Advertisement

ಮದ್ಯಪ್ರಿಯರ ಕರುಳು ಚುರುಕ್‌!- ದರ ಶೇ. 20 ಹೆಚ್ಚಳ ಮಾಡಿ ಉತ್ಪಾದನ ಕಂಪೆನಿಗಳ ನಿರ್ಣಯ

12:05 AM Jan 03, 2024 | Team Udayavani |

ಬೆಂಗಳೂರು: ಹೊಸ ವರ್ಷಾಚರಣೆಯ ಮರುದಿನವೇ ಮದ್ಯದ ಮೇಲಿನ ದರವನ್ನು ಶೇ. 20ರಷ್ಟು ಹೆಚ್ಚಳ ಮಾಡಿ ಉತ್ಪಾದನ ಕಂಪೆನಿಗಳು ನಿರ್ಣಯ ಕೈಗೊಂಡಿದ್ದು, ಮದ್ಯಪ್ರಿಯರ ಕರುಳು ಚುರುಕ್‌ ಎನ್ನುವಂತಾಗಿದೆ. ಸರ್ಕಾರದಿಂದ ಯಾವುದೇ ದರ ಏರಿಕೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿರುವ ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ, ಮದ್ಯ ತಯಾರಿಕಾ ಕಂಪೆನಿಗಳು ಬೆಲೆ ಹೆಚ್ಚಳ ಮಾಡಿರಬಹುದು ಎಂದಿದ್ದಾರೆ.

Advertisement

ಇದನ್ನು ಬಾರ್‌ ಮಾಲಕರ ಸಂಘವೂ ಒಪ್ಪಿಕೊಂಡಿದ್ದು, ಈಗಾಗಲೇ ಬಾರ್‌ ಮಾಲೀಕರಿಗೆ ಮದ್ಯ ತಯಾರಿಕಾ ಕಂಪೆನಿಗಳು ದರ ಪರಿಷ್ಕರಣೆಯ ಸಂದೇಶ ನೀಡಿದೆ. ಉತ್ಪಾದನ ವೆಚ್ಚವಾಗಿರುವ ಹಿನ್ನೆಲೆಯಲ್ಲಿ ಈ ತೀರ್ಮಾನಕ್ಕೆ ಬಂದಿರುವುದಾಗಿ ಮದ್ಯ ತಯಾರಿಕಾ ಸಂಸ್ಥೆಗಳು ತಿಳಿಸಿವೆ. ಸುಮಾರು ಶೇ. 20ರಷ್ಟು ದರ ಹೆಚ್ಚಳವಾಗಿದ್ದು, ಪ್ರತೀ ಕ್ವಾರ್ಟರ್‌ಗೆ 20 ರಿಂದ 30 ರೂ. ದರ ಹೆಚ್ಚಳವಾಗಲಿದೆ.

ಮೂರು ಮದ್ಯದ ದರ ಏರಿಕೆ
ಪ್ರತೀ 180 ಎಂಎಲ್‌ ಓಟಿ ದರವು 90 ರೂ. ಗಳಿಂದ 111 ರೂ.ಗೆ ಏರಿಕೆಯಾಗಿದ್ದು, ಬಿಪಿ 110 ರೂ.ಗಳಿಂದ 145 ರೂ. ಮತ್ತು 8ಪಿಎಂ ವಿಸ್ಕಿಯ ದರವು 90ರಿಂದ 110 ರೂ.ಗೆ ಹೆಚ್ಚಳ ಆಗಿದೆ ಎಂದು ಮೂಲಗಳು ಹೇಳಿವೆ.

ಸರಕಾರ ಯಾವುದೇ ಮದ್ಯದ ದರ ಹೆಚ್ಚಿಸಿಲ್ಲ. ನಾವೇನಿದ್ದರೂ ತೆರಿಗೆಯಲ್ಲಿ ಪರಿಷ್ಕರಣೆ ಮಾಡುತ್ತೇವೆ. ಅಬಕಾರಿ ಶುಲ್ಕ ಹೆಚ್ಚಿಸುವುದಿದ್ದರೆ ಮೊದಲೇ ತಿಳಿಸುತ್ತೇವೆ. ಈಗ ಮದ್ಯ ಉತ್ಪಾದಕ ಕಂಪೆನಿಗಳು ದರ ಹೆಚ್ಚಳ ಮಾಡಿರಬಹುದು. ಮದ್ಯ ಮಾರಾಟ ಹೆಚ್ಚಿಸುವ ಗುರಿ ಕೊಟ್ಟಿಲ್ಲ. ಆದರೆ, ಆದಾಯ ಸಂಗ್ರಹಣೆ ಗುರಿ ಇದ್ದೇ ಇರುತ್ತದೆ.

 - ಆರ್‌.ಬಿ. ತಿಮ್ಮಾಪುರ, ಅಬಕಾರಿ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next