Advertisement

ಮನುಷ್ಯರ ಬದಲು ಎಮ್ಮೆ ಕಿಡ್ನ್ಯಾಪ್‌

10:15 AM Jan 02, 2020 | mahesh |

ಭೋಪಾಲ: ಹಣಕ್ಕಾಗಿ ಮಾನವ ರನ್ನು ಅಪಹರಿಸಲಾಗುತ್ತದೆ. ಆದರೆ ಎಮ್ಮೆಗಳನ್ನು ಅದೇ ರೀತಿ ಮಾಡಲಾಗುತ್ತದೆಯೇ? ಇದು ಅಚ್ಚರಿಯಾದರೂ ನಂಬಲೇಬೇಕಾಗಿರುವ ಅಂಶ. ಇಂಥ ವಿಚಿತ್ರ ನಡೆಯುತ್ತಿರುವುದು ಮಧ್ಯಪ್ರದೇಶದ ಮೊರೇನಾ ಜಿಲ್ಲೆ ಯಲ್ಲಿ. ಬಹಳ ಹಿಂದೆ ಇಲ್ಲಿ ಡಕಾಯಿತರ ಗುಂಪುಗಳು ನಡೆಸುತ್ತಿದ್ದ ಕುಕೃತ್ಯ ಬೆಳಕಿಗೆ ಬರುತ್ತಿತ್ತು. ಅವರ ಉಪಟಳ ನಿಂತುಹೋದ ಬಳಿಕ ಮರಳು ಮಾಫಿಯಾದವರು ನಡೆಸು ತ್ತಿರುವ ಅಕ್ರಮ ಚಟುವಟಿಕೆಗಳ ಬಗ್ಗೆ ಆಗಾಗ ದೇಶವ್ಯಾಪಿ ಪ್ರಚಾರ ಪಡೆಯುತ್ತದೆ.

Advertisement

ಪ್ರಸಕ್ತ ವರ್ಷ ಅಂದರೆ 2019ನೇ ಸಾಲಿನಲ್ಲಿ ಎಮ್ಮೆಗಳನ್ನು ಅಪಹರಿಸಿ, ಅವುಗಳನ್ನು ಮಾಲೀಕರಿಗೆ ಹಿಂತಿರುಗಿಸಬೇಕಾದರೆ ಭಾರಿ ಮೊತ್ತದ ಹಣ ಪೀಕಿದ 23 ಪ್ರಕರಣಗಳು ವರದಿಯಾಗಿವೆ. ಸ್ಥಳೀಯವಾಗಿ ಈ ಕುಕೃತ್ಯಕ್ಕೆ “ಪಾನ್‌ಹಾಯ್‌’ ಎಂದು ಕರೆಯಲಾಗುತ್ತದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಂಥ ಕೃತ್ಯಗಳನ್ನು ನಡೆಸುವವರು ಅವುಗಳ ಪಾದದ ಚಿಹ್ನೆ ನೆಲದಲ್ಲಿ ಮೂಡದಂತೆ ಪ್ಲಾಸ್ಟಿಕ್‌ ಶೀಟ್‌ಗಳನ್ನು ಕಟ್ಟಿ ಕರೆದೊಯ್ಯುತ್ತಾರೆ. ಎಮ್ಮೆಯ ಬೆಲೆಯ ಶೇ.25-ಶೇ.30ರಷ್ಟನ್ನು ಬಲ ವಂತವಾಗಿ ವಸೂಲು ಮಾಡಿ, ಬಿಟ್ಟುಬಿಡುತ್ತಾರೆ. ಈ ಬಗ್ಗೆ ಮೊರೇನಾ ಜಿಲ್ಲೆಯ ಹಲವು ಗ್ರಾಮಗಳಿಂದ ಪೊಲೀಸರಿಗೆ ದೂರು ಸಲ್ಲಿಕೆಯಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಸಿತ್‌ ಯಾದವ್‌ ಆಯಾ ಠಾಣಾ ವ್ಯಾಪ್ತಿಯಲ್ಲಿ ಇಂಥ ಪ್ರಕ ರಣಗಳು ಕಂಡು ಬಂದರೆ ಅವುಗಳನ್ನು ಸ್ವೀಕರಿಸಿ, ದಾಖಲಿಸುವಂತೆ ಸೂಚನೆ ನೀಡಿದ್ದಾಗಿ ಹೇಳಿದ್ದಾರೆ. ಕೆಲವೊಂದು ಸಂದರ್ಭ ಗಳಲ್ಲಿ ಎಮ್ಮೆಗಳನ್ನು ಈ ಜಾಲದಿಂದಾಗಿ ಕಳೆದುಕೊಂಡವರು ಮರ್ಯಾದೆಗೆ ಅಂಜಿ ದೂರು ನೀಡಲೂ ಹಿಂಜರಿಯುತ್ತಾರೆ ಎಂಬ ಅಂಶವೂ ಬೆಳಕಿಗೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next