Advertisement

ಪಾಕ್‌ ಟೊಮೆಟೊ ತುಟ್ಟಿಗೆ ಭಾರತ ವಿರೋಧಿ ನೀತಿ ಕಾರಣ

07:20 AM Oct 29, 2017 | Team Udayavani |

ಹೊಸದಿಲ್ಲಿ:  “ಪಾಕಿಸ್ಥಾನದ ಲಾಹೋರ್‌ ಸಹಿತ ಹಲವು ನಗರಗಳಲ್ಲಿ ಟೊಮ್ಯಾಟೋ ಬೆಲೆ ಕೇಜಿಗೆ 300 ರೂ. ತಲು ಪಿದೆ. ಇದಕ್ಕೆ ಪಾಕಿಸ್ಥಾನದ ರಾಜಕೀಯ ನಾಯಕರಲ್ಲಿರುವ ಭಾರತ ವಿರೋಧಿ ನೀತಿಯೇ ಕಾರಣ’. ಪಾಕಿಸ್ಥಾನದ ಪ್ರಮುಖ ದಿನಪತ್ರಿಕೆಯಾದ ಡಾನ್‌ನಲ್ಲಿ ಪ್ರಕಟವಾದ ಲೇಖನದಲ್ಲಿ ಇಂತಹುದೊಂದು ಅಭಿಪ್ರಾಯ ವ್ಯಕ್ತವಾಗಿದೆ.

Advertisement

ಭಾರತವನ್ನು ಶತ್ರುರಾಷ್ಟ್ರವಾಗಿ ಕಾಣುವ ಕೆಲವರು, “ಭಾರತದಿಂದ ಆಮದು ಮಾಡಿಕೊಳ್ಳಬೇಡಿ, ಭಾರತದ ಉತ್ಪನ್ನಗಳನ್ನು ನಿರಾಕರಿಸಿ’ ಎಂಬಿತ್ಯಾದಿ ಸಂದೇಶಗಳನ್ನು ಬಿತ್ತರಿಸುತ್ತಾರೆ. ಭಾರತದಿಂದ ಸರಕು ಆಮದು ಮಾಡಿಕೊಳ್ಳಲು ಪಾಕ್‌ ಸರಕಾರ ಅವಕಾಶ ನೀಡುತ್ತಿಲ್ಲ. ಒಟ್ಟಿನಲ್ಲಿ, ಸರಕಾರದ ಅಹಂಕಾರ ಹಾಗೂ ಭಾರತ ವಿರೋಧಿ ಉನ್ಮಾದದಿಂದ ಜನಸಾಮಾನ್ಯರು ಕಷ್ಟ ಅನುಭವಿಸುವಂತಾಗಿದೆ ಎಂದು ಲೇಖನದಲ್ಲಿ ಬರೆಯಲಾಗಿದೆ. “ಬೇರೆ ದೇಶದ ರೈತರಿಗೆ ಏಕೆ ಅನುಕೂಲ ಮಾಡಿಕೊಡಬೇಕು’ ಎಂದು ಪ್ರಶ್ನಿಸುವ ಸಚಿವರ ತಲೆಯ ಮೇಲೆ ಇಡೀ ಲೋಡು ಟೊಮೆಟೋ ಸುರಿಯ ಬೇಕು. ಕುರುಡು ರಾಷ್ಟ್ರೀಯ ವಾದವೇ ಇಂಥ ಸಮಸ್ಯೆಗೆ ಕಾರಣ’ ಎಂದಿದ್ದಾರೆ ಲೇಖಕ.

Advertisement

Udayavani is now on Telegram. Click here to join our channel and stay updated with the latest news.

Next