Advertisement

ಅನಾಮಿಕ ಅಧಿಕಾರಿಗಳ ವಿರುದ್ಧ ದೂರು ನೀಡಿಲ್ಲ ಎಂದ ಕೇಂದ್ರ

12:20 AM May 10, 2019 | Team Udayavani |

ಹೊಸದಿಲ್ಲಿ: ರಫೇಲ್‌ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂಕೋರ್ಟ್‌ ಅನ್ನು ತಪ್ಪುದಾರಿಗೆಳೆದ ಕಾರಣಕ್ಕೆ ಅನಾಮಿಕ ಅಧಿಕಾರಿಗಳ ವಿರುದ್ಧ ಕೇಂದ್ರ ಸರಕಾರ ದೂರು ದಾಖಲಿಸಿದೆ ಎಂಬ ಆರೋಪ ನಿರಾಧಾರ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರಕಾರ ಹೇಳಿದೆ. ಈ ಸಂಬಂಧ ಅಫಿಡವಿಟ್‌ ಅನ್ನು ಕೋರ್ಟ್‌ಗೆ ಸಲ್ಲಿಸಲಾ ಗಿದ್ದು, ನಾವು ದಾಖಲೆಗಳ ಆಧಾರದಲ್ಲಿ ವಾದ ಮಂಡಿಸುತ್ತಿದ್ದೇವೆ. ಆದರೆ ದೂರು ದಾರರು ಮಾಧ್ಯಮದಲ್ಲಿ ಪ್ರಕಟವಾದ ಆಯ್ದ ಕದ್ದ ಕಡತಗಳನ್ನು ಆಧರಿಸಿ ವಾದಿಸುತ್ತಿದ್ದಾರೆ. ಇದು ರಕ್ಷಣಾ ವಹಿವಾಟಿನ ಅಪೂರ್ಣ ಚಿತ್ರಣವನ್ನು ನೀಡುತ್ತಿದೆ ಎಂದು ಸರಕಾರದ ಪರ ವಕೀಲರು ವಾದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ವಿಚಾರಣೆ ನಡೆಸಲು ಮುಖ್ಯ ನ್ಯಾ| ರಂಜನ್‌ ಗೊಗೋಯ್‌ ನೇತೃತ್ವದ ಪೀಠ ನಿರ್ಧರಿಸಿದೆ.

Advertisement

ಇನ್ನೊಂದೆಡೆ, ಹೆಚ್ಚುವರಿ ಅಫಿಡವಿಟ್‌ ಸಲ್ಲಿಸಿರುವ ದೂರುದಾರರಾದ ಯಶವಂತ ಸಿನ್ಹಾ, ಅರುಣ್‌ ಶೌರಿ ಹಾಗೂ ವಕೀಲ ಪ್ರಶಾಂತ್‌ ಭೂಷಣ್‌, ಸುಪ್ರೀಂಕೋರ್ಟ್‌ ನಿಂದ ತಮಗೆ ಬೇಕಾದ ತೀರ್ಪನ್ನು ಪಡೆ ಯಲು ಕೋರ್ಟನ್ನು ಕೇಂದ್ರ ಸರಕಾರವು ತಪ್ಪುದಾರಿಗೆ ಎಳೆದಿದೆ ಹಾಗೂ ಮೋಸ ಮಾಡಿದೆ. ಈಗಲೂ ಕೋರ್ಟ್‌ಗೆ ಡೀಲ್‌ನ ಸಮಗ್ರ ಮಾಹಿತಿಯನ್ನು ಕೇಂದ್ರ ಬಹಿರಂಗಗೊಳಿಸುತ್ತಿಲ್ಲ ಎಂದು ವಾದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next