Advertisement

Fake ಅಂಕಪಟ್ಟಿ ನೀಡಿದ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿಯ ಸೆರೆ

01:10 AM Mar 20, 2024 | Team Udayavani |

ಮಂಗಳೂರು: ನಕಲಿ ಅಂಕಪಟ್ಟಿ ನೀಡಿ ವಂಚಿಸಲು ಯತ್ನಿಸಿದ್ದ ಪ್ರಕರಣದ ಆರೋಪಿಯೋರ್ವನನ್ನು 19 ವರ್ಷಗಳ ಬಳಿಕ ಕದ್ರಿ ಪೊಲೀಸರು ಬಂಧಿಸಿದ್ದಾರೆ.

Advertisement

ಅಯ್ಯನಕಟ್ಟೆ ನಿವಾಸಿ ಎ. ಕೆ. ಮೊಹಮ್ಮದ್‌ (49) ಬಂಧಿತ ಆರೋಪಿ. ಈತ 2005ನೇ ಇಸವಿಯಲ್ಲಿ ಪೆಟ್ರೋಲ್ ಬಂಕ್‌ ಡೀಲರ್‌ಶಿಪ್‌ ಬಗ್ಗೆ ಇಂಡಿಯಲ್ ಆಯಿಲ್ ಕಾರ್ಪೊರೇಶನ್‌ ಲಿಮಿಟೆಡ್‌ ಕೊಡಿಯಾಲ್
ಬೈಲ್ ನ ಡಿವಿಜನ್‌ ಮ್ಯಾನೇಜರ್‌ರಿಗೆ ನಕಲಿ ಅಂಕ ಪಟ್ಟಿ ನೀಡಿದ್ದ.

ಈ ಬಗ್ಗೆ ಕದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ. ಆರೋಪಿಯನ್ನು ಬೆಳ್ಳಾರೆಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next