ತುಮಕೂರು: ಶೈಕ್ಷಣಿಕ ನಗರ ತುಮಕೂರು ಈಗ ಸ್ಮಾರ್ಟ್‌ಸಿಟಿಯಾಗಿ ಬದಲಾಗುತ್ತಿದ್ದು, ಪದೇ ಪದೆ ವಿವಿಧ ಕಾಮಗಾರಿಗಳಿಗೆ ರಸ್ತೆ ಅಗೆಯದಂತೆ ಟೆಂಡರ್ ಶ್ಯೂರ್ (ಸ್ಮಾರ್ಟ್ ರೋಡ್) ಮಾಡುವ ಯೋಜನೆ ಯನ್ನು ಸ್ಮಾರ್ಟ್‌ಸಿಟಿ ಲಿಮಿಟೆಡ್ ವಿನ್ಯಾಸಗೊಳಿಸಿದೆ.
ಒಟ್ಟು 14.75 ಕಿ.ಮೀ. ಉದ್ದವಿದ್ದು, 150.69 ಕೋಟಿ ರೂ. ವೆಚ್ಚದ 5 ಪ್ಯಾಕೇಜ್‌ಗಳಲ್ಲಿ ಕಾಮ ಗಾರಿಗಳಿಗೆ ಚಾಲನೆ ದೊರೆತಿದೆ. ಕೇಬಲ್, ನೀರಿನ ಪೈಪ್, ಗ್ಯಾಸ್ ಸಂಪರ್ಕ, ಮತ್ತಿತರ ತಾಂತ್ರಿಕ ಕಾರಣ ದಿಂದ ಹಲವು ಬಾರಿ ರಸ್ತೆ ಅಗೆಯುವುದು, ತೇಪೆ ಹಾಕಲಾಗುತ್ತಿದೆ. ಹೀಗಾಗಿ ಕಾಮಗಾರಿ ನಡೆಯು ವಾಗಲೇ ಭವಿಷ್ಯದ ಬಗ್ಗೆ ಯೋಚಿಸಿ ಪೂರಕ ವ್ಯವಸ್ಥೆ ಒದಗಿಸಬೇಕು.
ರಸ್ತೆ ಪದೇಪದೆ ಅಗೆಯಲು ಅವಕಾಶ ಇಲ್ಲದಂತೆ ಅಂತಾರಾಷ್ಟ್ರೀಯ ಗುಣ ಮಟ್ಟದಲ್ಲಿ ವಿನ್ಯಾಸ ಗೊಳಿಸುವ ಯೋಜನೆಯೇ ಟೆಂಡರ್ ಶ್ಯೂರ್. ಜಗತ್ತಿನ ಬಹುತೇಕ ಪ್ರಮುಖ ನಗರಗಳ ರಸ್ತೆಗಳು ಇದನ್ನು ಅಳವಡಿಸಿಕೊಂಡಿದೆ. ಸ್ಮಾರ್ಟ್‌ಸಿಟಿ ಲಿಮಿ ಟೆಡ್‌ನಿಂದ ಸುಮಾರು 150 ಕೋಟಿ ರೂ. ವೆಚ್ಚದಲ್ಲಿ ನಗರದ ವಿವಿಧೆಡೆ ಕೈಗೆತ್ತಿ ಕೊಂಡಿರುವ 17 ಸ್ಮಾರ್ಟ್ ರಸ್ತೆಗಳನ್ನು ಈ ವಿನ್ಯಾಸದಲ್ಲಿ ನಿರ್ಮಿಸ ಲಾಗುವುದು. ಸ್ಮಾರ್ಟ್‌ಸಿಟಿ ಲಿಮಿಟೆಡ್ ಅಧ್ಯಕ್ಷೆ ಡಾ. ಶಾಲಿನಿ ರಜನೀಶ್ ಮಾರ್ಗದರ್ಶನದಲ್ಲಿ ಐಪಿಇ ಗ್ಲೋಬಲ್ ಲಿಮಿಟೆಡ್‌ನ ತಜ್ಞರು ಯೋಜನೆ ಸಿದ್ಧಪಡಿಸಿದ್ದಾರೆ.
ಮಹಾನಗರ ಪಾಲಿಕೆ, ಬೆಸ್ಕಾಂ, ಜಲಮಂಡಳಿ, ಪೊಲೀಸ್ ಇಲಾಖೆಗಳು ಸೇರಿ ಎಲ್ಲ ನಾಗರಿಕ ಸೇವಾ ಸಂಸ್ಥೆಗಳ ಸಮನ್ವಯತೆ ಹಾಗೂ ಸೂಕ್ತ ಮಾರ್ಗ ದರ್ಶನವಿಲ್ಲದೆ ಅಗೆಯುವುದನ್ನು ತಡೆಗಟ್ಟಿ ಪರಿಕಲ್ಪಿತ ರೂಪದಲ್ಲಿ ಸುಂದರವಾಗಿ ನಿರ್ಮಿಸುವುದು ಉದ್ದೇಶವಾಗಿದೆ.
ಏನೇನಿರಲಿದೆ?: ಪಾದಚಾರಿಗಳಿಗೆ ಸಮರ್ಪಕ ಫುಟ್ಪಾತ್ ಸೌಲಭ್ಯ, ಸೈಕಲ್ಗಳಿಗೆ ಪ್ರತ್ಯೇಕ ಮಾರ್ಗ, ದೊಡ್ಡ ವಾಹನ, ಮಧ್ಯಮ ಗಾತ್ರದ ವಾಹನ, ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ಲೇನ್, ಮಾರ್ಗಮಧ್ಯ ವಾಹನಗಳು ರಸ್ತೆಗೆ ನುಗ್ಗದಂತೆ ತಡೆ ನಿರ್ಮಾಣ, ಇ-ಶೌಚಗೃಹ, ಸ್ಮಾರ್ಟ್ ಬಳಸುವ ಸೈಕಲ್ ಮತ್ತು ಇ-ಆಟೋ ನಿಲುಗಡೆ, ಕುಡಿಯುವ ನೀರಿನ ಘಟಕ, ಎಟಿಎಂ, ಸೆನ್ಸಾರ್ ಆಧಾರಿತ ಡಸ್ಟ್‌ಬಿನ್ ಮೊದಲಾದ ವಿಶೇಷತೆ ಇರಲಿದೆ.
ಯುಟಿಲಿಟಿ ಡಕ್ಟ್: ಎಲ್ಲ ಸೇವಾ ಸಂಸ್ಥೆ ಗಳನ್ನೊಳಗೊಂಡ ಏಕಗವಾಕ್ಷಿ ವ್ಯವಸ್ಥೆಯಡಿ ನಾಗರಿಕ ಸೌಲಭ್ಯ ಒದಗಿಸಲು ಕುಡಿಯುವ ನೀರಿನ ಕೊಳವೆ, ಒಳಚರಂಡಿ ಮಾರ್ಗ, ಬೆಸ್ಕಾಂ ಸಂಪರ್ಕ ಜಾಲ, ಆಪ್ಟಿಕಲ್ ಫೈಬರ್ ಕೇಬಲ್, ಬೀದಿ ದೀಪ, ಸಿಗ್ನಲ್ ದೀಪ, ಸಿಸಿ ಟಿ.ವಿ. ಕೇಬಲ್, ಗ್ಯಾಸ್ ಸಂಪರ್ಕ ಜಾಲ ಈ ಎಲ್ಲ ಸೌಲಭ್ಯಗಳಿಗೂ ರಸ್ತೆ ಬದಿಯಲ್ಲಿ ಯುಟಿಲಿಟಿ ಡಕ್ಟ್ (ಸೇವಾ ಸಂಪರ್ಕ ಜಾಲದ ನೆಲದಡಿ ಮಾರ್ಗ)ವ್ಯವಸ್ಥೆ ಕಲ್ಪಿಸುವ ಮಹತ್ವದ ಯೋಜನೆ ಇದಾಗಿದೆ. ಇದರಿಂದ ದುರಸ್ತಿ ಇದ್ದರೂ ರಸ್ತೆ ಅಗೆಯುವ ಪ್ರಮೇಯವೇ ಬರುವುದಿಲ್ಲ. ಸಮಸ್ಯೆ ಇದ್ದಲ್ಲಿ ಡಕ್ಟ್ ತೆರೆದು ದುರಸ್ತಿ ಕೈಗೊಳ್ಳಬಹುದು. ಈ ಸಂಪರ್ಕ ಜಾಲಗಳಿಗೆ ಒಂದರಿಂದ ಮತ್ತೂಂದಕ್ಕೆ ತೊಂದರೆ ಯಾಗದಂತೆ ಸಂಪರ್ಕ ಕಲ್ಪಿಸಲಾಗುತ್ತದೆ.