Advertisement

Onion exports ಕನಿಷ್ಠ ಬೆಲೆ‌ ಮಿತಿ ರದ್ದು ಮಾಡಿದ ಕೇಂದ್ರ

01:01 AM Sep 14, 2024 | Team Udayavani |

ಹೊಸದಿಲ್ಲಿ: ದೇಶದ ರೈತರ ಆದಾಯ ಹೆಚ್ಚಿಸುವುದಕ್ಕಾಗಿ ಕೇಂದ್ರ ಸರಕಾರವು ಈರುಳ್ಳಿ ರಫ್ತು ಮೇಲಿನ ಕನಿಷ್ಠ ಬೆಲೆ ಮಿತಿಯನ್ನು ರದ್ದು ಮಾಡಿದೆ. ಈ ಹಿಂದೆ ಸರಕಾರವು ಪ್ರತೀ ಟನ್‌ ಈರುಳ್ಳಿ ರಫ್ತಿಗೆ 46 ಸಾವಿರ ರೂ. (550 ಡಾಲರ್‌) ಕನಿಷ್ಠ ಬೆಲೆಯನ್ನು ನಿಗದಿ ಮಾಡಿತ್ತು. ಈ ಬೆಲೆಗಿಂತ ಕಡಿಮೆಗೆ ರೈತರು ವಿದೇಶಕ್ಕೆ ಈರುಳ್ಳಿ ಮಾರಾಟ ಮಾಡಲಾಗು ತ್ತಿರಲಿಲ್ಲ. ದೇಶದಲ್ಲಿ ಈರುಳ್ಳಿ ಬೆಲೆ ಹೆಚ್ಚುತ್ತಿರುವಂತೆಯೇ ರಫ್ತು ಮಿತಿಯನ್ನು ರದ್ದು ಮಾಡಿದೆ. ಮಹಾರಾಷ್ಟ್ರ ಚುನಾವಣೆ ಹಿನ್ನೆಲೆಯಲ್ಲಿ ಈ ನಿರ್ಧಾರ ಮಹತ್ವ ಪಡೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next