ಧಾರವಾಡ: ಕೆಸಿಡಿ ಕಾಲೇಜಿನ ಎನ್‌ಎಸ್ ಎಸ್ ಘಟಕ ಮನಸೂರ ಗ್ರಾಮದಲ್ಲಿ ಸೇವಕರ ಸಹಾಯದಿಂದ 50 ಶೌಚಗೃಹಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಕೆಸಿಡಿ ಕಾಲೇಜಿನ ಪ್ರಾಚಾರ್ಯ ಡಾ| ಎಸ್.ಎಸ್. ಕಟ್ಟಿಮನಿ ಹೇಳಿದರು.
ಕರ್ನಾಟಕ ಕಲಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿಶೇಷ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮನಸೂರ ಗ್ರಾಮದ ಜನರು ಶೌಚಗೃಹ ಕಟ್ಟಲು ಸೂಕ್ತ ಕಟ್ಟಡ ಸಾಮಗ್ರಿಗಳನ್ನು ತ್ವರಿತವಾಗಿ ಒದಗಿಸಿದರೆ ಅವರಿಗೆ ಕಟ್ಟಿ ಕೊಡಲು ಮೂದಲು ಪ್ರಾಶಸ್ತ ನೀಡಲಾಗುವುದು.
ಆದ್ದರಿಂದ ಮನಸೂರ ಗ್ರಾಮಸ್ಥರು ನಮ್ಮ ಈ ವಿಶೇಷ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ರಾಷ್ಟ್ರೀಯ ಸೇವಾ ಯೋಜನೆಯ “ಬ’ ಘಟಕದ ಅಧಿಕಾರಿ ಡಾ| ಬಿ.ಎಸ್ ಭಜಂತ್ರಿ ಮಾತನಾಡಿ, ಮನಸೂರ ಗ್ರಾಮದಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸುವುದರ ಜೊತೆಗೆ ವಿವಿಧ ಜನಪರ ಮಾಹಿತಿ ಮತ್ತು ಅರಿವು ಕಾರ್ಯಕ್ರಮಗಳನ್ನು ಮಸೂರ ಗ್ರಾಮದ ಜನರ ಸಲುವಾಗಿ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಮನಸೂರ ಗ್ರಾಪಂ ಸದಸ್ಯ ಶಂಕ್ರಪ್ಪ ಕುರಬರ ಮಾತನಾಡಿ, ಕರ್ನಾಟಕ ಕಲಾ ಮಹಾವಿದ್ಯಾಲಯದ ಈ ವಿಶೇಷ ಶಿಬಿರವನ್ನು ಆಯೋಜಿಸಿದ್ದು ಸಂತಸದ ವಿಷಯ. ನಾವೆಲ್ಲರೂ ಸ್ವಯಂ ಸೇವಕರಿಗೆ ಸಾಥ್ ನೀಡುತ್ತೇವೆ ಎಂದರು. ಮನಸೂರ ಗ್ರಾಪಂ ಅಧ್ಯಕ್ಷೆ ರುಕ್ಮಿಣಿ ತೇಗೂರ ಅಧ್ಯಕ್ಷತೆ ವಹಿಸಿದ್ದರು.
ಠಾಣಯ್ಯ ಹಿರೇಮಠ, ಮಹಾದೇವಿ ಜಾಲಿಕಟ್ಟಿ, ರಿಯಾಜ ನಿಪ್ಪಾಣಿ, ಎಸ್‌ಡಿಎಂಸಿ ಸದಸ್ಯರು ಇದ್ದರು. ಡಾ| ಝೆಡ್ ಗುಳಗುಂದಿ ಸ್ವಾಗತಿಸಿದರು. ಲಕ್ಷಿ ಮೊರಬ ಹಾಗೂ ಮಂಜುಳಾ ಹೊಸಮನಿ ನಿರೂಪಿಸಿದರು. ಬಸವರಾಜ ವಂದಿಸಿದರು.