Advertisement

ಫೆ.1ಕ್ಕೆ ಕೇಂದ್ರ ಬಜೆಟ್‌ ಮಂಡನೆ

10:26 AM Dec 04, 2017 | |

ಹೊಸದಿಲ್ಲಿ: ಮುಂದಿನ ವರ್ಷದ ಜನವರಿ 30ರಿಂದ 2018ರ ಬಜೆಟ್‌ ಅಧಿವೇಶನ ಆರಂಭವಾಗಲಿದ್ದು, ಫೆ. 1ರಂದು ಬಜೆಟ್‌ ಮಂಡನೆಯಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಸರಕಾರದ ಮೂಲಗಳು ತಿಳಿಸಿವೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಾದ ಅನಂತರದ ಮೊದಲ ಬಜೆಟ್‌ ಇದಾಗಲಿದ್ದು, ಇದು ಮೋದಿ ಸರಕಾರದ ಕಡೆಯ ಪೂರ್ಣ ಪ್ರಮಾಣದ ಬಜೆಟ್‌ ಆಗಿರಲಿದೆ. 

Advertisement

ಬಜೆಟ್‌ ಅಧಿವೇಶನದ ಬಗ್ಗೆ ಕೇಂದ್ರ ವಿತ್ತ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿ ಪ್ರಕಾರ, ಜ. 30ರಂದು ಶುರುವಾಗುವ ಬಜೆಟ್‌ ಅಧಿವೇಶನದ ವೇಳೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಉಭಯ ಸದನಗಳನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಮರುದಿನ, ಜಿಎಸ್‌ಟಿ ಅನಂತರದ ಆರ್ಥಿಕ ಸ್ಥಿತಿಗತಿಗಳ ಕುರಿತಾಗಿ ನಡೆಸಲಾಗುತ್ತಿರುವ ಸಮೀಕ್ಷಾ ವರದಿಯನ್ನು ಸದನದಲ್ಲಿ ಮಂಡಿಸಲಾಗುತ್ತದೆ. 

ಈ ಬಾರಿಯ ಚಳಿಗಾಲದ ಅಧಿವೇಶನ ಡಿ. 15ರಿಂದ ಜನವರಿ 5ರ ವರೆಗೆ ನಡೆಯಲಿದ್ದು, ಈ ಅಧಿವೇಶನ ಮುಗಿದ ಕೇವಲ ಒಂದು ತಿಂಗಳೊಳಗೇ ಮತ್ತೂಂದು ಅಧಿವೇಶನ (ಬಜೆಟ್‌ ಅಧಿವೇಶನ) ನಡೆಯುತ್ತಿರುವುದು ಅಪರೂಪದ ಸಂಗತಿ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next