ಮಹಾನಗರ: ನಗರದ ರಸ್ತೆಗಳಲ್ಲಿ ಹೊಂಡಗಳಿವೆ. ಪ್ರಯಾಣಿಕರು ಎಚ್ಚರವಾಗಿ ವಾಹನ ಚಲಾಯಿಸಬೇಕು ಎಂದು ಹೇಳುವುದನ್ನು ಕೇಳಿದ್ದೇವೆ. ಆದರೆ, ನಗರದ ಬಸ್‌ಗಾಗಿ ಬಸ್ ನಿಲ್ದಾಣದಲ್ಲಿ ಕಾಯುವ ಪ್ರಯಾಣಿಕರು ಕೂಡ ಎಚ್ಚರಿಕೆ ವಹಿಸಬೇಕು ಎಂದು ಹೇಳಬೇಕಾದ ಕಾಲ ಬಂದಿದೆ. ಏಕೆಂದರೆ, ಸ್ಟೇಟ್‌ಬ್ಯಾಂಕ್‌ನ ಬಸ್ ನಿಲ್ದಾಣದಲ್ಲಿಯೇ ಹೊಂಡ ಬಾಯ್ತೆರೆದು ನಿಂತಿದೆ!
ನಗರದ ಕ್ಲಾಕ್‌ಟವರ್ ಮಾರ್ಗವಾಗಿ ಎ.ಬಿ. ಶೆಟ್ಟಿ ವೃತ್ತದ ಭಾಗಕ್ಕೆ ಸಾಗುವಾಗ ಆರ್‌ಟಿಒ ಕಚೇರಿ ಮುಂಭಾಗದಲ್ಲಿರುವ ಬಸ್ ನಿಲ್ದಾಣಗಳು ಇಂತಹ ಅಪಾಯದ ಸ್ಥಿತಿಯಲಿವೆ. ಬಸ್‌ಗಾಗಲಿ ಕಾದು ಕುಳಿತಿರುವ ಪ್ರಯಾಣಿಕರು ಹೊಂಡ ಗಮನಿಸದೆ ಹೋದರೆ ಚರಂಡಿಗೆ ಬೀಳುವುದು ಗ್ಯಾರಂಟಿ.
ಇಲ್ಲಿರುವ ಸುಮಾರು 10 ಬಸ್‌ನಿಲ್ದಾಣಗಳ ಮುಂಭಾಗದ ಚರಂಡಿಯಲ್ಲಿ ಪೈಪ್‌ಲೈನ್ ಕಾಮಗಾರಿ ಕೈಗೊಳ್ಳುವ ಸಂದರ್ಭ ಫುಟ್‌ಪಾತ್‌ನ ಸ್ಲ್ಯಾಬ್ ಗಳನ್ನು ಪೂರ್ಣವಾಗಿ ತೆಗೆಯಲಾಗಿತ್ತು. ಒಂದಿಡೀ ದಿನ ಈ ಕಾಮಗಾರಿ ಮುಗಿದ ಬಳಿಕ ಸ್ಲ್ಯಾಬ್ ಗಳನ್ನು ಮತ್ತೆ ಜೋಡಿಸಲಾಗಿತ್ತು. ಆದರೆ, ಈ ಸಂದರ್ಭ ಸ್ಲ್ಯಾಬ್ ಗಳನ್ನು ಸಮರ್ಪಕವಾಗಿ ಜೋಡಣೆ ಮಾಡದ ಹಿನ್ನೆಲೆಯಲ್ಲಿ ಈಗ ಸ್ಲ್ಯಾಬ್ ಗಳ
ಮಧ್ಯೆ ಅಂತರ ನಿರ್ಮಾಣವಾಗಿದೆ.
ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯ
ಬಸ್‌ನಿಲ್ದಾಣದಲ್ಲಿ ಇಂತಹ ಹೊಂಡಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಸಮಸ್ಯೆ ಉಂಟಾಗಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಹೊಂಡಕ್ಕೆ ಬೀಳುವುದು ಗ್ಯಾರಂಟಿ. ಮಕ್ಕಳು, ಮಹಿಳೆಯರು, ಹಿರಿಯರಂತು ಇಲ್ಲಿ ಬಹಳಷ್ಟು ಎಚ್ಚರಿಕೆ ವಹಿಸಬೇಕಾಗಿದೆ. ಆಡಳಿತ ವ್ಯವಸ್ಥೆಯ ಕ್ಷ್ಯದಿಂದಾಗಿಯೇ ಬಸ್‌ನಿಲ್ದಾಣದ ಮುಂಭಾಗದಲ್ಲಿ ಇಂತಹ ಹೊಂಡಗಳಿದ್ದು ಪ್ರಯಾಣಿಕರು ನಡೆದಾಡಲು ಎಚ್ಚರ ವಹಿಸಬೇಕಾಗಿದೆ.
ಈ ಮಧ್ಯೆ ಮಂಗಳೂರು ತಾಲೂಕು ಪಂಚಾಯತ್ ಮುಂಭಾಗದಲ್ಲಿಯೂ (ಪುರಭವನ ಎದುರು) ಸ್ಲ್ಯಾಬ್ಗಳು ಎದ್ದು ಪ್ರಯಾಣಿಕರು ನಡೆದುಕೊಂಡು ಹೋಗಲು ಸಮಸ್ಯೆ ಆಗಿದೆ. ಸದಾ ಜನರಿಂದ ಗಿಜಿಗುಡುವ ಮಂಗಳೂರಿನ ಮುಖ್ಯ ನಗರದ ರಸ್ತೆಯಲ್ಲಿಯೇ ಇಂತಹ ಪರಿಸ್ಥಿತಿ ಇರುವುದಾದರೆ ನಗರದ ಇತರ ಕಡೆಗಳ ಪರಿಸ್ಥಿತಿ ಹೇಗಿರಬಹುದು ಎಂಬ ಪ್ರಶ್ನೆ ಮೂಡುವಂತಾಗಿದೆ.