ಹುಮನಾಬಾದ: ಕೇಂದ್ರ ಸರ್ಕಾರ ಉಜ್ವಲ ಯೋಜನೆಯಡಿ ವಿತರಿಸಿದ ಗ್ಯಾಸ್ ಸಿಲಿಂಡರ್ ಕಿಟ್‌ನಲ್ಲಿ ಕಳಪೆ ಸ್ಟೌವ್ ವಿತರಿಸಿದೆ ಎಂದು ಆರೋಪಿಸಿ, ಗುಣಮಟ್ಟದ ಸ್ಟೌವ್ ವಿತರಿಸಲು ಆಗ್ರಹಿಸಿ ಜನವಾದಿ ಮಹಿಳಾ ಸಂಘಟನೆ ಚಿಟಗುಪ್ಪ ತಾಲೂಕು ಘಟಕದ ಪದಾಧಿಕಾರಿಗಳು ಶನಿವಾರ ಪ್ರತಿಭಟನೆ ನಡೆಸಿ ಚಿಟಗುಪ್ಪ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ದೇಶದ 8 ಕೋಟಿ ಜನತೆಗೆ ಉಚಿತ ಗ್ಯಾಸ್ ವಿತರಿಸಲಾಗಿದೆ ಎಂದು ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕರ ದೊಡ್ಡದಾಗಿ ಜಾಹೀರಾತು ಪ್ರಕಟಿಸಿ, ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ. ಆದರೆ ದೇಶದ ಅಸಂಖ್ಯಾತ ಮಹಿಳೆಯರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡುತ್ತಿದೆ ಎಂದು
ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ.ಎಸ್.ಲಕ್ಷ್ಮೀ ಆರೋಪಿಸಿದರು.
ಚಿಟಗುಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ 9 ಜನ ವೈದ್ಯರ ನೇಮಕಕ್ಕೆ ಮಂಜೂರಾತಿ ದೊರೆತಿದ್ದು, 5 ಜನ ಲಭ್ಯವಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೇ ನಿತ್ಯ 3 ಜನ ಸಹ ಆಸ್ಪತ್ರೆಯಲ್ಲಿ ಸೇವೆ ಒದಗಿಸುವುದಿಲ್ಲ. ಜೊತೆಗೆ ಕೊರತೆ ಇರುವಂತಹ ಅವಶ್ಯಕ ಪರಿಕರಗಳನ್ನು ಶೀಘ್ರ ಕಲ್ಪಿಸಬೇಕು ಎಂದು ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಕಾರ್ಯದರ್ಶಿ ರೇಮಾ ಹಂಸರಾಜ ಆಗ್ರಹಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷೆ ಇಸ್ಸಾ ಬೇಗಂ, ಮಂಗಲಾ, ಮಂಜುಳಾ, ಶೋಭಾ, ಮಹೆಬೂಬಾ ಬೇಗಂ, ಈಶ್ವರಮ್ಮ, ಮುಮತಾಜ, ಸತ್ಯಭಾಮಾ, ಉರ್ಮಿಳಾ, ರೇಖಾ ಹಮೀಲಪೂರ, ರುಕ್ಮಿಣಿ, ಸುನಿತಾ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.