Advertisement
ಚುನಾವಣಾ ಆಯೋಗ ಎರಡನೇ ಬಾರಿಗೆ ಚುನಾವಣಾ ದಿನಾಂಕ ಪ್ರಕಟಿಸಿರುವಂತೆ ಡಿ.5ರಂದು ಚುನಾವಣೆ ನಡೆದರೆ, ನ.11ರಂದು ಉಪ ಚುನಾವಣೆ ಅಧಿಸೂಚನೆ ಹೊರಬೀಳುವುದರೊಂದಿಗೆ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಅಂದಿನಿಂದಲೇ ಚುನಾವಣಾ ನೀತಿ ಸಂಹಿತೆಯೂ ಜಾರಿಯಾಗಲಿದೆ.
Related Articles
Advertisement
ಜತೆಗೆ ಎರಡು ವರ್ಷಗಳ ಹಿಂದೆ ಪಕ್ಷ ತೊರೆದು ಕಾಂಗ್ರೆಸ್ ಸೇರಿ ಲೋಕಸಭಾ ಚುನಾವಣೆ ಎದುರಿಸಿದ್ದ ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಕೂಡ ಬಿಜೆಪಿಗೆ ವಾಪಸ್ಸಾಗಿ 90ರ ದಶಕದಲ್ಲಿ ಹುಣಸೂರಿನಿಂದ ತಾವು ಬಿಜೆಪಿ ಶಾಸಕರಾಗಿದ್ದ ಕಾರಣಕ್ಕೆ ಪಕ್ಷ ಮತ್ತೂಮ್ಮೆ ಅವಕಾಶ ನೀಡಿದರೆ ಸ್ಪರ್ಧೆಗೆ ಸಿದ್ಧ ಎಂದಿದ್ದಾರೆ.
ದಳಪತಿಗಳ ನಡೆ ನಿಗೂಢ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಒಕ್ಕಲಿಗ ಮತದಾರರು ಸಂಪೂರ್ಣವಾಗಿ ಜೆಡಿಎಸ್ ಪರ ನಿಂತಿದ್ದರಿಂದ ಕ್ಷೇತ್ರಕ್ಕೆ ಹೊರಗಿನಿಂದ ಬಂದ ಎಚ್.ವಿಶ್ವನಾಥ್ ಗೆಲುವು ಸಾಧ್ಯವಾಗಿತ್ತು. ಆದರೆ, ಎಚ್.ಡಿ.ಕುಮಾರಸ್ವಾಮಿ ಸರ್ಕಾರ ಪತನಕ್ಕೆ ಎಚ್.ವಿಶ್ವನಾಥ್ ಕಾರಣರು ಎಂಬ ಕಾರಣಕ್ಕೆ ಆ ಸಮುದಾಯ ಈಗ ತಿರುಗಿ ಬಿದ್ದಿದೆ. ಇದರ ಲಾಭ ಪಡೆಯಲು ಕಾಂಗ್ರೆಸ್ ಹವಣಿಸುತ್ತಿದೆ.
ಇದೇ ಕಾರಣಕ್ಕೆ ಹುಣಸೂರು ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿ, ಇಂದಿಗೂ ಕ್ಷೇತ್ರದ ಮೇಲೆ ಪ್ರಬಲ ಹಿಡಿತ ಹೊಂದಿರುವ ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರು ಸಮ್ಮಿಶ್ರ ಸರ್ಕಾರದಲ್ಲಿ ತಾವು ಕೇಳಿದ ಖಾತೆ ಕೊಡಲಿಲ್ಲ ಎಂದು ಅಸಮಾಧಾನಗೊಂಡು ಸರ್ಕಾರ ಪತನದ ನಂತರ ಜೆಡಿಎಸ್ ಪಕ್ಷದ ಚಟುವಟಿಕೆಯಿಂದ ದೂರ ಉಳಿದಿರುವ ಜಿ.ಟಿ.ದೇವೇಗೌಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷಗಳೂ ಯತ್ನಿಸುತ್ತಿವೆ.
ಉಪ ಚುನಾವಣೆಯಲ್ಲಿ ತಟಸ್ಥರಾಗಿರುವುದಾಗಿ ಜಿಟಿಡಿ ಹೇಳುತ್ತಾ ಬಂದಿದ್ದರೂ ಕ್ಷೇತ್ರದಲ್ಲಿ ಮತ ಪರಿವರ್ತನೆ ಮಾಡುವ ಶಕ್ತಿಯನ್ನು ಅವರ ಕುಟುಂಬ ಉಳಿಸಿಕೊಂಡಿದೆ. ಆ ಕಾರಣಕ್ಕೆ ಅವರ ನಿರ್ಧಾರ ಕೂಡ ಹುಣಸೂರು ಉಪ ಚುನಾವಣೆಯಲ್ಲಿ ಮಹತ್ವ ಪಡೆದಿದೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇತ್ತೀಚೆಗೆ ಬಿಜೆಪಿ ಅದರಲ್ಲೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಗೆಗೆ ಮೃದುಧೋರಣೆ ತೋರುತ್ತಿರುವುದನ್ನು ನೋಡಿದರೆ, ತಮ್ಮ ಪ್ರಬಲ ರಾಜಕೀಯ ವೈರಿ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ತವರು ಜಿಲ್ಲೆಯಲ್ಲೇ ಹಣಿಯಲು, ನೆಪಮಾತ್ರಕ್ಕೆ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಬಿಜೆಪಿಗೆ ಪರೋಕ್ಷ ಬೆಂಬಲ ನೀಡಿದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ. ಇತ್ತ ತನ್ನ ವೈರಿ ಎಚ್.ವಿಶ್ವನಾಥ್‌ರನ್ನು ಹಣಿಯಲು ಸಿದ್ದರಾಮಯ್ಯ ಕೂಡ ಪ್ರತ್ಯಸ್ತ್ರ ಹೂಡಿದ್ದಾರೆ. ಅಧಿಕೃತವಾಗಿ ಚುನಾವಣಾ ಪ್ರಚಾರ ಆರಂಭವಾಗದಿದ್ದರೂ ಹುಣಸೂರು ಉಪ ಚುನಾವಣೆಯ ಕಣ ರಂಗೇರುತ್ತಿದೆ.
ಹುಣಸೂರು ಉಪ ಚುನಾವಣೆಗೂ ನನಗೂ ಏನೇನೂ ಸಂಬಂಧ ಇಲ್ಲ. ನಾನು ಶಾಸಕನಾಗಿದ್ದೇನೆ. ನನ್ನ ಪತ್ನಿ, ಮಗನಿಗೂ ಶಾಸಕರಾಗುವ ಅರ್ಹತೆ ಇದೆ. ಯಾವುದೇ ಪಕ್ಷದಿಂದ ಆಹ್ವಾನ ಬಂದಿಲ್ಲ. ನಾವೂ ಯಾವ ಪಕ್ಷಕ್ಕೂ ಬೇಡಿಕೆ ಇಟ್ಟಿಲ್ಲ.-ಜಿ.ಟಿ.ದೇವೇಗೌಡ, ಮಾಜಿ ಸಚಿವರು ಹುಣಸೂರು ಉಪ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವುದು ನನ್ನ ಗುರಿ. ಹುಣಸೂರು ಉಪ ಚುನಾವಣೆ ನನ್ನ ಪ್ರತಿಷ್ಠೆಯ ವಿಚಾರವಾಗಿದೆ. ನೀವು ಅಭ್ಯರ್ಥಿ ಆಗಬೇಕು ಎಂದು ಪಕ್ಷ ಹೇಳಿದರೆ ಸ್ಪರ್ಧೆಗೆ ಹಿಂದೇಟು ಹಾಕಲ್ಲ. ಅವಕಾಶಕೊಡದಿದ್ದರೆ ಬೇರೆ ಅಭ್ಯರ್ಥಿ ಪರ ಕೆಲಸ ಮಾಡಿ ಗೆಲುವಿಗೆ ಶ್ರಮಿಸುತ್ತೇನೆ.
-ಸಿ.ಎಚ್.ವಿಜಯಶಂಕರ್, ಮಾಜಿ ಸಚಿವ * ಗಿರೀಶ್ ಹುಣಸೂರು