಲಿ ಏನಾಗ್ತಾ ಇದೆ?: ಕೇಂದ್ರ ಭೀತಿ ಸೃಷ್ಟಿಸುತ್ತಿದೆ: ಗುಲಾಂ ನಬಿ

09:11 AM Aug 04, 2019 | Team Udayavani |

ಜಮ್ಮು-ಕಾಶ್ಮೀರ; ಕಣಿವೆ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅರೆಸೇನಾ ಪಡೆ ಯೋಧರನ್ನು ನೇಮಿಸುವ ಮೂಲಕ ಕೇಂದ್ರ ಸರಕಾರ ಭೀತಿ ಸೃಷ್ಟಿಸುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.ಈ ಕುರಿತಾಗಿ ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕಾಂಗ್ರೆಸ್‌ ಮುಖಂಡ ಗುಲಾಂ ನಬಿ ಆಜಾದ್‌, ಸರಕಾರ ವೃಥಾ ಹೆದರಿಕೆ ಸೃಷ್ಟಿಸುತ್ತಿದೆ ಎಂದು ದೂರಿದ್ದಾರೆ.

Advertisement

ಪ್ರವಾಸಿಗರನ್ನು ವಾಪಸ್‌ ಹೋಗಲು ಯಾವ ಸರಕಾರಗಳೂ ಹೇಳಿಲ್ಲ:

ಪ್ರವಾಸಿಗರನ್ನು ಕಣಿವೆ ರಾಜ್ಯದಿಂದ ವಾಪಸ್‌ ಹೋಗುವಂತೆ ಹೇಳುತ್ತಿದೆ. ಹಿಂದಿನ ಯಾವ ಸರಕಾರವೂ ಪ್ರವಾಸಿಗರನ್ನು ವಾಪಸ್‌ ಹೋಗುವಂತೆ ಹೇಳಿಲ್ಲ. ಅಮರನಾಥ ಯಾತ್ರೆಗೆ ಯಾವುದೇ ಸಮಸ್ಯೆಯಿಲ್ಲದಿದ್ದರೂ, ಅಮರನಾಥ ಯಾತ್ರಿಗಳನ್ನು ವಾಪಸ್‌ ಕಳಿಸಲಾಗುತ್ತಿದೆ. ಯಾವುದೇ ಬೆದರಿಕೆಯ ಬಗ್ಗೆ ವಿವರಗಳಿಲ್ಲ. ಈ ವರ್ಷ ಕಾಶ್ಮೀರದಲ್ಲಿ ಅತಿ ಕಡಿಮೆ ಉಗ್ರ ಚಟುವಟಿಕೆಗಳಿದ್ದವು. ಯಾವುದೇ ಭೀತಿಯ ಬಗ್ಗೆ ವಿವರಗಳಿಲ್ಲ. ಆದರೂ ಸರಕಾರವೇ ಭೀತಿ ಸೃಷ್ಟಿಸುತ್ತಿದೆ. ಆದರೆ  ಯಾವ ಉದ್ದೇಶದಿಂದ ಇಷ್ಟೊಂದು ಪ್ರಮಾಣದಲ್ಲಿ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಹೇಳಲಿ ಎಂದು ಗುಲಾಂ ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next