Advertisement
ನಗರದಲ್ಲಿ ಏಪ್ರಿಲ್ ತಿಂಗಳಲ್ಲಿ ಗರಿಷ್ಠ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದುವರೆಗೂ 39 ಡಿಗ್ರಿ ಅಥವಾ 38 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗುತ್ತಲೇ ಇದೆ. ಮಳೆ ಬೀಳ ದಿರುವುದು ತಾಪಮಾನ ಕಡಿಮೆಯಾಗದಿರಲು ಕಾರಣ. ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಅಲ್ಲಲ್ಲಿ ಮಳೆ ಯಾಗಿದೆ. ತಾಲೂಕಿನಲ್ಲಿ ಹದ ಮಳೆ ಬಿದ್ದಿಲ್ಲ. ಜಿಲ್ಲಾ ಕೇಂ ದ್ರದಲ್ಲ ಂತೂ 10 ನಿಮಿಷ ಕಾಲ ಸಾಧಾರಣ ಮಳೆ ಯೂ ಸುರಿ ದಿಲ್ಲ. ಮಂಗಳವಾರ ಸಂಜೆ ಒಂದೈದು ನಿಮಿ ಷ ತುಂತು ರು ಮಳೆ ಬಂದು ಆಸೆ ಮೂಡಿಸಿ ಮಾಯ ವಾ ಯಿತು. ಆ ಮಳೆ ಒಂದು ಕಡೆ ಬಿದ್ದಿದೆ. ಇನ್ನೊಂದು ಕಡೆಗೆ ಇಲ್ಲ.
Related Articles
Advertisement
ತಂಪು ಪಾನೀಯ, ಕಲ್ಲಂಗಡಿ ಮಾರಾಟ: ಬೇಸಿಗೆಯ ಬೇಗೆಯನ್ನು ತಣಿಸಿಕೊಳ್ಳಲು ಜನರು ಎಳನೀರು, ತಂಪು ಪಾನೀಯ, ಕಲ್ಲಂಗಡಿ ಹಣ್ಣು, ಮಜ್ಜಿಗೆ, ಐಸ್‌ಕ್ರೀಂ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಇವುಗಳ ಮಾರಾಟ ಹೆಚ್ಚಳವಾಗಿದೆ. ಎಳನೀರಿಗೆ ಡಿಮ್ಯಾಂಡ್ ಹೆಚ್ಚಾಗಿದ್ದು, ನಗರಕ್ಕೆ ಪೂರೈಕೆ ಕಡಿಮೆಯಾಗಿದೆ. ಪ್ರತಿದಿನ ಬಂದ ಲೋಡ್ ಆದಷ್ಟು ಬೇಗನೆ ಖಾಲಿ ಯಾಗುತ್ತಿದೆ. ತಂಪು ಪಾನೀಯದ ಅಂಗಡಿಗಳಲ್ಲಿ 10 ರೂ.ಗಳಿಗೆ ನೀಡುವ ಜ್ಯೂಸ್‌ಗೆ ಭಾರಿ ಬೇಡಿಕೆಯಿದೆ. ಹೆಚ್ಚು ಹಣ ಕೊಡುವ ಶಕ್ತಿಯಿರುವವರು ಮೂಸಂಬಿ, ಕಿತ್ತಳೆ, ಸೇಬು ಹಣ್ಣಿನ ರಸ ಕುಡಿಯುತ್ತಾರೆ.
ಕಲ್ಲಂಗಡಿ ಬೇಡಿಕೆ: ಐಸ್‌ಕ್ರೀಂ ಅಂಗಡಿಗಳಲ್ಲಿ ಮಾರಾಟ ಹೆಚ್ಚಾಗಿದೆ. ಅಮುಲ್, ಜಾಯ್, ಅರುಣ್, ಡೈರಿಡೇ ಮತ್ತಿತರ ಬ್ರಾಂಡ್ ಗಳ ಐಸ್‌ಕ್ರೀಂಗಳು ಗ್ರಾಹಕರ ದೇಹವನ್ನು ತಂಪಾಗಿಸುತ್ತಿವೆ. ಪ್ರತಿ ದಿನ ಲಾರಿಗಳಲ್ಲಿ ಲೋಡ್‌ಗಟ್ಟಲೆ ಕಲ್ಲಂಗಡಿ ನಗರಕ್ಕೆ ಬಂದಿಳಿಯುತ್ತಿದೆ. ಅಷ್ಟೇ ವೇಗವಾಗಿ ಕಲ್ಲಂಗಡಿ ಮಾರಾಟವಾಗುತ್ತಿದೆ. ನಗರದ ಜನರು ಸ್ಥಳದಲ್ಲಿ ಹಣ್ಣನ್ನು ತಿನ್ನುವುದರ ಜೊತೆಗೆ ಒಂದೆರಡು ಹಣ್ಣು ಗಳನ್ನು ಖರೀದಿಸಿ ಮನೆಗೆ ಕೊಂಡೊಯ್ಯುತ್ತಿದ್ದಾರೆ. ಇದರಿಂದ ಕಲ್ಲಂಗಡಿ ಹಣ್ಣಿನ ಬೆಲೆಯೂ ಪ್ರತಿ ಕೆಜಿಗೆ 25 ರಿಂದ 30ರೂ.ವರೆಗೆ ಮಾರಾಟವಾಗುತ್ತಿದೆ. ಮಿಣಕೆ ಹಣ್ಣಿಗೂ ಬೇಡಿಕೆಯಿದೆ. ಬೆಲ್ಲ ಹಾಕಿ ಮಾಡುವ ಮಿಣಕೆ ಹಣ್ಣಿನ ಪಾನಕ ರುಚಿಕರವಾಗಿದ್ದು, ಮಿಣಕೆ ಹಣ್ಣು ತನ್ನದೇ ಆದ ಬೇಡಿಕೆ ಗಳಿಸಿದೆ.
ನಿಂಬೆ ಹಣ್ಣಿನ ಬೆಲೆ ಗಗನಕ್ಕೇರಿದೆ. 10 ರೂ.ಗೆ ನಾಲ್ಕು ದೊರಕುತ್ತಿದ್ದ ದಪ್ಪ ಹಣ್ಣಿಗೆ ಈಗ ಒಂದಕ್ಕೇ 10 ರೂ. ನೀಡಬೇಕಾಗಿದೆ. ಸಣ್ಣ ಗಾತ್ರದ ನಿಂಬೆ ಹಣ್ಣಿಗೆ 5 ರೂ.ಗಳಾಗಿವೆ.
ಕೆ.ಎಸ್. ಬನಶಂಕರ ಆರಾಧ್ಯ