ಆಲ್ದೂರು: ಚಿಕ್ಕಮಗಳೂರು ತಾಲೂಕಿನ ನಲ್ಲೂರು ಗ್ರಾಮದ ಇತಿಹಾಸ ಪ್ರಸಿದ್ದ ದಕ್ಷಿಣಮುಖೀ ವೀರಭದ್ರೇಶ್ವರ ಸ್ವಾಮಿ
ದೇವಸ್ಥಾನದ ಕೆಂಡೋತ್ಸವ ಮತ್ತು ವಾರ್ಷಿಕೋತ್ಸವದ ಅಂಗವಾಗಿ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ,
ಜನಜಾಗೃತಿ ಧರ್ಮ ಸಮಾರಂಭವು ಏ.2ರಂದು ನಲ್ಲೂರು ಗ್ರಾಮದಲ್ಲಿ ನಡೆಯಲಿದೆ.
ಸೋಮವಾರ ಬೆಳಿಗ್ಗೆ ಮಹಾಗಣಪತಿ, ವೀರಭದ್ರಸ್ವಾಮಿ, ಸೋಮೇಶ್ವರ ಸ್ವಾಮಿಗೆ ರುದ್ರಾಭಿಷೇಕ ನಡೆಯಲಿದೆ.
ಮಂಗಳವಾರ ಬೆಳಿಗ್ಗೆ ಪ್ರಾತಃಕಾಲ 6.30 ರಿಂದ 7.30 ರ ವರೆಗೆ ವೀರಭದ್ರಸ್ವಾಮಿಯ ಕೆಂಡೋತ್ಸವ ನಡೆಯಲಿದೆ.
ಇದೇ ದಿನ ಬೆಳಿಗ್ಗೆ 10 ಗಂಟೆಗೆ ಊರ ಹೆಬ್ಟಾಗಿಲಿನಿಂದ ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ
ಡಾ| ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಪುರಪ್ರವೇಶವಾಗಲಿದೆ. ಕಲ್ಲೇದೇವರಹಳ್ಳಿ
ಕಲ್ಲೇಶ್ವರ ದೇವಸ್ಥಾನದಿಂದ ನಲ್ಲೂರು ಗ್ರಾಮದ ರಾಜಬೀದಿಗಳಲ್ಲಿ ಅಡ್ಡಪಲ್ಲಕ್ಕಿ ಮಹೋತ್ಸವವು ನಡೆಯಲಿದೆ.
ರಂಭಾಪುರಿ ಶ್ರೀಗಳು ಊರ ಹೆಬ್ಟಾಗಿಲಿನಲ್ಲಿ ನೂತನವಾಗಿ ನಿರ್ಮಿಸಿರುವ ನಂದೀಶ್ವರ ವಿಗ್ರಹ ಉದ್ಘಾಟನೆ ಮಾಡಲಿದ್ದಾರೆ.
ಮಧ್ಯಾಹ್ನ ವೀರಭದ್ರಸ್ವಾಮಿ ದೇವಸ್ಥಾನದ ಆವರಣದಲ್ಲಿ ಜನಜಾಗೃತಿ ಧರ್ಮ ಸಮಾರಂಭ ಜರುಗಲಿದೆ.
ಈ ಕಾರ್ಯಕ್ರಮವು ಶಂಕರದೇವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ನಡೆಯಲಿದೆ.
ಹುಲಿಕೆರೆ ದೊಡ್ಡಮಠದ ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳು, ಬೇರುಗಂಡಿ ಬೃಹನ್ಮಠದ ರೇಣುಕ ಮಹಾಂತ
ಶಿವಾಚಾರ್ಯ ಸ್ವಾಮಿಗಳು, ಬೀರೂರು ಬಾಳೆಹೊನ್ನೂರು ಶಾಖಾ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು
ಆಶೀರ್ವಚನ ನೀಡಲಿದ್ದಾರೆ.
ಈ ಧರ್ಮಸಭೆಯನ್ನು ಜಗದ್ಗುರು ರೇಣುಕಾಚಾರ್ಯ ಟ್ರಸ್ಟ್‌ನ ಉಪಾಧ್ಯಕ್ಷೆ ಗೌರಮ್ಮ ಬಸವೇಗೌಡರು ಉದ್ಘಾಟಿಸಲಿದ್ದಾರೆ.
ಆದಿಶಕ್ತಿನಗರದ ಕರಿಬಸವೇಶ್ವರ ದೇವಸ್ಥಾನದ ಧರ್ಮಾಧಿಕಾರಿ ಪಂಚಾಕ್ಷರಯ್ಯ ಸ್ವಾಗತ ಭಾಷಣ ಮಾಡಲಿದ್ದಾರೆ.