ನವದೆಹಲಿ: ಬೈಕ್ ಗೆ ಡಿಕ್ಕಿ ಹೊಡೆದು ಕಿಲೋ ಮೀಟರ್ ದೂರ ಎಳೆದೊಯ್ದ ಕಾರು, ಕಿಲೋ ಮೀಟರ್ ಗಟ್ಟಲೇ ಯುವತಿಯನ್ನು ಎಳೆದೊಯ್ದ ಕಾರು ಹೀಗೆ ಇತ್ತೀಚೆಗೆ ಇಂತಹ ಘಟನೆಗಳು ಹೆಚ್ಚುತ್ತಲೇ ಇದೆ. ಏತನ್ಮಧ್ಯೆ ಆಗ್ರಾದಿಂದ ನೋಯ್ಡಾಕ್ಕೆ ತೆರಳುತ್ತಿದ್ದ ಕಾರು ವ್ಯಕ್ತಿಯೊಬ್ಬನಿಗೆ ಡಿಕ್ಕಿ ಹೊಡೆದು ಬರೋಬ್ಬರಿ ಹತ್ತು ಕಿಲೋ ಮೀಟರ್ ದೂರದವರೆಗೆ ಎಳೆದೊಯ್ದ ಘಟನೆ ಯಮುನಾ ಎಕ್ಸ್ ಪ್ರೆಸ್ ವೇನಲ್ಲಿ ನಡೆದಿದೆ.
ಇದನ್ನೂ ಓದಿ:ದಳಪತಿ ಕೆರಿಯರ್ ನಲ್ಲಿ ಹೊಸ ದಾಖಲೆ ಬರೆದ ʼವಾರಿಸುʼ: ಟೋಟಲ್ ಕಲೆಕ್ಷನ್ ಎಷ್ಟು?
ಘಟನೆಗೆ ಸಂಬಂಧಿಸಿದಂತೆ ಕಾರು ಚಾಲಕ ವಿರೇಂದ್ರ ಸಿಂಗ್ ಎಂಬಾತನನ್ನು ವಶಕ್ಕೆ ಪಡೆದಿದ್ದು, ದಟ್ಟ ಮಂಜು ಕವಿದ ವಾತಾವರಣದ ಕಾರಣದಿಂದ ಅಪಘಾತ ಸಂಭವಿಸಿರುವಾಗಿ ತಿಳಿಸಿರುವುದಾಗಿ ವರದಿಯಾಗಿದೆ.
ಕಳೆದ ರಾತ್ರಿ ಎಕ್ಸ್ ಪ್ರೆಸ್ ವೇನಲ್ಲಿ ದಟ್ಟ ಮಂಜು ಕವಿದಿತ್ತು, ಇದರಿಂದಾಗಿ ವ್ಯಕ್ತಿಯೊಬ್ಬನಿಗೆ ಕಾರು ಡಿಕ್ಕಿ ಹೊಡೆದು ಹತ್ತು ಕಿಲೋ ಮೀಟರ್ ನಷ್ಟು ದೂರ ಎಳೆದೊಯ್ದಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ತ್ರಿಗುಣ್ ಬಿಸೆನ್ ತಿಳಿಸಿದ್ದಾರೆ.
ಮಥುರಾದ ಮಂತ್ ನಲ್ಲಿ ಭದ್ರತಾ ಸಿಬಂದಿ ಕಾರಿನ ಕೆಳಗೆ ವ್ಯಕ್ತಿಯೊಬ್ಬರ ಶವ ಸಿಲುಕಿಕೊಂಡಿರುವುದನ್ನು ಗಮನಿಸಿದ್ದರು. ಆ ನಂತರ ನೋಯ್ಡಾಕ್ಕೆ ತೆರಳುತ್ತಿದ್ದ ವೇಳೆ ಕಾರು ಟೋಲ್ ಬೂತ್ ಬಳಿ ನಿಲ್ಲಿಸಿದ ಸಂರ್ಭದಲ್ಲಿ ಅಲ್ಲಿನ ಸಿಬಂದಿಗಳು ಶವದ ಬಗ್ಗೆ ಗಮನಸೆಳೆದಿದ್ದರು ಎಂದು ವರದಿ ತಿಲಿಸಿದೆ.
ಮಾಧ್ಯಮಗಳ ವರದಿ ಪ್ರಕಾರ, ವಾಹನ ಚಾಲಕ ದೆಹಲಿ ನಿವಾಸಿಯಾಗಿದ್ದು, ಆತನ ವಿಚಾರಣೆ ನಡೆಸಲಾಗುತ್ತಿದೆ. ಸಿಸಿಟಿವಿ ಪೂಟೇಜ್ ಹಾಗೂ ಸ್ಥಳೀಯ ನಿವಾಸಿಗಳು ಕೂಡಾ ಘಟನೆ ಬಗ್ಗೆ ವಿವರಣೆ ಕೊಟ್ಟಿದ್ದರು.