ನ್ಯಾಯಾಲಯದಲ್ಲಿ ಕೇಸ್‌ವೊಂದರ ಕುರಿತು ಗಂಭೀರ ವಾದ-ವಿವಾದ ನಡೆಯುತ್ತಿತ್ತು. ಮಾನ್ಯ ಗೌರವಾನ್ವಿತ ಮ್ಯಾಜಿಸ್ಟ್ರೇಟ್ ಆದ ಮುಲ್ಲಾ ನಸ್ರುದ್ದೀನ್ ಅವರು ಅಷ್ಟೇ ಗಂಭೀರವಾಗಿ ಚರ್ಚೆಯನ್ನು ಆಲಿಸುತ್ತಿದ್ದರು. ಇದು ಅವರ ಮೊದಲ ಮೊಕದ್ದಮೆಯ ತೀರ್ಪು ಇದಾಗಿತ್ತು. ಮೊದಲ ಫಿರ್ಯಾದಿದಾರರು ವಾದವನ್ನು ಮಾಡುವಾಗ ಆಸಕ್ತಿಯಿಂದ ಕೇಳುತ್ತಿದ್ದ ನ್ಯಾಯಮೂರ್ತಿ ಮುಲ್ಲಾ ನಸ್ರುದ್ದೀನ್ ಮೊದಲನೆಯ ವಾದ ಮುಗಿದ ಅನಂತರವೇ ಕೋರ್ಟ್‌ನ್ನು ಉದ್ದೇಶಿಸಿ, “ನಾನು ಈ ವಾದವನ್ನು ಗಂಭೀರವಾಗಿ ಆಲಿಸಿದ್ದೇನೆ. ಇನ್ನು ಕೆಲವೇ ಕೆಲವು ನಿಮಿಷಗಳಲ್ಲಿ ಅಂತಿಮ ತೀರ್ಪು ನೀಡಲಿದ್ದೇನೆ ಎಂದರು.
ತತ್‌ಕ್ಷಣವೇ ಇಡೀ ನ್ಯಾಯಾಲಯವೇ ಸ್ತಬ್ಧ. ಫಿರ್ಯಾದಿದಾರರು, ವಕೀಲರು, ಅಪರಾಧಿಗಳು ಮತ್ತು ನೆರೆದಿದ್ದ ಸಾರ್ವಜನಿಕರು ಮೂಗಿನ ಮೇಲೆ ಬೆರಳಿಟ್ಟ ಆಶ್ಚರ್ಯ ಚಕಿತರಾದರು.
ಈ ಸಂಗತಿಯನ್ನು ಕಂಡ ಅಲ್ಲೇ ಇದ್ದ ಕ್ಲರ್ಕ್, ಮಾನ್ಯ ಮ್ಯಾಜಿಸ್ಟ್ರೇಟ್ ಬಳಿ ಬಂದು ” ಸ್ವಾಮೀ ಇನ್ನೊಂದು ಪಕ್ಷದವರು ವಾದ ಮಾಡುವುದು ಇದೇ. ಅವರ ವಾದವನ್ನು ಆಲಿಸಿದೇ ನೀವು ಹೇಗೆ ತೀರ್ಪು ನೀಡುತ್ತೀರಿ. ಅದು ಹೇಗೆ ಸಾಧ್ಯ ಎಂದು ವಿನಮ್ರವಾಗಿ ಕೇಳಿದನು. ಆಗ ಮುಲ್ಲಾ ನಸ್ರುದ್ದೀನ್, ನೀವು ನನ್ನನ್ನು ಗೊಂದಲಕ್ಕೆ ದೂಡಬೇಡಿ, ನಾನು ಆಗಲೇ ತೀರ್ಪನ್ನು ಯೋಚಿಸಿ ಆಗಿದೆ. ನನ್ನ ಮನಸ್ಸು ಕೂಡ ಸತ್ಯವನ್ನು ಕಂಡುಕೊಂಡಿದೆ. ತೀರ್ಪನ್ನು ಘೋಷಿಸುವುದೊಂದೆ ಬಾಕಿ ಎಂದರು. ಆಗ ಮುಲ್ಲಾನಷ್ಟೇ ಗೊಂದಲಕ್ಕೀಡಾಗಲಿಲ್ಲ ಇಡೀ ಕೋರ್ಟ್ ಸಭಾಂಗಣವೇ ಗೊಂದಲಕ್ಕೀಡಾಯಿತು.
ಸೌಮ್ಯದಿಂದ ವರ್ತಿಸಿ
ಈ ಮೇಲಿನ ಕಥೆಯೂ ಕೇವಲ ಸಾಂದರ್ಭಿಕ ಮಾತ್ರ. ಮನುಷ್ಯನು ಯಾವತ್ತಿಗೂ ಸತ್ಯದರ್ಶನವಾಗದೇ ನಮ್ಮ ಮನಸ್ಸಿಗೆ ತಿಳಿಯಿತು ಎಂದು ಹೇಳಿ ಯಾವುದೇ ಸಂಗತಿಗಳನ್ನು ನಿರ್ಧರಿಸಲು ಸಾಧ್ಯವಿಲ್ಲ. ಅದಕ್ಕಾಗಿ ಸೌಮ್ಯದಿಂದ ವರ್ತಿಸಿ ಸತ್ಯವನ್ನು ಮೊದಲು ಅರಿಯಬೇಕು. ಜಗತ್ತಿನ ಎಲ್ಲ ಸಂಗತಿಗಳನ್ನು ಅರಿಯಬೇಕು. ಎಲ್ಲ ದೃಷ್ಟಿಕೋನದಲ್ಲಿ ಯೋಚಿಸಬೇಕು. ವಿಶಾಲವಾದ ಯೋಚನೆ ನಮ್ಮನ್ನು ಬೌದ್ಧಿಕರನ್ನಾಗಿ ಮಾಡುತ್ತದೆ. ಅದಕ್ಕಾಗಿ ಇಲ್ಲಿ ಮುಲ್ಲಾರ ತಾಳಿದ ಸಂಗತಿ ನಮಗೆ ಪಾಠವಾಗಬೇಕು ಎಂಬುದು ಈ ಕಥೆಯ ಸಾರ. ಗುರು ಓಶೋ ಅವರು ಸಾಂದರ್ಭಿಕವಾಗಿ ತಮ್ಮ ಶಿಷ್ಯರಿಗೆ ಹೇಳಿದ ಕಥೆಯಿದು.