ಚಿತ್ರದುರ್ಗ: ನಗರದ ಒನಕೆ ಓಬವ್ವ ಕ್ರೀಡಾಂಗಣದ ಮುಂಭಾಗದಲ್ಲಿ ನಿರ್ಮಿಸಿರುವ ಬೃಹತ್ ಬುದ್ಧ ಪ್ರತಿಮೆಯನ್ನು ಅ.31ರಂದುಅನಾವರಣಗೊಳಿಸಲಾಗುವುದು ಎಂದುಬುದ್ಧ ಧಮ್ಮ ದೀûಾ ಉತ್ಸವ ಸಮಿತಿ ಸದಸ್ಯಬಿ.ಪಿ.ತಿಪ್ಪೇಸ್ವಾಮಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಜೈಭೀಮ್ ಕಾರ್ಯಕಾರಿ ಸಮಿತಿಯ ಪ್ರಯತ್ನದಿಂದಬುದ್ಧನ ಬೃಹತ್ ಪ್ರತಿಮೆ ನಿರ್ಮಿಸಲಾಗಿದೆಎಂದರು.
ಭಾನುವಾರ ನಡೆಯಲಿರುವ ಕಾರ್ಯಕ್ರಮದಲ್ಲಿಬೆಂಗಳೂರಿನ ಮಹಾಬೋ ಸಂಸ್ಥೆಕಾರ್ಯದರ್ಶಿ ಆನಂದ ಬಂತೇಜಿ ಪ್ರತಿಮೆಗೆಪುಷ್ಪಾರ್ಚನೆ ಮಾಡಲಿದ್ದಾರೆ. ಇದಾದ ನಂತರಮಧ್ಯಾಹ್ನ 12 ಗಂಟೆಗೆ ತ.ರಾ.ಸುರಂಗಮಂದಿರದಲ್ಲಿ ಆಸಕ್ತರಿಗೆ ಧಮ್ಮ ದೀಕ್ಷೆನೀಡಲಿದ್ದಾರೆ. ಆಯುಸ್ಮಾನ್ ಕೆ.ಜಯರಾಮ್‌ಸಹಾಯಕರಾಗಿರುತ್ತಾರೆ.
ಜಿಲ್ಲೆಯಲ್ಲಿ ಧಮ್ಮದೀಕ್ಷೆಪಡೆಯಲಿಚ್ಛಿಸುವರು ತಮ್ಮ ಆಧಾರ ಕಾರ್ಡ್ ಅಥವಾಯಾವುದಾದರೂ ಗುರುತಿನ ಚೀಟಿಯೊಂದಿಗೆ9900592473 ಸಂಪರ್ಕಿಸಲು ತಿಪ್ಪೇಸ್ವಾಮಿತಿಳಿಸಿದರು.ಚಿತ್ರದುರ್ಗ ಜಿಲ್ಲೆಯು ಮೌರ್ಯ, ಶಾತವಾಹನರಆಳ್ವಿಕೆಗೆ ಒಳಪಟ್ಟ ಸಂದರ್ಭದಲ್ಲಿ ಬುದ್ಧ ಧಮ್ಮವುಇಲ್ಲಿ ದಟ್ಟವಾಗಿ ಹರಡಿತ್ತು.
ಜಿಲ್ಲೆಯ ಅಂದಿನಜನ ಸಮುದಾಯಗಳು ಧಮ್ಮದೊಡನೆ ತಮ್ಮಬೆಸೆದುಕೊಂಡಿದ್ದವು. ಚಿತ್ರದುರ್ಗ ಜಿಲ್ಲೆಯಲ್ಲಿಬುದ್ಧ ಧಮ್ಮಕ್ಕೆ ನೇರವಾಗಿ ಸಂಬಂ ಸಿದಅಸಂಖ್ಯಾತ ಕುರುಹುಗಳಿವೆ. ಈ ಎಲ್ಲಾ ಹಿನ್ನೆಲೆಯಲ್ಲಿಪ್ರೇರಣೆ ಪಡೆಯಲು ಮತ್ತೆ ಬುದ್ಧ ಧಮ್ಮದೀûಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಚಾಲನ ಸಮಿತಿ ಸದಸ್ಯಟಿ.ರಾಮು, ಬಾಳೇನಹಳ್ಳಿ ರಾಮಣ್ಣ, ಜಿಪಂ ಮಾಜಿ ಸದಸ್ಯ ಬಿ.ಪಿ.ಪ್ರಕಾಶ್ ಮೂರ್ತಿ ಇದ್ದರು.