Advertisement

ಪ. ಜಾತಿ, ಪಂಗಡದ ಕುಂದುಕೊರತೆ ಸಭೆ ಬಹಿಷ್ಕಾರ

06:07 PM Apr 01, 2022 | Team Udayavani |

ನೆಲಮಂಗಲ: ಹತ್ತಾರು ವರ್ಷಗಳಿಂದ ಕೆಲವೇ ಸಮಸ್ಯೆ ಚರ್ಚೆ ಮಾಡುವ ಅನಿವಾರ್ಯತೆ ಬಂದಿದ್ದು, ಆ ಸಮಸ್ಯೆಗಳನ್ನು ಬಗೆಹರಿಸಿದ ಮೇಲೆ ಮಾತ್ರ ನಾವು ಸಭೆಗೆ ಬರುತ್ತೇವೆ ಎಂದು ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಕುಂದು ಕೊರತೆ ಸಭೆಯನ್ನು ಎಸ್‌ಸಿ, ಎಸ್‌ಟಿ ಮುಖಂಡರು ಬಹಿಷ್ಕಾರ ಮಾಡಿದರು.

Advertisement

ನಗರದ ತಾಲೂಕು ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಪ. ಜಾತಿ,  ಪಂಗಡದ ಕುಂದು ಕೊರತೆ ಸಭೆಯಲ್ಲಿ ಶಾಸಕ ಡಾ.ಕೆ ಶ್ರೀನಿವಾಸಮೂರ್ತಿ ಮಾತನಾಡಿ, ಸಭೆಯಲ್ಲಿ ಸಮಸ್ಯೆ ಹೇಳಬೇಕು ಕೂಗಾಡಬಾರದು. ಅಧಿಕಾರಿಗಳು ಮುಂದಿನ ಬಾರಿ ಸಭೆಗೆ ಸಮುದಾಯದ ಅರ್ಹ ವ್ಯಕ್ತಿಗಳನ್ನು ಆಹ್ವಾನ ನೀಡ ಬೇಕು. ಸುಖಾ ಸುಮ್ಮನೆ ಎಲ್ಲರನ್ನೂ ಕರೆಸಬೇಡಿ ಎಂದರು.

ಸಮುದಾಯದಲ್ಲಿ ಅನೇಕ ಸಮಸ್ಯೆಗಳಿದ್ದು ಕೆಲವು ಜನರು ಈ ಸಭೆಗಾಗಿ ವರ್ಷದಿಂದ ಕಾದು  ಕುಳಿತಿರುತ್ತಾರೆ. ಬಹಿಷ್ಕಾರದಿಂದ ಅಂತವರಿಗೆ ಸಮಸ್ಯೆ ಆಗಲಿದೆ. ಕೆಲವು ಕುಂದು ಕೊರತೆಗಳು ಬಹಳ ವರ್ಷದಿಂದ ಉಳಿಕೆಯಾಗಿದ್ದು, ತುರ್ತು ಬಗೆಹರಿಸಲು ನಾನು ಜಿಲ್ಲಾಧಿಕಾರಿ ಕರೆಸಿ ಮಾತನಾಡಿಸುವ ಪ್ರಯತ್ನ ಮಾಡಿದೆ. ಆದರೆ, ಸಮುದಾಯದ ಮುಖಂಡರಿಗೆ ತಿಳಿಸಿದರೂ ಬರ ಲಿಲ್ಲ. ಆದರೆ, ಈಗ ಬಹಿಷ್ಕಾರ ಮಾಡುವುದು ಸರಿಯಲ್ಲ ಎಂದರು.

ಮುಖಂಡರಲ್ಲಿ ಗೊಂದಲ: ನಮ್ಮ ಸಮಸ್ಯೆಗಳ ಪರಿಹಾರ ನೀಡದೇ ಸಭೆ ನಡೆಸುತ್ತಿದ್ದಾರೆ ಎಂದು ಘೋಷಣೆ ಕೂಗಿ ಸಭೆಯನ್ನು ಬಹಿಷ್ಕಾರ ಮಾಡಿ ಬಹುಪಾಲು ಮುಖಂಡರು ಹೊರಗೆ ಹೋದರೆ, ಕೆಲ ಮುಖಂಡರು ಮಾತ್ರ ಸಭೆಯಲ್ಲಿ ಅಧಿಕಾರಿಗಳ ಜತೆ ಚರ್ಚೆ ಮಾಡಿ ಸಮಸ್ಯೆ  ಬಗೆ ಹರಿಸುವಂತೆ ಮನವಿ ಮಾಡಿದರು. ಕೆಲ  ಮುಖಂಡರ ಗೊಂದಲದ ನಡೆ ಸಾರ್ವಜನಿಕ ವಲಯದಲ್ಲಿ ಹಾಗೂ ಅಧಿಕಾರಿಗಳ ವಲಯದಲ್ಲಿ ಚರ್ಚೆಗೆ ಕಾರಣವಾಯಿತು.

ಬಹಿಷ್ಕಾರ: ಪ. ಜಾತಿ,ಪಂಗಡದ ಕುಂದು ಕೊರತೆ ಸಭೆಯಲ್ಲಿ ಬಹಳ ವರ್ಷಗಳಿಂದ ಕೆಲವೇ ಸಮಸ್ಯೆಗಳು ಚರ್ಚೆ ಆಗುತ್ತಿದ್ದು, ಅಜೆಂಡಾ ಪಟ್ಟಿಯಲ್ಲಿ ಸರ್ವೆ ನಂ.246 ಸಮಸ್ಯೆ, ಬಾವಿ ಕೆರೆಯಲ್ಲಿ ನಿವೇಶನ ಸಮಸ್ಯೆ, ಸರ್ವೆ ನಂ 8/3 ಸ್ಥಳದ ಸಮಸ್ಯೆ ಹಾಗೂ ವೈನ್‌ಶಾಪ್‌ ಗಳ ಪರವಾನಗೆ ರದ್ದು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಬಗೆಹರಿಸದೇ ಸಭೆ ಮಾಡುತ್ತಿರುವುದು ಸರಿಯಲ್ಲ ತಕ್ಷಣ ಸಮಸ್ಯೆ ಬಗೆಹರಿಸಬೇಕು.

Advertisement

ಅಲ್ಲಿಯವರೆಗೂ ಕುಂದು ಕೊರತೆ ಸಭೆ, ಅಂಬೇಡ್ಕರ್‌ ಜಯಂತಿ, ಬಾಬು ಜಗಜೀವನ್‌ ರಾಮ್‌ ಜಯಂತಿಯನ್ನು ತಾಲೂಕು ಆಡಳಿತದಿಂದ ಮಾಡಬಾರದು ಎಂದು ವಿವಿಧ ಸಂಘಟನೆಯ ಸಮುದಾಯದ ಮುಖಂಡರು ಸಭೆಯನ್ನು ಬಹಿಷ್ಕಾರ ಮಾಡಿ ಕಚೇರಿ ಹೊರಗೆ ಪ್ರತಿಭಟನೆ ಮಾಡಿದರು.

ಅಧಿಕಾರಿಗಳ ತರಾಟೆ: ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇವರು ಮಾಡಿದ್ದರೆ ಸಭೆ ಬಹಿಷ್ಕಾರ ಮಾಡುವ ಅನಿವಾರ್ಯತೆ ಇರಲಿಲ್ಲ. ಕೆಲಸ ಬರದವರು ಬಂದು ಜನರ ಪ್ರಾಣದ ಜತೆ ಚೆಲ್ಲಾಟ ಆಡುತ್ತಾರೆ ಎಂದು ಶಾಸಕ ಡಾ,ಕೆ ಶ್ರೀನಿವಾ ಸ ಮೂರ್ತಿ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡರು. ತಾಪಂ ಇಒ ಮೋಹನ್‌ ಕುಮಾರ್‌,  ವಾಲ್ಮೀಕ ಸಂಘದ ಅಧ್ಯಕ್ಷ ನರಸಿಂಹಮೂರ್ತಿ, ದಲಿತ ಸಂಘಟನೆ ಮುಖಂಡ
ರಾಜಗೋಪಾಲ್‌, ಮಾದಿಗ ಮಹಾಸಭಾ ದ ರಾಜು, ಮರಿವೆಂಕಟ್ಟಪ್ಪ, ಛಲವಾದಿ ನಾಗೇಂದ್ರ, ನರಸಿಂಹಯ್ಯ, ಬೊಮ್ಮನಹಳ್ಳಿನಾಗರಾಜು, ನಾರಾಯಣ ಸ್ವಾಮಿ, ಗಂಗಾಧರ್‌, ಮಹದೇವ್‌, ದೇಗನಹಳ್ಳಿ ನರಸಿಂಹ ಮೂರ್ತಿ, ಮಲ್ಲೇಶ್‌, ರಾಜು ಹಾಗೂ ಮತ್ತಿತರರಿದ್ದರು.

ಸುಖಾಸುಮ್ಮನೆ ಬಹಿಷ್ಕಾರ ಸರಿಯಲ್ಲ: ತಹಶೀಲ್ದಾರ್‌ ಇಷ್ಟು ವರ್ಷ ಸಂಗ್ರಹಿಸಲಾಗದ ದಾಖ ಲಾತಿ ಕ್ರೋಢಿಕರಿಸಿ ಪ್ರಾಮಾಣಿಕವಾಗಿ ಸಮಸ್ಯೆ ಬಗೆಹರಿಸುವ ಕೆಲಸವನ್ನು ಮಾಡಿದ್ದೇವೆ. ಜಿಲ್ಲಾ ಧಿಕಾರಿ, ಶಾಸಕರು ಹಾಗೂ ವಿವಿಧ ಅಧಿಕಾರಿಗಳ ತಂಡ ಬಹಳಷ್ಟು ಪರಿಶ್ರಮ ಪಟ್ಟಿದ್ದಾರೆ. ಕೆಲವು ತೊಂದರೆಗಳಿರುವ ಕಾರಣ ಸಂಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಆದರೆ, ಸುಖಾಸುಮ್ಮನೆ ಮಾಹಿತಿ ಪಡೆಯದೇ ಬಹಿಷ್ಕಾರ ಮಾಡುವುದು ಸರಿಯಲ್ಲ ಎಂದು ತಹಶೀಲ್ದಾರ್‌
ಕೆ.ಮಂಜುನಾಥ್‌ ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next