Advertisement

ಜು.5ಕ್ಕೆ ಬಜೆಟ್‌ ಮಂಡನೆ ಖಚಿತ: ದೇವೇಗೌಡ

06:25 AM Jun 26, 2018 | Team Udayavani |

ಹೊನ್ನಾವರ: ಇಡಗುಂಜಿ ವಿನಾಯಕ ದೇವರ ಸನ್ನಿಧಿಯಲ್ಲಿ ಮಾಜಿ ಪ್ರಧಾನಿ, ಜೆಡಿಎಸ್‌ ರಾಷ್ಟ್ರಾಧ್ಯಕ್ಷ ಎಚ್‌.ಡಿ. ದೇವೇಗೌಡರು ಹರಕೆ ಸಲ್ಲಿಸಿದರು. ಕ್ಷೇತ್ರ ಪುರೋಹಿತ ಮಂಜುನಾಥ ಭಟ್‌ ಮತ್ತು ಇತರರು ಗಣಹೋಮ,
ಪಂಚಕಜ್ಜಾಯ ಪೂಜೆ, ಅಷ್ಟಾವಧಾನ ಸೇವೆಗಳನ್ನು ಗೌಡರ ಪರ ಸಲ್ಲಿಸಿ,ವಿಶೇಷ ಪ್ರಾರ್ಥನೆಯೊಂದಿಗೆ ಪ್ರಸಾದ
ಗೌರವ ಸಲ್ಲಿಸಿದರು.

Advertisement

ನಂತರ ಮಾತನಾಡಿದ ದೇವೇಗೌಡರು, ಚುನಾವಣೆಯ ಮೊದಲು ಇಲ್ಲಿಗೆ ಬಂದಿದ್ದೆ.ದೇವರು ನನ್ನ ಬೇಡಿಕೆಯನ್ನು ನೆರವೇರಿಸಿದ್ದಾನೆ.ಆದ್ದರಿಂದ ಪೂಜೆ ಸಲ್ಲಿಸಿದ್ದೇನೆ. ಲೋಕಸಭಾ ಚುನಾವಣೆ ಗೆಲುವಿಗೆ ಪ್ರಾರ್ಥಿಸಿದ್ದು ಆ
ಚುನಾವಣೆ ನಂತರ ಮತ್ತೆ ಬರುತ್ತೇನೆ. ದೇವರು ಶಕ್ತಿ ನೀಡಬೇಕು. ಚುನಾವಣೆ ಕಾಲದ ಎಲ್ಲ ಬೇಡಿಕೆಯನ್ನು ಮುಖ್ಯಮಂತ್ರಿಗಳು ಈಡೇರಿಸಲಿದ್ದಾರೆ. ಜು.5ರಂದು ಬಜೆಟ್‌ ಮಂಡಿಸುವುದು ಖಚಿತ. ರೈತರ ಸಾಲ ಕೂಡ ಮನ್ನಾ ಆಗಲಿದೆ. ನಿಗಮ ಮಂಡಳಿಗೆ ನಾಮಕರಣವನ್ನೂ ಮಾಡುತ್ತಾರೆ. ಸರ್ಕಾರ ಸಂಪೂರ್ಣ ಜನಪರವಾಗಿ, ರೈತರ
ಪರವಾಗಿ ಕೆಲಸ ಮಾಡುತ್ತದೆ ಎಂಬುದರಲ್ಲಿ ವಿಶ್ವಾಸವಿಡಿ ಎಂದರು.

11 ಗಂಟೆ ಸುಮಾರಿಗೆ ರಾಮತೀರ್ಥದ ಬಳಿ ಇರುವ ಹೆಲಿಪ್ಯಾಡ್‌ಗೆ ಬಂದಿಳಿದ ದೇವೇಗೌಡರು ನಿರಾಹಾರಿಗಳಾಗಿದ್ದರು. ನೇರ ದೇವಾಲಯಕ್ಕೆ ತೆರಳಿ ನಂತರ ಜೆಡಿಎಸ್‌ ಕಾರ್ಯಕರ್ತ ಹೆಬ್ಟಾರಹಿತ್ಲು ಗಣಪಯ್ಯ ಗೌಡರ ಮಗನ ಮದುವೆಯಲ್ಲಿ ಪಾಲ್ಗೊಂಡು ವಧು-ವರರನ್ನು ಹರಸಿ, ಭೋಜನ ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next