Advertisement

ರಜಿನಿ- ಶಿವಣ್ಣ ‘ಜೈಲರ್‌’ ಗೆ 11 ಕಡೆ ಕತ್ತರಿ ಹಾಕಿದ ಸೆನ್ಸಾರ್‌ ಮಂಡಳಿ

11:25 AM Aug 03, 2023 | Team Udayavani |

ಸೂಪರ್‌ಸ್ಟಾರ್‌ ರಜನಿಕಾಂತ್‌ ಮತ್ತು ಹ್ಯಾಟ್ರಿಕ್‌ ಹೀರೋ ಶಿವರಾಜ ಕುಮಾರ್‌ ಮೊದಲ ಬಾರಿಗೆ ತೆರೆಮೇಲೆ ಒಟ್ಟಾಗಿ ಕಾಣಿಸಿಕೊಳ್ಳುತ್ತಿರುವ “ಜೈಲರ್‌’ ಸಿನಿಮಾದ ಬಿಡುಗಡೆಗೆ ಕೌಂಟ್‌ಡೌನ್‌ ಶುರುವಾ ಗಿದೆ. ಒಂದೆಡೆ “ಜೈಲರ್‌’ ಸಿನಿಮಾದ ಪ್ರಚಾರ ಕಾರ್ಯಗಳು ಜೋರಾಗಿ ನಡೆಯುತ್ತಿದ್ದರೆ, ಮತ್ತೂಂದೆಡೆ “ಜೈಲರ್‌’ಗೆ ಸಿನಿಮಾದ ಕೆಲವು ದೃಶ್ಯಗಳಿಗೆ ಸೆನ್ಸಾರ್‌ ಮಂಡಳಿ ಕತ್ತರಿ ಪ್ರಯೋಗ ಮಾಡಲು ಮುಂದಾಗಿದೆ ಎನ್ನಲಾಗುತ್ತಿದೆ.

Advertisement

“ಜೈಲರ್‌’ ಸಿನಿಮಾದಲ್ಲಿ ಬರುವ ಕೆಲವು ದೃಶ್ಯಗಳ ಉದ್ದವನ್ನು ಕಡಿಮೆ ಮಾಡುವಂತೆ ಮತ್ತು ಸಿನಿಮಾದಲ್ಲಿರುವ ಸುಮಾರು 11 ದೃಶ್ಯಗಳನ್ನು ಬದಲಾಯಿಸಬೇಕು. ಜೊತೆಗೆ ಸಿನಿಮಾದ ದೃಶ್ಯಗಳಲ್ಲಿರುವ ಕ್ರೌರ್ಯವನ್ನು ಕಡಿಮೆ ಮಾಡುವಂತೆ ಸೆನ್ಸಾರ್‌ ಮಂಡಳಿ ಚಿತ್ರತಂಡಕ್ಕೆ ಸೂಚಿಸಿದೆ ಎನ್ನಲಾಗಿದೆ.

ಇನ್ನು “ಜೈಲರ್‌’ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ರಜನಿಕಾಂತ್‌ ಮತ್ತು ಶಿವರಾಜಕುಮಾರ್‌ ಸಿಗರೇಟ್‌ ಸೇದುವ ದೃಶ್ಯಗಳಿದ್ದು, ಈ ದೃಶ್ಯಗಳಿಗೂ ಸೆನ್ಸಾರ್‌ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದ್ದು, ಕೆಲ ಸಂಭಾಷಣೆಗಳನ್ನು ಮ್ಯೂಟ್‌ ಮಾಡುವಂತೆಯೂ ಸೆನ್ಸಾರ್‌ ಮಂಡಳಿ ಸೂಚಿಸಿದೆ ಎಂದು ಬಲ್ಲ ಮೂಲಗಳ ವರದಿಗಳು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next