ಗುಂಡ್ಲುಪೇಟೆ: ಭಾರತದ ಜೀವ ವೈವಿಧ್ಯದಲ್ಲಿ ಅಂಡಮಾನ್ ಮತ್ತು ನಿಕೋಬಾರ್ ಪ್ರದೇಶ ವಿಶಿಷ್ಟ ವಾಗಿದ್ದು, ಅತಿ ವೈವಿಧ್ಯಮಯವಾಗಿದೆ ಎಂದು ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ತಿಳಿಸಿದರು.
ತಾಲೂಕಿನ ತೆರಕಣಾಂಬಿಯ ಬ.ಪು.ಸರ್ಕಾರಿ ಪ್ರೌಢಶಾಲೆ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ವಿಶ್ವ ಜೀವವೈವಿಧ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ಯಾಸೆಂಜರ್ ಪಿಜನ್‌ಗಳು ಅಮೆರಿಕಾದಲ್ಲಿ 3 ಕಿ.ಮೀ. ಅಗಲ ಗುಂಪಾಗಿ ಹಾರುತ್ತಿದ್ದು, ಅವು ಮಾನವನ ಮೋಜಿಗೆ ಬಲಿಯಾಗಿವೆ. ಹಾಗೆಯೇ ರೆಡ್‌ನಾಟ್ ಹಕ್ಕಿಯ ಹಾಗೂ ಹಾರ್ ಶೂ ಏಡಿಗಳ ಸಂಬಂಧ, ಹಕ್ಕಿಗಳೂ 2000 ಕಿ.ಮೀ. ಅವಿಶ್ರಾಂತವಾಗಿ ಹಾರಿ ಕಳೆದು ಹೋದ ಶಕ್ತಿಯನ್ನು ಮರಳಿ ಪಡೆಯಲು ಏಡಿಗಳನ್ನು ತಿನ್ನುತ್ತವೆ.
ಅವು ಅಂಟಾರ್ಟಿಕಾಗೆ ಹಾರುವ ವಲಸೆ ದಾರಿ 25000 ಕಿ.ಮೀ., ಹಾಗೆಯೇ ಭಾರತದ ವಿನಾಶದ ಹಕ್ಕಿ ಬಸ್ಟರ್ಡ್‌ಗಳು ಈಗ ಕೇವಲ 95 ಇವೆ. ಕರ್ನಾಟಕದಲ್ಲಿ ಇದರ ಸಂಖ್ಯೆ ಕೇವಲ 6 ಮಾತ್ರ ಎಂದು ಮಾಹಿತಿ ನೀಡಿ ದರು. ಈ ಸಂದರ್ಭದಲ್ಲಿ ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ತಾವೇ ಕ್ಯಾಮೆರಾದಲ್ಲಿ ಸೆರೆ ಹಿಡಿದ ಅಪರೂಪದ ಛಾಯಾಚಿತ್ರ ಪ್ರದರ್ಶಿಸಿದರು.
ಪ್ರಾಂಶುಪಾಲರಾದ ಮಂಜು ಮಾತನಾಡಿ, ಮಕ್ಕಳು ಪರಿಸರ ಜೀವ ವೈವಿಧ್ಯಗಳ ಅರಿತು ಅವು ಗಳೊಡನೆ ಸಹಬಾಳ್ವೆ ನಡೆಸಬೇಕೆಂದು ತಿಳಿಸಿದರು. ನಂತರ ಕಾರ್ಯಕ್ರಮದ ಅಂಗವಾಗಿ ಶಾಲೆ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ಲಕ್ಕೂರು ಚಂದ್ರು, ಮಕ್ಕಳು, ಶಿಕ್ಷಕರು ಹಾಜರಿದ್ದರು