Advertisement
ಕಾರ್ಕಳ : ಪೆರ್ವಾಜೆಯ ಕಿನ್ನಿಮಾದ ಶೆಟ್ಟಿಗಾರ ಎಂಬವರ ಮನೆಯ ಆವರಣದಲ್ಲಿ 1902ರಲ್ಲಿ ಆರಂಭಗೊಂಡ ಈ ಸರಕಾರಿ ಪ್ರಾಥಮಿಕ ಶಾಲೆಯೀಗ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.1977ರಲ್ಲಿ ಎಚ್. ಶಿವರಾಮ ಶೆಟ್ಟರು ಮುಖ್ಯಶಿಕ್ಷಕರಾಗಿ ನಿಯುಕ್ತಿಗೊಂಡ ಬಳಿಕ
ಈ ಶಾಲೆ ಹಂತ ಹಂತವಾಗಿ ಅಭಿವೃದ್ಧಿಯತ್ತ ಸಾಗಿತು.
Related Articles
ವಿಶೇಷ ತರಗತಿ, ನುರಿತ ಶಿಕ್ಷಕರಿಂದ ನಲಿ-ಕಲಿ ತರಗತಿ, ಸುಸಜ್ಜಿತವಾದ
ವಾಚನಾಲಯ ವ್ಯವಸ್ಥೆ, ವಿಜ್ಞಾನ ಪ್ರಯೋಗಾಲಯ ಸಹಿತ ಎಲ್ಲ
ವ್ಯವಸ್ಥೆಗಳೂ ಈ ಶಾಲೆಯಲ್ಲಿವೆ.
Advertisement
ಇಂಗ್ಲಿಷ್ ಶಿಕ್ಷಣ2019-20ನೇ ಶೈಕ್ಷಣಿಕ ವರ್ಷದಿಂದ 1ನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ
ಪ್ರಾರಂಭವಾಗಿದೆ. 7ನೇ ತರಗತಿಯ ವಿದ್ಯಾರ್ಥಿಗಳಿಗೆ ನ್ಪೋಕನ್ ಇಂಗ್ಲೀಷ್ ನೆರೆಯ ಸುಂದರ ಪುರಾಣಿಕ ಸ್ಮಾರಕ ಪ್ರೌಢಶಾಲೆಯಲ್ಲಿ ಉಚಿತವಾಗಿ ನೀಡಲ್ಪಡುತ್ತಿದೆ. ಅಲ್ಲದೆ ಪ್ರೌಢಶಾಲೆಯ ಅಟಲ್ ಟಿಂಕರಿಂಗ್ ಲ್ಯಾಬ್ ಕೂಡ 6ನೇ ಮತ್ತು 7ನೇ ತರಗತಿಯವರಿಗೆ ಬಳಕೆಯಾಗುತ್ತಿದೆ. ಶ್ರೀರಮಣ ಆಚಾರ್ 11 ವರ್ಷಗಳ ಕಾಲ ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿ ಶಾಲಾಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಪ್ರಸ್ತುತ ರಮೇಶ್ ಶೆಟ್ಟಿಗಾರ್ ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಳೆ ವಿದ್ಯಾರ್ಥಿಗಳು
ಇಸ್ರೋದಲ್ಲಿ 35 ವರ್ಷ ಕಾರ್ಯನಿರ್ವಹಿಸಿರುವ ವಿಜ್ಞಾನಿ ಇಡ್ಯ ಜನಾರ್ದನ್ ಈ ಶಾಲೆಯ ಹಳೆ ವಿದ್ಯಾರ್ಥಿ. ಪ್ರಸ್ತುತ ಇಸ್ರೋದಲ್ಲಿರುವ ವೈ. ದೇವದಾಸ ಶೆಣೈ ಮಣಿಪಾಲ ಕೆಎಂಸಿಯ ಮೂಳೆ ತಜ್ಞ ಡಾ| ಶರತ್ ಸೇರಿದಂತೆ ಹಲವಾರು ಮಂದಿ ವೈದ್ಯರು ಎಂಜಿನಿಯರ್‌ಗಳು ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಕ ಪಡೆದಿದ್ದಾರೆ. ಇಲ್ಲಿ ಗುಣಮಟ್ಟದ, ನೈತಿಕ ಶಿಕ್ಷಣ ದೊರೆಯುತ್ತಿರುವುದರಿಂದ ಬೇರೆ ಜಿಲ್ಲೆಯ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕ್ರೀಡಾ ಕ್ಷೇತ್ರದಲ್ಲೂ ಇಲ್ಲಿನ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಪ್ರಸ್ತುತ ನಮ್ಮ ಶಾಲೆಯಲ್ಲಿ 465 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಖಾಸಗಿ ಶಾಲೆಗಳಿಂದಲೂ ವಿದ್ಯಾರ್ಥಿಗಳು ನಮ್ಮ ಶಾಲೆಗೆ ದಾಖಲಾಗುತ್ತಿರುವು ದನ್ನು ಕಂಡಾಗ ಶಾಲೆ ಕುರಿತು ಹೆಮ್ಮೆ ಎನಿಸುತ್ತಿದೆ. ಹಳೆ ವಿದ್ಯಾರ್ಥಿಗಳ, ಪೋಷಕರ, ಊರವರ, ದಾನಿಗಳ ಸಹಾಯದಿಂದ ಶಾಲೆ ಅಭಿವೃದ್ಧಿ ಪಥದತ್ತಸಾಗುತ್ತಿದೆ.
-ಲಕ್ಷಿ¾à ಹೆಗಡೆ, , ಮುಖ್ಯಶಿಕ್ಷಕರು 1951ರ ಸಂದರ್ಭ 5ನೇ ತರಗತಿವರೆಗೆ ಅನಂತಶಯನ ಗೋಪುರದಲ್ಲಿ ಪಾಠ ಪ್ರವಚನ ನಡೆಯುತ್ತಿತ್ತು. ತಾಲೂಕಿನ ವಿವಿಧೆಡೆಯ ವಿದ್ಯಾರ್ಥಿಗಳು ಅಂದು ಈ ಶಾಲೆಯನ್ನೇ ಅವಲಂಬಿಸಿದ್ದರು. ಇಲ್ಲಿನ ಹಳೆ ವಿದ್ಯಾರ್ಥಿ ಎನ್ನುವ ಹೆಮ್ಮೆ ನನ್ನದು.
-ಇಡ್ಯ ಜನಾರ್ದನ್, ಇಸ್ರೋ ವಿಜ್ಞಾನಿ - ರಾಮಚಂದ್ರ ಬರೆಪ್ಪಾಡಿ