Advertisement

Namma metro: ಮೆಟ್ರೋ ರೈಲಿನಲ್ಲೇ ಮದುವೆ ಮಂಟಪಕ್ಕೆ ಬಂದ ಮದುಮಗಳು

12:48 PM Jan 28, 2024 | Team Udayavani |

ಬೆಂಗಳೂರು: ಮದುವೆ ದಿಬ್ಬಣ ಎಂದರೆ ಅದ್ದೂರಿ ಕಾರು, ವೈಭವೋಪೇತ ರೀತಿಯಲ್ಲಿ ಅಲಂಕಾರ… ಹೀಗೆ ಹಲವು ಲೆಕ್ಕಾಚಾರಗಳು ನಡೆದಿರುತ್ತವೆ. ಆದರೆ, ಬೆಂಗಳೂರಿನಲ್ಲಿ ಮದುಮಗಳೊಬ್ಬಳು ಸಂಚಾರ ದಟ್ಟಣೆಯ ಜಂಜಾಟವೇ ಬೇಡ ಎಂಬ ಕಾರಣಕ್ಕೆ ಕುಟುಂಬ ಸದಸ್ಯರ ಜತೆಗೆ ಮೆಟ್ರೋದಲ್ಲಿ ತೆರಳಿದ್ದಾರೆ. ಈ ಮೂಲಕ ಸಮಯಕ್ಕೆ ಸರಿಯಾಗಿ ಮದುವೆ ನಡೆಯುವ ಮಂಟಪ ತಲುಪಿದ್ದಾರೆ.  ಅವರ ಸರಳತೆಗೆ ಎಕ್ಸ್‌ ಖಾತೆಯಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಫಾರೆವರ್‌ ಬೆಂಗಳೂರು ಎಂಬ ಎಕ್ಸ್‌ ಖಾತೆಯಲ್ಲಿ ಜ.16ರಂದೇ ಈ ವಿಡಿಯೋ ಅಪ್‌ಲೋಡ್‌ ಆಗಿದ್ದು, 19 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿದೆ.

Advertisement

ಸಾಂಪ್ರದಾಯಿಕವಾಗಿ ಇರುವ ಮದುವೆ ದಿಬ್ಬಣ ಎಂಬ ವಿಚಾರವನ್ನೇ ಬೆಂಗಳೂರಿನ ಸಂಚಾರ ದಟ್ಟಣೆಗೆ ಅನ್ವಯವಾಗುವಂತೆ ಬದಲು ಮಾಡಬೇಕು ಎಂದು ಕೆಲವರು ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಮೌಲ್ಯಯುತವಾಗಿರುವ ಚಿನ್ನದ ಆಭರಣಗಳನ್ನು ಧರಿಸಿ ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದನ್ನು ಹಲವರು ಮೆಚ್ಚಿಕೊಂಡಿದ್ದಾರೆ.

ಎಕ್ಸ್‌ ಖಾತೆಯಲ್ಲಿರುವವರೊಬ್ಬರು “ನೌ ಸ್ಕ್ರೀನಿಂಗ್‌ ಮೆಟ್ರೋವಾಲೆ ದುಲ್ಹನಿಯಾ ಲೇ ಜಾಯೇಂಗೇ’ ಎಂದು ಬರೆದುಕೊಂಡಿದ್ದಾರೆ. ಮದುವೆಯಾದ ಬಳಿಕ ಪತಿಯ ಜತೆಗೆ ಸುಖವಾದ ಜೀವನ ನಡೆಸಲಿದ್ದಾರೆ ಮತ್ತೂಬ್ಬರು ಶುಭ ಹಾರೈಸಿದ್ದಾರೆ. ಆಕೆಯನ್ನು ಸ್ಮಾರ್ಟ್‌ ಮದು ಮಗಳು ಎಂದು ಕೊಂಡಾಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next