Advertisement

ಪಾಕ್‌ನಿಂದ ಕದನ ವಿರಾಮ ಉಲ್ಲಂಘನೆ: ಯೋಧ ಹುತಾತ್ಮ 

06:15 AM May 16, 2018 | |

ಜಮ್ಮು: ಪಾಕಿಸ್ತಾನ ಸೇನಾ ಪಡೆಗಳು ಜಮ್ಮು ಮತ್ತು ಕಾಶ್ಮೀರದ ಸಾಂಬಾ ವಲಯದಲ್ಲಿ ಕದನ ವಿರಾಮ ನಿಯಮ
ಉಲ್ಲಂಘಿಸಿ ಗುಂಡು ಹಾರಿಸಿವೆ. ಹೀಗಾಗಿ 28 ವರ್ಷದ ಬಿಎಸ್‌ಎಫ್ ಯೋಧರೊಬ್ಬರು ಹುತಾತ್ಮರಾಗಿದ್ದಾರೆ ಎಂದು
ಅರೆ ಸೇನಾಪಡೆಯ ಮುಖ್ಯಸ್ಥ ಕೆ.ಕೆ.ಶರ್ಮಾ ಹೇಳಿದ್ದಾರೆ.

Advertisement

ಸಾಂಬಾ ವಲಯದ ಮಂಗೂಚರಕ್‌ ಎಂಬಲ್ಲಿರುವ ಗಡಿ ಹೊರಠಾಣೆ ಸಮೀಪ ಪಾಕ್‌ ಸೈನಿಕರು ಒಳ ನುಸುಳಲು
ಮುಂದಾಗಿದ್ದರು. ಅದಕ್ಕಾಗಿ ಅವರು ಗುಂಡು ಹಾರಿಸುತ್ತಾ ಒಳ ಪ್ರವೇಶಿಸಿದರು. ಈ ಸಂದರ್ಭದಲ್ಲಿ ಯೋಧರು ಸೂಕ್ತ
ಪ್ರತ್ಯುತ್ತರ ನೀಡಿ ಗುಂಡು ಹಾರಿಸಿ ಅವರ ಪ್ರಯತ್ನ ಹಿಮ್ಮೆಟ್ಟಿಸಿದರು. ಈ ಸಂದರ್ಭದಲ್ಲಿ ಒಬ್ಬ ಯೋಧ 
ಹುತಾತ್ಮರಾದರು.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಕಣಿವೆ ರಾಜ್ಯಕ್ಕೆ ಮೇ 19ರಂದು ಭೇಟಿ ನೀಡಲಿರುವಂತೆಯೇ ಉಗ್ರರು ಎಲ್‌
ಒಸಿ ಮೂಲಕ ಒಳ ನುಸುಳಲು ಮಾಡಿದ ಎರಡು ಪ್ರಯತ್ನಗಳನ್ನು ಭದ್ರತಾ ಪಡೆಗಳು ವಿಫ‌ಲಗೊಳಿಸಿವೆ. ಇದರ
ಹೊರತಾಗಿಯೂ ಐವರು ಸದಸ್ಯರ ಉಗ್ರರ ತಂಡ ಒಳನುಸುಳುವಲ್ಲಿ ಯಶಸ್ವಿಯಾಗಿದೆ. ಅವರ ಪತ್ತೆಗಾಗಿ ಸೇನೆ
ಹೆಲಿಕಾಪ್ಟರ್‌ಗಳನ್ನು ಬಳಸುತ್ತಿದೆ. ಜನವರಿ ಮತ್ತು ಫೆಬ್ರವರಿಯಲ್ಲಿ ಸತತವಾಗಿ ಕದನ ವಿರಾಮ ಉಲ್ಲಂಘನೆಯ
ಪ್ರಕರಣಗಳು ವರದಿಯಾದ ಬಳಿಕ ಇತ್ತೀಚಿನ ತಿಂಗಳುಗಳಲ್ಲಿ ಎಲ್‌ಒಸಿ ವ್ಯಾಪ್ತಿಯಲ್ಲಿ ಗುಂಡಿನ ಸದ್ದಿನ ಪ್ರಮಾಣ
ಗಣನೀಯವಾಗಿ ತಗ್ಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next