Advertisement

ಹುಕ್ಕೇರಿ ಘಟಕದಿಂದ ಬಸ್‌ ಶುರು

02:37 PM Jun 23, 2022 | Team Udayavani |

ಹುಕ್ಕೇರಿ: ಪಟ್ಟಣವು ತಾಲೂಕು ಕೇಂದ್ರವಾಗಿದ್ದರೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪ್ರತ್ಯೇಕ ಘಟಕ ಇರಲಿಲ್ಲ. ಕಳೆದ ನಾಲ್ಕು ದಶಕಗಳಿಂದ ಕ್ಷೇತ್ರದ ಜನತೆ ಘಟಕಕ್ಕಾಗಿ ಬೇಡಿಕೆ ಇಟ್ಟಿದ್ದರು. ಆ ಬೇಡಿಕೆ ಈಗ ಇಡೇರಿದೆ ಎಂದು ಅರಣ್ಯ ಮತ್ತು ಆಹಾರ ಸಚಿವ ಉಮೇಶ ಕತ್ತಿ ಹೇಳಿದರು.

Advertisement

ಪಟ್ಟಣದ ಹೊರವಲಯದ ಕ್ಯಾರಗುಡ್ಡ ಬಳಿ ನೂತನವಾಗಿ ಪ್ರಾರಂಭವಾದ ಬಸ್‌ ಘಟಕದಿಂದ ಬಸ್‌ ಗೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ಸಂಕೇಶ್ವರದಲ್ಲಿ ಘಟಕವಿದ್ದರೂ ತಾಲೂಕು ಕೇಂದ್ರವಾದ ಹುಕ್ಕೇರಿಯಲ್ಲಿ ಬಸ್‌ ಘಟಕ ಇಲ್ಲದಿರುವ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತರಲಾಗಿತ್ತು. ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಹೊಸ ಘಟಕಕ್ಕೆ ಅನುಮತಿಸಿದ್ದಾರೆ ಎಂದರು.

ಕಳೆದ 6 ತಿಂಗಳ ಹಿಂದೆ ಘಟಕ ಉದ್ಘಾಟನೆಗೊಂಡರೂ ತಾಂತ್ರಿಕ ಕಾರಣದಿಂದ ಬಸ್‌ ಸಂಚಾರ ವಿಳಂಬವಾಗಿತ್ತು. ಆದರೆ ಈಗ ಈ ಘಟಕದಿಂದ ಮೊದಲ ಹಂತದಲ್ಲಿ ರಾಜ್ಯದ ವಿವಿಧ ನಗರಗಳಿಗೆ ಹಾಗೂ ನೆರೆಯ ಮಹಾರಾಷ್ಠ ಮತ್ತು ಗೋವಾ ರಾಜ್ಯಗಳು ಸೇರಿ 70 ಬಸ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಅದರ ಜೊತೆಗೆ ಈಗಾಗಲೇ ಸಂಕೇಶ್ವರ ಘಟಕದಿಂದ 100 ಮಾರ್ಗಗಳಿಗೆ ಬಸ್‌ ವ್ಯವಸ್ಥೆ ಹೊಂದಿದ್ದು ಬರುವ ದಿನಮಾನಗಳಲ್ಲಿ ಈ ವ್ಯವಸ್ಥೆಯನ್ನು 200 ಮಾರ್ಗಗಳಿಗೆ ವಿಸ್ತರಿಸಲಾಗುವುದು. ಮುಂಬರುವ ದಿನಗಳಲ್ಲಿ ಧಾರ್ಮಿಕ ಕ್ಷೇತ್ರ ಮತ್ತು ಪ್ರವಾಸಿ ತಾಣಗಳಿಗೆ ವಿಶೇಷ ಬಸ್‌ ವ್ಯವಸ್ಥೆ ಮಾಡುವ ಚಿಂತನೆ ಇದೆ ಎಂದು ಸಚಿವ ಕತ್ತಿ ಹೆಳಿದರು.

ಈ ಘಟಕದ ಪ್ರಾರಂಭದಿಂದ ಕ್ಯಾರಗುಡ್ಡ ಬಳಿ ಇರುವ ವಿದ್ಯಾನಗರಿಯ ಕಾಲೇಜಿನ ವಿದ್ಯಾರ್ಥಿಗಳಿಗೆ ಹೆಚ್ಚಿನ ಬಸ್‌ ಸೌಲಭ್ಯ ದೊರೆಯಲಿದೆ ಎಂದು ತಿಳಿಸಿದರು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಚಿಕ್ಕೋಡಿ ವಿಭಾಗದ ಜಿಲ್ಲಾ ನಿಯಂತ್ರಣಾಧಿಕಾರಿ ಶಶಿಧರ ಎಂ., ಮಾತನಾಡಿದರು.ಪುರಸಭೆ ಅಧ್ಯಕ್ಷ ಎ.ಕೆ. ಪಾಟೀಲ, ಉಪಾಧ್ಯಕ್ಷ ಆನಂದ ಗಂಧ, ಪಿಕಾರ್ಡ್‌ ಬ್ಯಾಂಕ್‌ ನಿರ್ದೇಶಕ ಪರಗೌಡ ಪಾಟೀಲ, ನೀಲಪ್ಪಾ ಕೋಲೆ, ರಾಯಪ್ಪಾ ಡೂಗ, ಮೊಸಿನ ಇನಾಮದಾರ, ಶಿವನಗೌಡ ಪಾಟೀಲ, ವಿಜಯಕುಮಾರ ಕಾಗವಾಡೆ, ಎ.ಎನ್‌ ಪಾಟೀಲ. ಶಂಕರ ಗುಡಸಿ, ವಿಶ್ವೇಶ ಹಿರೇಮಠ, ಟಿ.ಜಿ ಧುಮಾಳೆ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next