ಹೊಸದಿಲ್ಲಿ: ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್‌ನನ್ನು ವಿಶ್ವಸಂಸ್ಥೆಯ ನಿಷೇಧಿತ ಉಗ್ರರ ಪಟ್ಟಿಗೆ ಸೇರಿಸಲು ಪುಲ್ವಾಮಾ ದಾಳಿಯೇ ಪ್ರಮುಖ ಅಂಶವಾಗಿದೆ. ಈ ಕ್ರಮ ಅಜರ್‌ನ ಉಗ್ರ ಚಟುವಟಿಕೆಗಳ ಬಯೋಡೇಟಾ ಅಲ್ಲ ಎಂದು ಭಾರತದ ಸ್ಪಷ್ಟನೆ ನೀಡಿದೆ. ಗುರುವಾರ ಹೊಸದಿಲ್ಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್, ಇಂಥ ಕ್ರಮ ಕೈಗೊಳ್ಳಲು ಚೀನಾ ಜತೆಗೆ ಯಾವುದೇ ಒಪ್ಪಂದ ಮಾಡಿಕೊಳ್ಳಲಾಗಿಲ್ಲ ಎಂದು ಹೇಳಿದ್ದಾರೆ. ಅಜರ್‌ಗೆ ನಿಷೇಧ ಹೇರುವ ವೇಳೆ ಪ್ರಸ್ತಾಪಿಸಿದ ಉಲ್ಲೇಖಗಳಲ್ಲಿ ಪುಲ್ವಾಮಾ ದಾಳಿ ಕೈಬಿಡಲಾಗಿದೆ ಎಂಬುದಕ್ಕೆ ಸಂಬಂಧಿಸಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಗುರುವಾರ ಸ್ಪಷ್ಟನೆ ನೀಡಿದ್ದಾರೆ.
ಅಜರ್‌ನನ್ನು ಹಲವು ಉಗ್ರ ಕೃತ್ಯಗಳ ಆಧಾರದ ಮೇಲೆ ಅಂತಾರಾಷ್ಟ್ರೀಯ ಉಗ್ರ ಎಂದು ಘೋಷಿಸಲಾಗಿದೆ. ಜಾಗತಿಕ ಉಗ್ರ ಎಂದು ಆತನನ್ನು ಘೋಷಿಸಬೇಕೆಂಬುದೇ ನಮ್ಮ ಮೂಲ ಉದ್ದೇಶ. ನಾವು ಭಯೋತ್ಪಾದನೆ ಹಾಗೂ ದೇಶದ ಭದ್ರತೆ ವಿಚಾರದಲ್ಲಿ ಯಾವುದೇ ದೇಶದೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ರವೀಶ್ ಹೇಳಿದ್ದಾರೆ.
ಸಂಭ್ರಮಾಚರಿಸಲೂ ಸಂಕಟ: ಅಜರ್ ನಿಷೇಧಗೊಂ ಡಿದ್ದಕ್ಕೆ ಕಾಂಗ್ರೆಸ್ ಸಂಭ್ರಮಾಚರಿಸಲೂ ಆಗುತ್ತಿಲ್ಲ. ಸಂಭ್ರಮಾಚರಿಸಿದರೆ ರಾಜಕೀಯ ಅನನುಕೂಲ ಉಂಟಾಗುತ್ತದೆ ಎಂದು ಹೆದರುತ್ತಿದೆ. ಅಜರ್ ನಿಷೇಧ ಮೋದಿ ಸರಕಾರದ ನಿರಂತರ ಪ್ರಯತ್ನದ ಫಲ ಎಂದು ಕೇಂದ್ರ ಸಚಿವ ಅರುಣ್ ಜೇಟಿÉ ಹಾಗೂ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ನಿಷೇಧ ವಿವರಗಳಲ್ಲಿ ಎಲ್ಲ ಉಗ್ರ ಕೃತ್ಯ ಉಲ್ಲೇಖೀಸುವ ಅಗತ್ಯವಿಲ್ಲ. ಆತನನ್ನು ನಿಷೇಧಿಸುವುದು ಮುಖ್ಯ. ಇದರ ಪರಿಣಾಮ ಆ ದೇಶ ಎದುರಿಸಬೇಕಾಗುತ್ತದೆ ಎಂದು ಜೇಟಿÉ ಹೇಳಿದ್ದಾರೆ.
ಸೊತ್ತು ಮುಟ್ಟುಗೋಲು
ವಿಶ್ವಸಂಸ್ಥೆಯು ಅಜರ್‌ನನ್ನು ನಿಷೇಧಿಸಿದ ಬೆನ್ನಲ್ಲೇ ಪಾಕಿಸ್ಥಾನವು ಗುರುವಾರ ಮಸೂದ್‌ನ ಎಲ್ಲ ಸೊತ್ತುಗಳನ್ನು ಜಪ್ತಿ ಮಾಡಿದೆ ಮತ್ತು ಆತ ಪ್ರಯಾಣ ಮಾಡದಂತೆ ನಿಷೇಧ ವಿಧಿಸಿದೆ. ಅಜರ್ ಈವರೆಗೆ ಹೊಂದಿದ್ದ ಎಲ್ಲ ಹಣಕಾಸು ಸ್ವತ್ತು ಮತ್ತು ಹಣವನ್ನು ಜಪ್ತಿ ಮಾಡಲಾಗಿದೆ. ಅಲ್ಲದೆ ವಿದೇಶಗಳಿಗೆ ತೆರಳದಂತೆಯೂ ಅಜರ್‌ಗೆ ನಿಷೇಧ ವಿಧಿಸಲಾಗಿದೆ. ಅಲ್ಲದೆ, ತಕ್ಷಣವೇ ಅಜರ್ ವಿರುದ್ಧ ನಿಷೇಧವನ್ನು ಜಾರಿಗೊಳಿಸಲಾಗುತ್ತದೆ ಎಂದು ಪಾಕಿಸ್ಥಾನ ಹೇಳಿದೆ. ಇದರಿಂದಾಗಿ ಅಜರ್ ಯಾವುದೇ ದೇಶಕ್ಕೆ ತೆರಳಲಾಗದು. ಆದರೆ ಸ್ವದೇಶದಲ್ಲಿ ಈತ ಪ್ರಯಾಣ ನಡೆಸಬಹುದಾಗಿದೆ.