Advertisement
ದ್ವಿಪಥ ಅಗತ್ಯಬ್ರಹ್ಮಾವರ-ಹೆಬ್ರಿ-ಸೀತಾನದಿ ಸಂಪರ್ಕಿ ಸುವ ಜಿಲ್ಲಾ ಮುಖ್ಯ ರಸ್ತೆ ಇದಾಗಿದ್ದು, ಕನಿಷ್ಠ ಪಕ್ಷ ಬ್ರಹ್ಮಾವರದಿಂದ ನೀಲಾವರ ಕ್ರಾಸ್ ತನಕ/ ಪೇತ್ರಿವರೆಗೆ ಆದರೂ ರಸ್ತೆ ದ್ವಿಪಥಗೊಳಸಬೇಕೆನ್ನುವ ಬೇಡಿಕೆ ಹೆಚ್ಚುತ್ತಿದೆ.
ಬ್ರಹ್ಮಾವರ-ಹೆಬ್ರಿ ರಸ್ತೆಯು ಮುಖ್ಯ ವಾಗಿ ಕುಂಜಾಲು, ಆರೂರು, ನೀಲಾವರ, ಚೇರ್ಕಾಡಿ, ಕುಕ್ಕೆಹಳ್ಳಿ, ಕೊಕ್ಕರ್ಣೆ, ಸಂತೆಕಟ್ಟೆ ಮೊದಲಾದ ಊರುಗಳನ್ನು ಸಂಪರ್ಕಿಸು ತ್ತದೆ. ಸಹಸ್ರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಬ್ರಹ್ಮಾವರದಿಂದ ಹೆಬ್ರಿ ಆಗುಂಬೆ ಮೂಲಕ ಮಲೆನಾಡು ಜಿಲ್ಲೆಗಳಿಗೂ ಈ ರಸ್ತೆ ಸಂಧಿಸುತ್ತದೆ. ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರ, ವಲಯ ಕೃಷಿ ಸಂಶೋಧನಾ ಕೇಂದ್ರ, ಲಿಟ್ಲರಾಕ್ ಸ್ಕೂಲ್, ನೀಲಾವರ ದೇವಸ್ಥಾನ ಮೊದಲಾದ ಸ್ಥಳಗಳನ್ನು ಸಂಪರ್ಕಿಸಲೂ ಇದೇ ರಸ್ತೆ ಬಳಕೆಯಾಗುತ್ತದೆ. ಅಪಾಯಕಾರಿ ಸ್ಥಳ
ಚಾಂತಾರು ರೈಲ್ವೇ ಟ್ರಾÂಕ್ ಸಮೀಪ ತಿರುವು ಮುರುವು ರಸ್ತೆ ಇರುವುದರಿಂದ ಸಂಚಾರ ಅಪಾಯಕಾರಿಯಾಗಿದೆ. ಇತ್ತೀಚೆಗೆ ಈ ಭಾಗದಲ್ಲಿರುವ ಮೋರಿ ವಿಸ್ತರಿಸಿದ್ದರೂ ಆತಂಕ ತಪ್ಪಿದ್ದಲ್ಲ. ಆದ್ದರಿಂದ ರಸ್ತೆ ವಿಸ್ತರಿಸಿ ನೇರಗೊಳಿಸ ಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
Related Articles
Advertisement
ಹೆಚ್ಚಿದ ವಾಹನ ದಟ್ಟಣೆ ಬೆಳಗ್ಗೆ ಹಾಗೂ ಸಂಜೆ ಸಮಯ ಈ ಮಾರ್ಗದಲ್ಲಿ ಅತಿ ವಾಹನ ದಟ್ಟಣೆ ಇರುತ್ತದೆ. ಶಾಲೆಗಳ ನೂರಾರು ಬಸ್, ಖಾಸಗಿ ಬಸ್‌ಗಳು, ಉದ್ಯೋಗ ನಿಮಿತ್ತ ತೆರಳುವವರು ಹೀಗೆ ವಿಪರೀತ ವಾಹನಗಳ ಓಡಾಟವಿರುತ್ತದೆ. ನೀಲಾವರ ಕೂರಾಡಿ ಸಂಪರ್ಕ ಸೇತುವೆ, ಆರೂರು ಬೆಳಾ¾ರು ಸೇತುವೆಯಿಂದ ಗ್ರಾಮಾಂತರ ಭಾಗಗಳು ತ್ವರಿತ ಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದ್ದು ಇದರಿಂದ ವಾಹನ ದಟ್ಟಣೆ ಹೆಚ್ಚಾಗಿದೆ. ಪ್ರಸ್ತಾವನೆ ಇದೆ
ಸ್ಥಳೀಯಾಡಳಿತ ಹಾಗೂ ಲಿಟ್ಲರಾಕ್‌ನಿಂದ ರಸ್ತೆ ವಿಸ್ತರಣೆಗೆ ಮನವಿ ಬಂದಿದೆ. ಹೆಚ್ಚುವರಿ ಅನುದಾನಕ್ಕಾಗಿ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ.
– ಡಿ.ವಿ. ಹೆಗಡೆ,
ಸಹಾಯಕ ಕಾರ್ಯವಾಹಕ ಎಂಜಿನಿಯರ್, ಪಿಡಬ್ಲ್ಯೂಡಿ ಪ್ರವೀಣ್ ಮುದ್ದೂರು