Advertisement

ಕಲೆಯ ಉಳಿವಿಗೆ ಭ್ರಾಮರಿ ಸಂಸ್ಥೆ ಮಹತ್ತರ ಕೊಡುಗೆ: ಪಾಂಡು ಶೆಟ್ಟಿ

01:30 PM Aug 07, 2019 | Team Udayavani |

ಮುಂಬಯಿ, ಆ. 6: ಭ್ರಾಮರಿ ಯಕ್ಷನೃತ್ಯ ಕಲಾನಿಲಯ ಚಾರಿಟೆಬಲ್ ಟ್ರಸ್ಟ್‌ ಮುಂಬಯಿ ಇದರ ದಶಮಾನೋತ್ಸವ ಸರಣಿ ಕಾರ್ಯಕ್ರಮ ಅಂಗವಾಗಿ ವಸಾಯಿ ನಾಲಸೋಪಾರ ಹಾಗೂ ವಿರಾರ್‌ ಪರಿಸರದ ಕಲಾಭಿಮಾನಿಗಳ ಸಹಕಾರದೊಂದಿಗೆ ಕಲಾ ಪ್ರಕಾಶ ಪ್ರತಿಷ್ಠಾನ ಮುಂಬಯಿ ಇದರ ಸಂಯೋಜನೆಯಲ್ಲಿ ಊರಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಭೀಷ್ಮ ಪರ್ವ ಎಂಬ ಕನ್ನಡ ಯಕ್ಷಗಾನ ತಾಳಮದ್ದಳೆಯು ಆ. 5ರಂದು ಸಂಜೆ ವಸಾಯಿ ಪಶ್ಚಿಮದ ಗೋಲ್ಡ್ ಕಾಯಿನ್‌ ಟೆರೆಸ್‌ ಹಾಲ್ನಲ್ಲಿ ಜರಗಿತು.

Advertisement

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಸಾಯಿ ಕರ್ನಾಟಕ ಸಂಘದ ಅಧ್ಯಕ್ಷ ಪಾಂಡು ಎಲ್. ಶೆಟ್ಟಿ ಮಾತನಾಡಿ, ಮುಂಬಯಿ ಮಹಾನಗರದಲ್ಲಿ ಕಳೆದ 10 ವರ್ಷಗಳ ಆಂಗ್ಲ ಮಾಧ್ಯಮದಲ್ಲಿ ಕಲಿಯುತ್ತಿರುವ ತುಳು ಕನ್ನಡಿಗರ ಮಕ್ಕಳಿಗೆ ಯಕ್ಷಗಾನ ನೃತ್ಯ ತರಬೇತಿ ನೀಡುತ್ತಿರುವ ಭ್ರಾಮರಿ ಯಕ್ಷನೃತ್ಯ ಕಲಾನಿಲಯ ಚಾರಿಟೇಬಲ್ ಟ್ರಸ್ಟ್‌ ಯಕ್ಷಗಾನವನ್ನು ಉಳಿಸಿ ಬೆಳೆಸುವ ಮಹತ್ತರ ಕಾರ್ಯಗಳನ್ನು ಮಾಡಿ ತೋರಿಸಿದೆ. ಪರಿಶುದ್ದ ಭಾಷಾ ಜ್ಞಾನದೊಂದಿಗೆ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಯಕ್ಷಗಾನ ಬದುಕಿನ ದಾರಿ ದೀಪವಾಗಿದೆ. ನಾಡು ನುಡಿಯ ವಿವಿಧ ಕಲಾ ವೈಭವಗಳನ್ನು ಉಳಿಸುವ ಧ್ಯೇಯ ನಮ್ಮದಾಗಲಿ ಎಂದು ನುಡಿದು ಶುಭಹಾರೈಸಿದರು.

ಭ್ರಾಮರಿ ಯಕ್ಷನೃತ್ಯ ಕಲಾನಿಲಯದ ಸರ್ವಾಂಗೀಣ ಅಭಿವೃದ್ಧಿಗೆ ದುಡಿಯುತ್ತಿರುವ ಸಂಘಟಕ, ಕಲಾವಿದ, ಶ್ರೇಷ್ಠ ಕಾರ್ಯಕ್ರಮ ನಿರೂಪಕ ಸಂಸ್ಥೆಯ ಕಾರ್ಯದರ್ಶಿ ವಿಜಯ ಪಿ.ಶೆಟ್ಟಿ ಕುತ್ತೆತ್ತೂರು ಅವರನ್ನು ವೇದಿಕೆಯ ಗಣ್ಯರ ಸಮ್ಮುಖದಲ್ಲಿ ಸ್ಮರಣಿಕೆ, ಶಾಲು, ಫಲಪುಷ್ಪದೊಂದಿಗೆ ಸಮ್ಮಾನಿಸಲಾಯಿತು. ಯಕ್ಷಗುರು, ಸಂಸ್ಥೆಯ ಟ್ರಸ್ಟಿ ಕಟೀಲು ಸದಾನಂದ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಮ್ಮಾನಿತರನ್ನು ಪರಿಚಯಿಸಿದರು.

ಗೌರವ ಕಾರ್ಯದರ್ಶಿ ವಿಜಯ ಪಿ. ಶೆಟ್ಟಿ ಕುತ್ತೆತ್ತೂರು ಅವರು ಗಣ್ಯರನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ಬಂಟರ ಸಂಘ ಮುಂಬಯಿ ವಸಾಯಿ ಡಹಾಣು ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಜಯಂತ ಆರ್‌. ಪಕ್ಕಳ, ವಸಾಯಿ ಶ್ರೀ ಕಟೀಲು ಯಕ್ಷಕಲಾ ವೇದಿಕೆಯ ಉಪ ಕಾರ್ಯಾಧ್ಯಕ್ಷ ದೇವೆಂದ್ರ ಬುನ್ನನ್‌, ವಸಾಯಿ ಶ್ರೀ ಗುರುನಾರಾಯಣ ಸೇವಾ ಸಮಿತಿಯ ಕಾರ್ಯದರ್ಶಿ ಒ. ಪಿ. ಪೂಜಾರಿ, ಕಲಾಪೋಷಕ ಮೋಹನ್‌ ಶೆಟ್ಟಿ, ಭ್ರಾಮರಿ ಯಕ್ಷನೃತ್ಯ ಕಲಾ ನಿಲಯ ಅಧ್ಯಕ್ಷೆ ಸುಶೀಲಾ ಸಿ. ಶೆಟ್ಟಿ, ಉಪಾಧ್ಯಕ್ಷೆ ಸುಮತಿ ಆರ್‌. ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಯಶೋಧರ ಕೋಟ್ಯಾನ್‌, ಮೋಹಿನಿ ಮಲ್ಪೆ, ಅನಿತಾ ಡಿ. ಬುನ್ನನ್‌ ಮೊದಲಾದವರು ಸಹಕರಿಸಿದರು. ಕಲಾ ಸಂಘಟಕ ಪ್ರಕಾಶ್‌ ಶೆಟ್ಟಿ ಸುರತ್ಕಲ್ ಅವರ ಆಯೋಜನೆಯಲ್ಲಿ ಭೀಷ್ಮಪರ್ವ ಎಂಬ ಕನ್ನಡ ಯಕ್ಷಗಾನ ತಾಳಮದ್ದಳೆಯಲ್ಲಿ ಭಾಗವತರಾಗಿ ರವಿಚಂದ್ರ ಕನ್ನಡಿಕಟ್ಟೆ, ಅತಿಥಿ ಭಾಗವತರಾಗಿ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ, ಚೆಂಡೆ ವಾದಕರಾಗಿ ಗಣೇಶ್‌ ಮಯ್ಯ ವರ್ಕಾಡಿ, ಮದ್ದಳೆ ವಾದಕರಾಗಿ ದಯಾನಂದ್‌ ಶೆಟ್ಟಿಗಾರ್‌ ಮಿಜಾರು ಅವರು ಉಪಸ್ಥಿತರಿದ್ದರು. ಅರ್ಥಧಾರಿಗಳಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್, ಜಬ್ಟಾರ್‌ ಸಮೋ ಸಂಪಾಜೆ, ಗಣೇಶ್‌ ಶೆಟ್ಟಿ ಕನ್ನಡಿಕಟ್ಟೆ ಮತ್ತು ಸುರೇಶ್‌ ಶೆಟ್ಟಿ ನಂದ್ರೊಳ್ಳಿ ಅವರು ಸಹಕರಿಸಿದ್ದರು.

ಖ್ಯಾತ ಅರ್ಥಧಾರಿ ಜಬ್ಟಾರ್‌ ಸಮೋ ಸಂಪಾಜೆ ಅವರು ಧರ್ಮಗಳ ಒಳ ತಿರುಳನ್ನು ಸೂಕ್ಷ್ಮವಾಗಿ ವಿವರಿಸಿ, ಮಾನವ ಧರ್ಮ ಶ್ರೇಷ್ಠ ಎಂದು ಅರ್ಥಗರ್ಭಿತವಾಗಿ ಸಾರಿ ತಾಳಮದ್ದಳೆಯ ಮೌಲ್ಯ ಹೆಚ್ಚಿಸಿದ್ದಾರೆ. ಅವರ ಅಗಾಧವಾದ ಜ್ಞಾನದ ಪಥ ಉದಯೋನ್ಮಖ ಕಲಾವಿದರಿಗೆ ಅನಿವಾರ್ಯವಾಗಿದೆ – ವಿಶ್ವನಾಥ ಪಿ. ಶೆಟ್ಟಿ (ವಸಾಯಿ ಕಲಾಪೋಷಕ, ಉದ್ಯಮಿ,).
ಸಂಸ್ಕೃತಿಯ ಬೆಳೆವಣಿಗೆಯಲ್ಲಿ ಯಕ್ಷಗಾನದ ಯೋಗದಾನ ಮಹತ್ತರವಾಗಿದೆ. ಯಕ್ಷ ಗುರು ಕಟೀಲು ಸದಾನಂದ ಶೆಟ್ಟಿ ಅವರು ಗೆಜ್ಜೆಯ ನಾದವನ್ನು ಹೆಜ್ಜೆಯ ಮುಖಾಂತರ ನಗರ ಉಪನಗರಗಳಲ್ಲಿ ಪಸರಿಸಿ ಭ್ರಾಮರಿ ಯಕ್ಷನೃತ್ಯ ಕಲಾನಿಲಯದ ಅದ್ವಿತೀಯ ಸಾಧನೆಯನ್ನು ಲೋಕಾರ್ಪಣೆಗೊಳಿಸಿದ್ದಾರೆ – ಕರ್ನೂರು ಶಂಕರ ಆಳ್ವ (ಗೌರವಾಧ್ಯಕ್ಷರು: ಮಣಿಕಂಠ ಸೇವಾ ಸಮಿತಿ ವಸಾಯಿ).
Advertisement
Advertisement

Udayavani is now on Telegram. Click here to join our channel and stay updated with the latest news.

Next