Advertisement
ದುರಂತ ಕಲಿಸಿತ್ತು ಪಾಠಇಲ್ಲಿನ ಸೀತಾನದಿ ಕೆಳಕೇರಿ ಮತ್ತು ಸಾಲಿಗ್ರಾಮ ಪ.ಪಂ. ವ್ಯಾಪ್ತಿಯ ಗುಂಡ್ಮಿ ತಗ್ಗಿನಬೆ„ಲು ಮಧ್ಯದಲ್ಲಿ ಹರಿಯುತ್ತದೆ ಹಾಗೂ ಕೋಡಿ ನಿವಾಸಿಗಳ ಹತ್ತಾರು ಎಕ್ರೆ ಗದ್ದೆ ಗುಂಡ್ಮಿ ತಗ್ಗಿನಬೈಲಿನಲ್ಲಿದ್ದು ಕೃಷಿ ಚಟುವಟಿಕೆಗಾಗಿ ತುಂಬಿ ಹರಿಯುವ ಹೊಳೆ ದಾಟಬೇಕಾಗಿತ್ತು. ಹೀಗೆ 10 ವರ್ಷದ ಇಲ್ಲಿನ ಕೃಷಿಕ ಮಹಿಳೆಯರು ನದಿಯನ್ನು ದಾಟಿ ನೆಲಗಡಲೆ ಬೆಳೆಯನ್ನು ಕಿತ್ತು, ವಾಪಾಸಾಗುತ್ತಿರುವಾಗ ನದಿಯ ಸೆಳೆತಕ್ಕೆ ಸಿಲುಕಿ ಇಬ್ಬರು ಮƒತಪಟ್ಟಿದ್ದರು ಮತು ಮೂರ್‍ನಾಲ್ಕು ಮಂದಿಯನ್ನು ಸ್ಥಳೀಯರು ರಕ್ಷಿಸಿದ್ದರು. ದುರಂತದ ಅನಂತರ ಸೇತುವೆಗಾಗಿ ಹೋರಾಟ ತೀವ್ರಗೊಂಡಿತ್ತು. ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ ಸ್ಥಳೀಯ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ರಾಜ್ಯ ಯೋಜನಾ ಅನುಷ್ಠಾನ ಘಟಕ ಮತ್ತು ಚಂಡಮಾರುತ ಉಪಶಮನ ಯೋಜನೆಯ ಮೂಲಕ ಸೇತುವೆಗೆ ಹಣ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರವಾಸಿತಾಣವಾಗಿ
ಸರಿಯಾದ ಸಂಪರ್ಕ ವ್ಯವಸ್ಥೆ ಇಲ್ಲದಿರುವುದರಿಂದ ಈ ಭಾಗದ ಕೃಷಿಚಟುಟವಿಕೆಗೆ ಸಾಕಷ್ಟು ಹಿನ್ನಡೆಯಾಗಿತ್ತು ಹಾಗೂ ಹಲವು ಎಕ್ರೆ ಗದ್ದೆ ಹಡಿಲು ಹಾಕಲಾಗಿತ್ತು. ಇದೀಗ ಸೇತುವೆ, ರಸ್ತೆ ನಿರ್ಮಾಣವಾಗುತ್ತಿರುವುದರಿಂದ ಕೃಷಿಚಟುವಟಿಕೆಗೆ ಸಹಾಯವಾಗಲಿದೆ ಮತ್ತು ಈ ಪ್ರದೇಶ ಸುತ್ತಲು ಹಸಿರು ಹಾಗೂ ನೀರಿನಿಂದ ಕೂಡಿದ್ದು ಅತ್ಯಂತ ರಮಣೀಯ ಪ್ರಕೃತಿ ಸೌಂದರ್ಯವನ್ನು ಹೊಂದಿದೆ ಹೀಗಾಗಿ ಪ್ರವಾಸಿ ತಾಣವಾಗಿಯೂ ಮುಂದೆ ಅಭಿವೃದ್ಧಿ ಹೊಂದುವ ಅವಕಾಶವಿದೆ. ಸಾಲಿಗ್ರಾಮ ಸಂಪರ್ಕ ಹತ್ತಿರ
ಸೇತುವೆ ನಿರ್ಮಾಣವಾದ ಮೇಲೆ ಕೋಡಿ ಕನ್ಯಾಣ ಭಾಗದವರು ಸಾಲಿಗ್ರಾಮ ಭಗವತಿ ರಸ್ತೆಯ ಮೂಲಕ ಡಿವೈನ್ ಪಾರ್ಕ್ ಹಾಗೂ ಸಾಲಿಗ್ರಾಮವನ್ನು ಸುಮಾರು 2 ಕಿ.ಮೀ ಹತ್ತಿರದಿಂದ ಸಂಪರ್ಕಿಸಬಹುದಾಗಿದೆ.
Related Articles
ಈ ಭಾಗದಲ್ಲಿ ಸೇತುವೆ ನಿರ್ಮಾಣವಾಗಬೇಕು ಎನ್ನುವುದು ನಮ್ಮೂರಿನ ಜನರ ಹಲವು ವರ್ಷಗಳ ಬೇಡಿಕೆಯಾಗಿದೆ. ಇದೀಗ ಸ್ಥಳೀಯ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರ ಸಹಕಾರದಿಂದ ಈ ಕನಸು ನನಸಾಗಿದ್ದು ಊರಿನವರಿಗೆ ಸಂತಸ ತಂದಿದೆ.
-ಉದಯ ಕಾಂಚನ್ ಕೋಡಿ,
ಸ್ಥಳೀಯ ನಿವಾಸಿ
Advertisement
ಶೀಘ್ರ ಕಾಮಗಾರಿರಾಜ್ಯ ಯೋಜನಾ ಅನುಷ್ಠಾನ ಘಟಕ ಮತ್ತು ಚಂಡಮಾರುತ ಉಪಶಮನ ಯೋಜನೆಯ ಅನುದಾನದಲ್ಲಿ 13.55ಕೋಟಿ ವೆಚ್ಚದಲ್ಲಿ ಸೇತುವೆ, ರಸ್ತೆಗೆ ಹಣ ಬಿಡುಗಡೆಯಾಗಿ ಟೆಂಡರ್ ಆಗಿದೆ. ಕಾಮಗಾರಿ ಶೀಘ್ರ ಆರಂಭಗೊಳ್ಳಲಿದೆ.
-ಹರೀಶ್,
ಕಿರಿಯ ಕಾರ್ಯನಿರ್ವಾಹಕ ಎಂಜಿನಿಯರ್ ಪಿಡಬ್ಲೂéಡಿ